- Sunday
- September 27th, 2026
ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜ. 16ರಿಂದ ಜ.21ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಜ.10 ರಂದು ನೆರವೇರಿತು. ಪೂಜಾ ಕಾರ್ಯಕ್ರಮವನ್ನು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೆರೆವೆರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಪಿ ವೆಂಕಟಕೃಷ್ಣ ರಾವ್, ಜಯಪ್ರಕಾಶ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆಟ್ಟಿನಡ್ಕ ಒಕ್ಕೂಟ ,ಇದರ ಮಾಸಿಕ ಸಭೆ ಮತ್ತು ಕ್ಷೇತ್ರದ ವತಿಯಿಂದ ನಡೆಯುವ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಜ.9 ರಂದು ಕಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಡ್ಕ ,ಇದರ ಆವರಣದ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮಾಹಿತಿ ಇರುವ ಕರಪತ್ರವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ...
ಜ್ಞಾನಮಂದಾರ ಅಕಾಡೆಮಿ ಬೆಂಗಳೂರು, ಇಂಚರ ಸಾಂಸ್ಕೃತಿಕ ಸಂಸ್ಥೆ ಮಂಜೇಶ್ವರ ಆಶ್ರಯದಲ್ಲಿ ಸಂಸ್ಥಾಪಕ ದಿನಾಚರಣೆ 2022ರ ಅಂಗವಾಗಿ ಕರ್ನಾಟಕ ಚೇತನ ಪುರಸ್ಕಾರಕ್ಕೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರ ಸುಳ್ಯದ ಕನ್ನಿಕಾ ಡಿ ಅಂಬೆಕಲ್ಲು ಇವರು ಆಯ್ಕೆಯಾಗಿದ್ದಾರೆ. ಈಕೆ ಸುಳ್ಯದ ಯುವ ನ್ಯಾಯವಾದಿ ಹಾಗೂ ನೋಟರಿ ದಿನೇಶ್ ಅಂಬೆಕಲ್ಲು ಮತ್ತು ಶಿಕ್ಷಕಿ ಪೂರ್ಣಿಮಾ ಮಡಪ್ಪಾಡಿ ಇವರ ಪುತ್ರಿ. ಜೂನ್...
ಉಬರಡ್ಕದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದಲ್ಲಿ ದೇವಸ್ಥಾನದ ಒಳಾಂಗಣ ಹಾಗೂ ಪರಿಸರವನ್ನು ಸುಳ್ಯ ಧರ್ಮಜಾಗೃತಿ ಸಮಿತಿ ಕಾರ್ಯಕರ್ತರು ಸ್ವಚ್ಛತೆಯನ್ನು ಮಾಡಿದರು. ಸಮಿತಿಯ 6 ಮಂದಿ ಕಾರ್ಯಕರ್ತರು, ಮತ್ತು ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡರು.
ಜನರಲ್ ಬಿಪಿನ್ ರಾವತ್ ಹಾಗೂ ಪುನೀತ್ ರಾಜಕುಮಾರ್ ಇವರ ಸ್ಮರಣಾರ್ಥ, ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಮಡಪ್ಪಾಡಿ ಹಾಗೂ ಯುವಕ ಮಂಡಲ (ರಿ) ಮಡಪ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಜ.14 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇದರ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟಕರು...
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಹರಿಯುತ್ತಿರುವ ಹೊಳೆಗೆ ಪ್ರವಾಹ ನಿಯಂತ್ರಣಕ್ಕಾಗಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿಯನ್ನು ಸಚಿವರಾದ ಎಸ್.ಅಂಗಾರ ವೀಕ್ಷಿಸಿದರು. ಈ ತಡೆಗೋಡೆ ನಿರ್ಮಾಣದಿಂದ ವಳಲಂಬೆ ಅಡ್ಡನಪಾರೆ ದೇವ ಸಂಪರ್ಕ ರಸ್ತೆಯು ಅಭಿವೃದ್ಧಿಯಾಗಲಿದೆ. ಈ ಸಂದರ್ಭ ದ.ಕ.ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಅಕ್ರಮ-ಸಕ್ರಮ ಸಮಿತಿ ಸಭೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಮಂಜೂರಾತಿಗೊಂಡ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಸಚಿವರು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ, ಅಕ್ರಮ- ಸಕ್ರಮ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸದಸ್ಯರಾದ ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಾಜೆ ಅಲಡ್ಕ ರಸ್ತೆ ಕಾಂಕ್ರೀಟೀಕರಣ ಉದ್ಘಾಟನಾ ಕಾರ್ಯಕ್ರಮ ಜ.11 ರಂದು ನಡೆಯಿತು. ಉದ್ಘಾಟನೆಯನ್ನು ಸಂಪಾಜೆ ಸೊಸೈಟಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಮಹಮದ್ ಕುಂಚಿ ಗೂನಡ್ಕ, ಜಗದೀಶ್ ರೈ, ಉಮ್ಮರ್...
ಕಡಬ ತಾಲೂಕು ಕೇನ್ಯ ಗ್ರಾಮದಲ್ಲಿ ನೂತನ ಮಹಿಳಾ ಮಂಡಲ ಅಸ್ತಿತ್ವಕ್ಕೆ ಬಂದಿದ್ದು ಜ.10 ರಂದು ಕೇನ್ಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ಶ್ರೀಮತಿ ಮಮತಾ. ಎಸ್. ಶೆಟ್ಟಿ , ಸ್ಥಾಪಕಾಧ್ಯಕ್ಷರಾಗಿ ಶ್ರೀಮತಿ ತಾರಾ. ಬಿ. ರೈ ಬಿರ್ಕಿ ಮತ್ತು ಕಾರ್ಯದರ್ಶಿಯಾಗಿ ಶ್ರೀಮತಿ ಸಾತ್ವಿಕ. ಪಿ. ನರಿಯಂಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಮತಿ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆಸಲ್ಪಡುವ ಶ್ರಧ್ಧಾಕೇಂದ್ರ ಸ್ವಚ್ಚತಾ ಕಾರ್ಯಕ್ರಮದಡಿಯಲ್ಲಿ ಸ್ವಸಹಾಯ ಹಾಗೂ ಪ್ರಗತಿಬಂಧು ತಂಡದ ಸದಸ್ಯರಿಂದ ವಳಲಂಬೆಯಲ್ಲಿ ದೇವಸ್ಥಾನ ಸ್ವಚ್ಚತಾಕಾರ್ಯ ನಡೆಯಿತು. ಮುಂಬರುವ ಜಾತ್ರಾ ದಿನದ ಅಂಗವಾಗಿ ದೇವಳದ ಪರಿಸರ ಸ್ವಚ್ಚಗೊಳಿಸುವ ಕಾರ್ಯದಲ್ಲಿ ಸದಸ್ಯರು ಪಾಲ್ಗೊಂಡರು. ಗ್ರಾಮಾಭಿವೃದ್ಧಿ ವಲಯ ಮೇಲ್ವಿಚಾರಕ ಮುರಳೀದರ್, ಸೇವಾ ಪ್ರತಿನಿಧಿಗಳಾದ ಲೋಕೇಶ್ವರ ಡಿ.ಆರ್, ಹರೀಶ್ ಕುಳ್ಳಂಪಾಡಿ, ಲೋಕೇಶ್ವರಿ...
Loading posts...
All posts loaded
No more posts
