ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಪ್ರಥಮ ಬಾರಿಗೆ ಸಂಭ್ರಮಿಸಿದ “ಸ್ನೇಹ ಸಂಭ್ರಮ”

1963 ರಲ್ಲಿ ಸ್ಥಾಪನೆಯಾದ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಾರಿಗೆ 2005ನೇ ಸಾಲಿನ ವಿದ್ಯಾರ್ಥಿಗಳು 20 ವರ್ಷಗಳ ನಂತರ ಒಂದುಗೂಡಿ ಆಯೋಜಿಸಿದ ಸ್ನೇಹ ಸಂಭ್ರಮ ಹಾಗೂ ಶ್ರೀ ಜ್ಞಾನದೀಪ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವೂ ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ನಂದಾ ಹರೀಶ್ ಇವರ ಅದ್ಯಕ್ಷತೆಯಲ್ಲಿ ಮೇ.11ರಂದು ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿನ ಬೆಳ್ಳಿ...

ಪ್ರದೀಪ್ ಕ್ರಾಫ್ಟ್ ವರ್ಕ್ ಸಂಸ್ಥೆಯ ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಸನ್ಮಾನ

ಕೊಡಗಿನ ಗಡಿ ಗ್ರಾಮ ಕರಿಕೆ ಪ್ರೌಢಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ(567) ಗಳಿಸಿದ ವಿದ್ಯಾರ್ಥಿ ಆದಿತ್ಯ ಸತ್ಯನಾಥ್ ಇವರನ್ನು ಪ್ರದೀಪ್ ಕ್ರಾಫ್ಟ್ ವರ್ಕ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸರ್ಕಾರಿ ಶಾಲೆಗಳ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆಯು ಈ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದಿತ್ಯ ಸತ್ಯನಾಥ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ...
Ad Widget

ಮುದ್ದು ಮಕ್ಕಳ ನೆಚ್ಚಿನ ಶಿಕ್ಷಕಿಯರಾಗಲು ಇಲ್ಲಿದೆ ಅವಕಾಶ – ಬೆಳ್ಳಾರೆ ಜ್ಞಾನದೀಪದಲ್ಲಿ ನರ್ಸರಿ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ

ಜ್ಞಾನದ ಜಗತ್ತನ್ನು ಏರುವ ಮೊದಲ ಮೆಟ್ಟಿಲು ಪೂರ್ವ ಪ್ರಾಥಮಿಕ ಶಿಕ್ಷಣ, ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರ ಬರುತ್ತಿರುವ ಪುಟಾಣಿಗಳಿಗೆ ಶಿಕ್ಷಣ ನೀಡುವ ಕಾಯಕವನ್ನು ಮೊಂಟೆಸ್ಸರಿ/ನರ್ಸರಿ ಶಿಕ್ಷಕೀಯರೇ ಮಾಡಬೇಕಿದೆ. ಸದ್ದಿಲ್ಲದೇ ನಡೆಯುತ್ತಿರುವ ಶಿಕ್ಷಣ ಸೇವೆಯ ಜೊತೆಗೆ ತನ್ನ ಉತ್ಕೃಷ್ಟ ತರಬೇತಿಯೊಂದಿಗೆ ಇಂತಹ ಅನೇಕ ಮೊಂಟೆಸ್ಸರಿ ಶಿಕ್ಷಕಿಯರನ್ನು ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಅಧಿಕ ಭಕ್ತಾಧಿಗಳು

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಇಂದು(ಮೇ.16) ಶನಿವಾರದಂದು ಸುಮಾರು 500ಕ್ಕೂ ಅಧಿಕ ಭಕ್ತಾಧಿಗಳು ಶ್ರೀ ದೇವರ ದರ್ಶನಕ್ಕೆ ಆಗಮಿಸಿದ್ದು, ಶನಿಪೂಜೆ, ರುದ್ರಾಭಿಷೇಕ, ಹಾಲು-ಪಾಯಸ, ಅವಲಕ್ಕಿ-ಪಂಚಕಜ್ಜಾಯ ಮುಂತಾದ ಸೇವೆಗಳೊಂದಿಗೆ ಮದ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡು ಶ್ರೀದೇವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಶ್ರೀ ದೇವಳದ ಪ್ರಧಾನ...

ಕುಕ್ಕೆ ರಥ ಬೀದಿಯಲ್ಲಿ ಭಕ್ತ ಜನ ಜಂಗುಳಿ

ಸುಬ್ರಹ್ಮಣ್ಯ ಮೇ 16: ಬೇಸಿಗೆ ರಜಾ ದಿನ, ಪ್ರವಾಸಿ ತಾಣಗಳು, ದೇವಸ್ಥಾನ ಇತ್ಯಾದಿಗಳಲ್ಲಿ ಈ ಸಮಯದಲ್ಲಿ ಜನಜಂಗುಳಿ ಇರುವುದು ಸರ್ವೇಸಾಮಾನ್ಯ ಅದೇ ರೀತಿ ದೇಶದ ಪ್ರತಿಷ್ಠಿತ ಪುಣ್ಯಕ್ಷೇತ್ರ ರಾಜ್ಯದ ಮುಜರಾಯಿ ಇಲಾಖೆಯಲ್ಲಿ ಆದಾಯದಲ್ಲಿ ನಂಬರ್ ವನ್ ಆಗಿರುವ ನಾಗಾರಾಧನೆಯ ಪುಣ್ಯಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶನಿವಾರ ಅತ್ಯಧಿಕ ಜನಸಂಖ್ಯೆಯ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ,...

ಐನೆಕಿದು : ಕಟ್ರಮನೆ ಕುಟುಂಬಸ್ಥರ ದೈವಗಳ ಪ್ರತಿಷ್ಠೆ

ಸುಬ್ರಹ್ಮಣ್ಯ ಮೇ.15 : ಐನೆಕಿದು ಗ್ರಾಮದ ಕಟ್ರಮನೆ ಕುಟುಂಬಸ್ಥರ ಧರ್ಮದೈವ, ರುದ್ರ ಚಾಮುಂಡಿ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಕಾರ್ಯಕ್ರಮಗಳು ಮೇ.14ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಯಜಮಾನರಾದ ಜನಾರ್ದನ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದು, ಶ್ರೀದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ಇಂದಿನ(ಮೇ 16) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ – ಕಾಳುಮೆಣಸು ಮತ್ತು ರಬ್ಬರ್ ಧಾರಣೆಯಲ್ಲಿ ಅಲ್ಪ ಇಳಿಕೆ ; ಅಡಿಕೆ ಧಾರಣೆಯಲ್ಲಿ ಸ್ಥಿರತೆ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 16 ಮೇ 2026ವಾರ : ಶನಿವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 16) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ :440 ರಿಂದ 470ಹಳೆ...

ಗುತ್ತಿಗಾರು : ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ವಾರ್ಷಿಕ ಸಭೆ – ಅಧ್ಯಕ್ಷರಾಗಿ ಮಿತ್ರದೇವ ಮಡಪ್ಪಾಡಿ ಪುನರಾಯ್ಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಗುತ್ತಿಗಾರು ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ವಾರ್ಷಿಕ ಸಭೆ ಗುತ್ತಿಗಾರು ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.ಸಭೆಯಲ್ಲಿ ಜನಜಾಗೃತಿ ವೇದಿಕೆಯ ಕಾರ್ಯಕ್ರಮದ ಬಗ್ಗೆ ಮತ್ತು ಕ್ರಿಯಾ ಯೋಜನೆಯ ಪ್ರಕಾರ ವಲಯದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ವಲಯ ಮೇಲ್ವಿಚಾರಕರಾದ ರಾಜೇಶ್.ಪಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ...

ಮೇ.23ರಂದು ಗೌಡರ ಯುವ ಸೇವಾ ಸಂಘದಿಂದ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಕಾರ್ಯಕ್ರಮ – ಪೂರ್ವಭಾವಿ ಸಭೆ

ಗೌಡ ಯುವ ಸೇವಾ ಸಂಘ ವತಿಯಿಂದ ಗೌಡ ಸಮುದಾಯಭವನ ನಲ್ಲಿ ಮೇ.23 ಶನಿವಾರದಂದು ನಡೆಯಲಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇಂದು ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು ಸಂಘದ ಅಧ್ಯಕ್ಷರಾದ ಪಿ. ಎಸ್. ಗಂಗಾಧರ್ ಅವರ ನೇತೃತ್ವದಲ್ಲಿ ನಡೆಯಿತು. ಶ್ರೀ ಲಕ್ಷ್ಮೀಸಹಿತ ಸತ್ಯನಾರಾಯಣ ದೇವರ ಪೂಜೆ, ಡಾ. ರೇಣುಕಾಪ್ರಸಾದ್ ಕೆ.ವಿ ಮತ್ತು...

ನೀಟ್ ಪರೀಕ್ಷಾ ಅವ್ಯವಸ್ಥೆ ಖಂಡನೆ : ಕೇಂದ್ರ ಸರ್ಕಾರದ ವಿರುದ್ಧ ಕೀರ್ತನ್ ಗೌಡ ಕೊಡಪಾಲ ಆಕ್ರೋಶ

ನೀಟ್ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆಗದ ರೀತಿಯಲ್ಲಿ ನಡೆಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, “ಬಿಜೆಪಿ ಆಡಳಿತಾವಧಿಯಲ್ಲಿ ನೇಮಕಾತಿ ಭ್ರಷ್ಟಾಚಾರ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ಹಗರಣಗಳು ನಿರಂತರವಾಗಿ ನಡೆಯುತ್ತಿವೆ....
Loading posts...

All posts loaded

No more posts

error: Content is protected !!