“ಜಾನುವಾರುಗಳಿಗೆ ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮ”ದ ಹಿನ್ನೆಲೆಯಲ್ಲಿ ಸುಳ್ಯದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸಾ ಸಮಯದಲ್ಲಿ ಬದಲಾವಣೆ

ಸುಳ್ಯ ತಾಲೂಕಿನಾದ್ಯಂತ ಏ.23 ರಿಂದ ಮೇ.22 ರವರೆಗೆ ಸುಮಾರು 30 ದಿನಗಳ ಕಾಲ “ಜಾನುವಾರುಗಳಿಗೆ ಕಾಲು-ಬಾಯಿ ರೋಗದ ಲಸಿಕಾ ಕಾರ್ಯಕ್ರಮ” ನಡೆಯಲಿರುವುದರಿಂದ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಸುಳ್ಯದ ಪಶು ಆಸ್ಪತ್ರೆಯಲ್ಲಿ ನಾಯಿ, ಬೆಕ್ಕು ಸೇರಿದಂತೆ ಇತರೆ ಸಾಕು ಪ್ರಾಣಿಗಳ ದೈನಂದಿನ ಚಿಕಿತ್ಸಾ ಸೇವೆಯನ್ನು ಮದ್ಯಾಹ್ನ 2:00 ಗಂಟೆಯಿಂದ 4:00 ಗಂಟೆಯ ಒಳಗೆ ಮಾತ್ರ ನಿಗದಿಪಡಿಸಲಾಗಿದ್ದು, ಎರಡನೇ, ನಾಲ್ಕನೇ ಶನಿವಾರಗಳಂದು ಹಾಗೂ ರವಿವಾರ ಮತ್ತು ರಜಾ ದಿನಗಳಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಚಿಕಿತ್ಸಾ ಸೇವೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಹಸು, ಎಮ್ಮೆಗಳ ತುರ್ತು ಚಿಕಿತ್ಸೆಗಾಗಿ ಇಲಾಖೆಯ ಪಶು ಸಂಜೀವಿನಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1962 ಸಂಪರ್ಕಿಸಬಹುದಾಗಿದೆ ಎಂದು ಸುಳ್ಯ ತಾಲೂಕು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading