- Wednesday
- August 12th, 2026
ಸುಳ್ಯದಲ್ಲಿ ಪ್ರಥಮಬಾರಿಗೆ "ಗೃಹಶೋಭೆ" ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳ ಫೆಬ್ರವರಿ 12 ರಿಂದ 21 ರವರೆಗೆ ನಡೆಯಲಿದೆ. ಗೃಹಪಯೋಗಿ ಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಗಾಂಧಿನಗರ ಶಾಲಾ ಮೈದಾನದಲ್ಲಿ ಫೆಬ್ರವರಿ 12 ರಂದು ಸಂಜೆ ಉದ್ಘಾಟನೆಗೊಳ್ಳಲಿದೆ. ಕರ್ನಾಟಕ ಸರ್ಕಾರದ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ನೂತನ ಸಚಿವರಾದ ಎಸ್ ಅಂಗಾರ ಉದ್ಘಾಟನೆಯನ್ನು...
ಸುಳ್ಯ ಮಂಡಲ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಅಧ್ಯಕ್ಷರಾದ ಶುಭದಾ ರೈ ಯವರ ಅಧ್ಯಕ್ಷತೆ ಯಲ್ಲಿ ಫೆ.10 ರಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಧನಲಕ್ಷ್ಮೀ, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರುಳ್ಯ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ತ್ರಿವೇಣಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್...
ಹೆಣ್ಣಿಗೆ ವಿಶೇಷವಾದ ಸ್ಥಾನವನ್ನು ಕೊಟ್ಟು ಪೂಜಿಸುವ ತುಳುನಾಡಿನಲ್ಲಿಂದು ಕೆಡ್ಡಸ ಆಚರಣೆಯ ಸಂಭ್ರಮ. ಭೂಮಿಯನ್ನು ತಾಯಿಯ ಸ್ಥಾನಕ್ಕೆ ಹೋಲಿಕೆ ಮಾಡುವ ಸಂಸ್ಕೃತಿ ಹೊಂದಿರುವ ತುಳುನಾಡು ಹಲವು ಸಂಸ್ಕೃತಿಗಳನ್ನು ಒಳಗೊಂಡಿದೆ. ಈ ದಿನ ಭೂಮಿ ತಾಯಿ ಋತುಮತಿಯಾಗುವಳು ಎಂಬ ನಂಬಿಕೆ ತುಳುವರದು. ಪ್ರಕೃತಿಮಾತೆ ಹೊಸ ಹುಟ್ಟು ಪಡೆಯಲು ತಯಾರಾಗುವಳು ಎಂಬ ಸಂತಸದಿಂದ ತುಳುವರು ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ...
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಐನೆಕಿದು ಗ್ರಾಮದ ಪೈಲಾಜೆ, ಐನೆಕಿದು ಸರ್ಕಲ್, ಶಾಲೆ, ಕೋಟೆ, ಆಚಾರಿಗದ್ದೆ, ನವಗ್ರಾಮ, ಗುಂಡಡ್ಕ ದಲ್ಲಿ ಫೆ.10 ರಂದು ಬೀದಿದೀಪ ಅಳವಡಿಸಲಾಯಿತು. ಜನತೆಯ ಬಹುದಿನದ ಬೇಡಿಕೆಯನ್ನು ಗ್ರಾ.ಪಂ.ನೂತನ ಸದಸ್ಯರು ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ ಇವರ ಉಪಸ್ಥಿತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಯಿತು.✍ವರದಿ:-ಉಲ್ಲಾಸ್...
ಯುವಜನ ಸಂಯುಕ್ತ ಮಂಡಳಿ(ರಿ.) ಇದರ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಫೆಬ್ರವರಿ 13 ರಂದು ಮಂಡಳಿಯ ಆವರಣದಲ್ಲಿ ನಡೆಯಲಿದೆ. ಆಸಕ್ತ ಸಾರ್ವಜನಿಕರು ಇದರ ಉಪಯೋಗವನ್ನು ಪಡಕೊಳ್ಳಬೇಕಾಗಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜು ಇದರ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಫೆ. 10 ರಂದು ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಕೆ.ವಿ., ಯು.ಪಿ.ರಾಮಕೃಷ್ಣ ಹಾಗೂ...
ಗಡಿಬಿಡಿಯಲ್ಲಿ ಕೆಲಸ ಮಾಡುತ್ತಾ ಬೇಗ ಬೇಗ ಹೊರಟ ಸುಂದರಿಯನ್ನು ಮನೆಯ ಹೊಸ ಸೊಸೆ ಆಶಾ ಕುತೂಹಲದಿಂದ ಕೇಳಿದಳು, ಏನು ಭಾರೀ ಅರ್ಜೆಂಟ್ ಲ್ಲಿ ಹೊರಟಿದ್ದಿ? ಎತ್ಲಾಗಿ ಹೋಗಲಿಕ್ಕಿದೆ? ಅದು ಕುಂಞಕ್ಕ ನಾಳೆ 'ಕೆಡ್ಡಸ' ಅಲ್ಲವಾ ಹಾಗಾಗಿ ನನ್ನೆರಿಗೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಹಾ ಕೆಡ್ಡಸಾ ಅದೆಂತ ನಾನು ಕೇಳೆ ಇಲ್ವಲ್ಲಾ ಏನದು ? ಎಂಬ ಆಕೆಯ ಕುತೂಹಲದ ಪ್ರಶ್ನೆ ...
ಕಲ್ಲುಗುಂಡಿ ಸಮೀಪದ ರಬ್ಬರ್ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಯೋ , ಕೊಲೆಯೋ ಎಂದು ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯನ್ನು ಪಂಜ ಸಮೀಪದ ಪಂಬೆತ್ತಾಡಿಯ ರಾಮಣ್ಣ ನಾಯ್ಕ ಅವರ ಪುತ್ರ ಗಣೇಶ್ ಚೀಮುಳ್ಳು ಎಂದು ಗುರುತಿಸಲಾಗಿದೆ.
ಅಂಬೇಡ್ಕರ್ ರಕ್ಷಣಾ ವೇದಿಕೆಯ ನೆಟ್ಟಾರು ಘಟಕದ ಉದ್ಘಾಟನೆ ನಡೆಯಿತು. ನೂತನ ಘಟಕದ ಅಧ್ಯಕ್ಷರಾಗಿ ರಾಜೇಶ್ ಕಜೆ, ಉಪಾಧ್ಯಕ್ಷರಾಗಿ ರಮೇಶ್ ನೆಟ್ಟಾರು, ಕಾರ್ಯದರ್ಶಿಯಾಗಿ ವಸಂತ ಬೊಳಿಯಮೂಲೆ, ಜತೆ ಕಾರ್ಯದರ್ಶಿಯಾಗಿ ಗಂಗಾಧರ ನಾಯ್ಕ ನವಗ್ರಾಮ, ನೆಟ್ಟಾರು ಮಹಿಳಾ ಘಟಕದ ಅಧ್ಯಕ್ಷರಾಗಿ ಉಷಾ ಎಸ್. ನವಗ್ರಾಮ, ಮಹಿಳಾ ಕಾರ್ಯದರ್ಶಿಯಾಗಿ ಹರಿಣಾಕ್ಷಿ ನೆಟ್ಟಾರು ಆಯ್ಕೆಯಾದರು. ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ...
ಹರಿಹರಪಲ್ಲತ್ತಡ್ಕದಿಂದ ಕಟ್ಟಕ್ಕೆ ಹೋಗುವ ರಸ್ತೆಯಲ್ಲಿ ಹಗಲಿನ ವೇಳೆಯಲ್ಲಿಯೇ ಆನೆ ಸಂಚರಿಸುತ್ತಿರುವುದು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ. ಫೆ. 9 ರಂದು ಸಂಜೆ 6 ಗಂಟೆಗೆ ದ್ವಿಚಕ್ರ ಸವಾರನಿಗೆ ಒಂಟಿ ಸಲಗ ಅಡ್ಡ ಬಂದಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಆನೆ ಕಂಡು ಸ್ಕೂಟರನ್ನು ಕೂಡಲೇ ತಿರುಗಿಸಿದ್ದಾರೆ. ಈ ಭಾಗದಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರು...
Loading posts...
All posts loaded
No more posts
