ಬಾಲ್ಯದ ಜೀವನ

ಪುಟ್ಟ-ಪುಟ್ಟ ಮನಸುಗಳು,ಚಿಕ್ಕ-ಪುಟ್ಟ ಕನಸುಗಳು…ಬಾಲ್ಯದ ಜೀವನ ಎಷ್ಟೊಂದು ಚಂದ…ಬದುಕಿನ ತುಂಟಾಟ, ಗೆಳೆಯರ ಒಡನಾಟ…ಬಾಲ್ಯದ ಬದುಕಿನ ಆ ದಿನಗಳು,ಎಂದೂ ಮರೆಯದ ಆ ಕ್ಷಣಗಳು… ಅರಿಯದ ವಯಸ್ಸಿನಲ್ಲಿ, ತಿಳಿಯದ ಮನಸ್ಸಿನಲ್ಲಿಕಳೆದುಹೋದದ್ದೇ ಬಾಲ್ಯ….ಮರಳಿ ಬಾರದು ಆ ಬಾಲ್ಯ…ಸುಂದರ ದಿನಗಳಸವಿ-ಸವಿ ನೆನಪುಗಳ,ಎಂದೂ ಸವೆಯದ ಆ ಪಯಣ…ಬಾಲ್ಯದ ಬದುಕಿನ ಆ ಪಯಣ… ಶಾಲೆಯ ಮೊದಲ ದಿನ, ಗುರುಗಳ ಕಂಡ ಕ್ಷಣಮನದಲ್ಲಿ ಏನೋ ಒಂದು ಅಳುಕು…ದಿನಗಳು...

ಅರಂತೋಡು : ಹೃದಯಾಘಾತದಿಂದ ಯುವಕ ಮೃತ್ಯು

ಅರಂತೋಡು ಗ್ರಾಮದ ಓಟೆಡ್ಕ ದಿ. ವೆಂಕಟ್ರಮಣ ಗೌಡರ ಪುತ್ರ ಯತೀಶ್ ( ಗುರು) ಹೃದಯಾಘಾತದಿಂದ ಜು.6 ರಂದು ನಿಧನರಾದರು. ಅವರಿಗೆ 26 ವರ್ಷ ವಯಸ್ಸಾಗಿತ್ತು. ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
Ad Widget

ಹಾಲೆಮಜಲು : ಯುವಕ ನೇಣುಬಿಗಿದು ಆತ್ಮಹತ್ಯೆ

ನಾಲ್ಕೂರು ಗ್ರಾಮದ ಹಾಲೆಮಜಲು ಹೊಸಹಳ್ಳಿ ನಿವಾಸಿ ವಿನಯ್ ಬಾಳಿಲ (ಕುಕ್ಕುತ್ತಡಿ) ಅವರು ಕಳೆದ ರಾತ್ರಿ ಮನೆ ಸಮೀಪದ ಮರವೊಂದಕ್ಕೆ ಜು.6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. 6 ತಿಂಗಳ ಹಿಂದೆ ವಿವಾಹವಾಗಿದ್ದ ಇವರು ಪತ್ನಿ, ತಂದೆ ಬ‍ಾಬು ಗೌಡ, ತಾಯಿ ಚಂದ್ರಾವತಿ, ಸಹೋದರ ಸುರೇಶ, ಸಹೋದರಿ ಶ್ರೀಮತಿ ನವೀನ...

ಅರಂತೋಡು : ರಿಕ್ಷಾ ನಿಲ್ದಾಣಕ್ಕೆ ಗುದ್ದಲಿಪೂಜೆ

ಅರಂತೋಡು ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಾಕ್ಷಿ ದೇರಾಜೆ, ಗ್ರಾ.ಪಂ. ಸದಸ್ಯರು, ವಾಹನ ಮಾಲಕ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ಸಂಪಾಜೆ : ವನಮಹೋತ್ಸವ ಕಾರ್ಯಕ್ರಮ

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಸಂಪಾಜೆ ಕೊಡಗು ಇದರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ (ರಿ)ಊರುಬೈಲು ಇವರಿಂದ ಜು.7 ರಂದು ಸಂಪಾಜೆಯಲ್ಲಿ ವನಮಹೋತ್ಸವ ಆಚರಣೆ ಮಾಡಲಾಯಿತು. ಸಂಪಾಜೆ ಗೇಟ್ ಬಳಿಯ ಮುಖ್ಯ ರಸ್ತೆಯ ಅಂಚಿನಲ್ಲಿ ಕಳೆನಾಶ ಮಾಡಿ ,ಪ್ಲಾಸ್ಟಿಕ್ ತ್ಯಾಜ್ಯ ಆಯುವ ಮೂಲಕ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು. ಆ ಬಳಿಕ ರಸ್ತೆಯ ಅಂಚಿನುದ್ದಕ್ಕೂ ಸಸಿಗಳನ್ನು...

ಕಳಂಜ: ಕಾರ್ಮಿಕರ ಕಿಟ್ ವಿತರಣೆ

ಕಳಂಜ ಗ್ರಾಮದಲ್ಲಿ ಸರ್ಕಾರದಿಂದ ನೀಡಲಾಗಿದ್ದ ಕಾರ್ಮಿಕರ ಕಿಟ್ ವಿತರಿಸಲಾಯಿತು. ಕಾರ್ಮಿಕ ಇಲಾಖೆಯ ಅಧೀನದಲ್ಲಿ ನೋಂದಾಯಿತ ಕಾರ್ಮಿಕರ ಮನೆ ಮನೆಗೆ ತೆರಳಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯ ಬಾಲಕೃಷ್ಣ ಬೇರಿಕೆ ಮತ್ತಿತರರು ಹಾಜರಿದ್ದರು. ಕಳಂಜ ಗ್ರಾಮದ ಒಟ್ಟು 57 ಮಂದಿಗೆ ಸರ್ಕಾರ ನೀಡಿದ ಕಾರ್ಮಿಕರ ಕಿಟ್ ವಿತರಿಸಲಾಯಿತು.

ಕುಕ್ಕೆ: ದೇವರ ದರ್ಶನಕ್ಕೆ ಮಾತ್ರ ಅವಕಾಶ – ಹರಿಕೆ ಸೇವೆಗಳಿಲ್ಲ – ಮಂಗಳಾರತಿಗೆ ಅವಕಾಶ

ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.೨೧ರಿಂದ  ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಕೋವಿಡ್-೧೯ ಇಳಿಮುಖಗೊಂಡಿರುವುದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ಶ್ರೀ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ಸೋಮವಾರದಿಂದ ಅವಕಾಶ ಲಭ್ಯವಾಗಿದೆ. ಕ್ಷೇತ್ರದಲ್ಲಿ ಶ್ರೀ ದೇವರ ದರುಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ...

ಕಾಂಗ್ರೆಸ್ ಸೇವಾದಳ ವತಿಯಿಂದ ಬೋರುಗುಡ್ಡೆ ಹಿಂದೂ ರುದ್ರ ಭೂಮಿಯಲ್ಲಿ ಶ್ರಮದಾನ

ಸುಳ್ಯ ಕಾಂಗ್ರೆಸ್ ಸೇವಾದಳ, ನಗರ ಕಾಂಗ್ರೆಸ್ ಮತ್ತು ಬೋರುಗುಡ್ಡೆ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ಸುಳ್ಯ ನಗರದ ಬೋರುಗುಡ್ಡೆ ನಾವೂರು ಪ. ಜಾತಿ ಕಾಲೋನಿಯ ಮೀಸಲು ಹಿಂದೂ ರುದ್ರ ಭೂಮಿ ಯಲ್ಲಿ ಶ್ರಮದಾನದ ಮೂಲಕ ಕಾಡು ಕಡಿದು ಸ್ವಚ್ಛತೆ ಕಾರ್ಯ ಮಾಡಲಾಯಿತು. ನಂತರ ಸ್ಥಳದಲ್ಲಿ ಗಿಡ ನೆಡಲಾಯಿತು. ಶ್ರಮದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ...

ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಸಚಿವ ಎಸ್.ಅಂಗಾರರಿಗೆ ಮನವಿ

ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರರಿಗೆ ಜು.3 ರಂದು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಭಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ.ಬಿ, ಪದಾಧಿಕಾರಿಗಳಾದ ಉನ್ನಿಕೃಷ್ಣನ್ ಹಾಗೂ ಹಿಂಭಡ್ತಿ ಎದುರಿಸುತ್ತಿರುವ ಶಿಕ್ಷಕರು ಹಾಜರಿದ್ದರು.

ಗುತ್ತಿಗಾರು : ಚರ್ಚ್ ವತಿಯಿಂದ ರಿಕ್ಷಾ ಚಾಲಕರಿಗೆ ಆರೋಗ್ಯ ರಕ್ಷಾ ಪರಿಕರ ವಿತರಣೆ

ಗುತ್ತಿಗಾರು ಚರ್ಚ್ ವತಿಯಿಂದ ರಿಕ್ಷಾ ಚಾಲಕರಿಗೆ ವೈದ್ಯಕೀಯ ಪರಿಕರಗಳಾದ ಸ್ಯಾನಿಟೈಸರ್, ಸ್ಪ್ರೇ ಸ್ಯಾನಿಟೈಸರ್,25 ಫೇಸ್ ಮಾಸ್ಕ್, ಮತ್ತು ಆರೋಗ್ಯ ವರ್ಧಕ ಗುಳಿಗೆ ಒಳಗೊಂಡ ಕಿಟ್ಟನ್ನು ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್ ವಿತರಣೆ ಮಾಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗುತ್ತಿಗಾರು ಸರಕಾರಿ ಆಸ್ಪತ್ರೆಯ ಡಾ. ಚೈತ್ರ ಬಾನು, ಸಿರಿಯಾಕ್ ಮ್ಯಾಥ್ಯೂ, ಲಿಜೋ ಜೋಸ್, ಜಾರ್ಜ್. ಕೆ. ಎಂ.,...
Loading posts...

All posts loaded

No more posts

error: Content is protected !!