- Friday
- August 14th, 2026
ನಾಲ್ಕೂರು ಶಿರಾಡಿ ದೈವಸ್ಥಾನದ ರಸ್ತೆ , ಕಲ್ಲಾಜೆ, ಅಂಬೆಕಲ್ಲು, ಹಲ್ಗುಜಿ ರಸ್ತೆ ಶ್ರಮದಾನ ಜು.2 ರಂದು ನಡೆಯಿತು. ಈ ಸಂದರ್ಭದಲ್ಲಿ ಮೇಘನ್ ಕಲ್ಲಾಜೆ, ಸುಬ್ರಹ್ಮಣ್ಯ ಪಾಲ್ತಾಡು, ಸತೀಶ್ ಹಲ್ಗುಜಿ ಶಿವಪ್ರಸಾದ್ ಹಲ್ಗುಜಿ, ರಾಮಚಂದ್ರ ಕಲ್ಲಾಜೆ, ಪುರುಷೋತ್ತಮ ಪುನೇರಿ, ನಾಗೇಶ್ ಮಣಿಯಾನ ಮನೆ, ಪ್ರಶಾಂತ್ ಅಂಬೆಕಲ್ಲು, ಷಣ್ಮುಖ ಅಂಬೆಕಲ್ಲು, ಮನೋಜ್ ದೇರಪಜ್ಜನ ಮನೆ, ಕುಶಾಲಪ್ಪ ಗೌಡ ಅಂಬೆಕಲ್ಲು,...
ಸುಳ್ಯ ತಾಲೂಕು ಪಂಚಾಯಿತ್ ವತಿಯಿಂದ ಪ್ರೆಸ್ ಕ್ಲಬ್ ನಿರ್ಮಾಣಕ್ಕೆ ಅಂಬೆಟಡ್ಕದಲ್ಲಿ ನೀಡಿರುವ ನಿವೇಶನದಲ್ಲಿ ಜು.3 ರಂದು ನೂತನ ಪ್ರೆಸ್ ಕ್ಲಬ್ ಕಟ್ಟಡ ಮತ್ತು ಪತ್ರಕರ್ತರ ಸಮುದಾಯ ಭವನಕ್ಕೆ ಶಿಲಾನ್ಯಾಸ ನಡೆಯಿತು. ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು. ನಿವೇಶನ...
ಅಕ್ರಮ ಮದ್ಯ ಸಾಗಾಟ ಜಾಲ ಭೇದಿಸಿದ ಸುಬ್ರಹ್ಮಣ್ಯ ಪೋಲಿಸರು ಇನ್ನೋವಾ ವಾಹನದಲ್ಲಿದ್ದ ಅಕ್ರಮ ಮದ್ಯ ಸಹಿತ ನಾಲ್ವರನ್ನು ಬಂಧಿಸಿದ ಘಟನೆ ಜು.2 ರಂದು ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಸುಬ್ರಹ್ಮಣ್ಯ ಪೋಲಿಸರು ನಾಲ್ಕೂರು ಗ್ರಾಮದ ಮಲ್ಲಾರ ಎಂಬಲ್ಲಿ ಇನ್ನೋವಾ ಕಾರ್ ನಲ್ಲಿ ಸಾಗಿಸುತ್ತಿದ್ದ 9 ಬಾಕ್ಸ್ ಮದ್ಯ ವಶಕ್ಕೆ ಪಡೆದಿದ್ದು, ವಾಹನ ಸಹಿತ...
ಅಕ್ರಮ ನಾಡಕೋವಿ ಮಾರಾಟ ಪ್ರಕರಣದಲ್ಲಿ ಬಂಧಿತರಾದ ಒಂದನೇ ಆರೋಪಿ ದಿವಾಕರ ಆಚಾರಿಗೆ ಪುತ್ತೂರು ಸೆಶನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಇವರಿಗೆ ದೊರೆತ ಮಾಹಿತಿ ಪ್ರಕಾರ ಆರೋಪಿ ದಿವಾಕರ ಆಚಾರಿ ತನ್ನ ಕಬ್ಬಿಣದ ಕೆಲಸ ಮಾಡುವ ಕೊಟ್ಟಿಗೆಯಲ್ಲಿ ಅಕ್ರಮ ನಾಡಕೋವಿ ತಯಾರಿಸಿ ಮಾರಾಟ ಮಾಡುತ್ತಿದ್ದನೆಂದು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ರೆನ್ನಲಾದ ಆರೋಪದಡಿ ಬಂಧಿಸಿ...
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ,ಸುಬ್ರಹ್ಮಣ್ಯ ಇಲ್ಲಿ 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಜೂ.30 ಹಾಗೂ ಜುಲೈ 2 ರಂದು ಕೊರೊನಾ ಲಸಿಕೆಯನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ, ನೋಡಲ್ ಅಧಿಕಾರಿ ವಿಶ್ವನಾಥ ನಡುತೋಟ, ಉಪನ್ಯಾಸಕರುಗಳಾದ ಶ್ರೀಧರ್, ಪ್ರವೀಣ್ , ಸೌಮ್ಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಹೇಮಲತಾ, ಕವಿತಾ ಮತ್ತು...
ಪರಿಸರ ಕಾರ್ಯಕ್ರಮದ ಗಿಡ ನಾಟಿ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಬ್ರಹ್ಮಣ್ಯ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಹಾಗೂ ಅರಣ್ಯ ಇಲಾಖೆ ಸುಬ್ರಹ್ಮಣ್ಯ ವಲಯ ಇವರ ಜಂಟಿ ಆಶ್ರಯದಲ್ಲಿ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಜೂ.29 ರಂದು ಕೊಲ್ಲಮೊಗ್ರ ಅರಣ್ಯ ವಿಶ್ರಾಂತಿ ಗೃಹದ ವಠಾರದಲ್ಲಿ ಗಿಡ ನಾಟಿ...
https://youtu.be/kUf9O8EPokA ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಜಾಗೃತಿಯ ಕಿರುಚಿತ್ರ ಸ್ಥಿತಿ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಂಗಮನೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಮಾ| ಮನುಜ ನೇಹಿಗ,ಕು| ಲಾಲಿತ್ಯ ಹಾಗೂ ಜೀವನ್...
ಜೂ.27 ರಂದು ಕಜ್ಜೋಡಿ, ಮುಳ್ಳುಬಾಗಿಲು, ಕರಂಗಲ್ಲು ಹಾಗೂ ದೊಡ್ಡಕಜೆ ಊರಿನ ಜನರು ಹರಿಹರದಿಂದ ಕರಂಗಲ್ಲು ವರೆಗೆ ವಿದ್ಯುತ್ ಲೈನ್ ಗಳಿಗೆ ಮುಟ್ಟುವ ಮರದ ಕೊಂಬೆಗಳನ್ನು ಕಡಿದು, ರಸ್ತೆ ಬದಿಯಲ್ಲಿನ ಕಾಡು(ಕಳೆ) ಕಡಿದು, ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆಗೆ ಅಡ್ಡಲಾಗಿ ಚರಂಡಿ ನಿರ್ಮಿಸಿ ಮುಂತಾದ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಿದರು. ✍ವರದಿ :- ಉಲ್ಲಾಸ್ ಕಜ್ಜೋಡಿ
ಜೂ. 28 ಸೋಮವಾರದಂದು ಪೆರುವಾಜೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ 385 ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ 34 ಕೋವಿಡ್ ಲಸಿಕೆಗಳು ಲಭ್ಯವಿರುವುದು. ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕೆಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಪೆರುವಾಜೆ ಗ್ರಾ.ಪಂ.ಸದಸ್ಯರಾಗಿರುವ ಪದ್ಮನಾಭ ಶೆಟ್ಟಿ ಪೆರುವಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರುವಿನಲ್ಲಿ ಕೊರಗಜ್ಜ ಎಂಬ ಹೆಸರಿನ ನೂತನ ಪ್ರಗತಿಬಂಧು ಸಂಘವು ಆಲ್ಕಬೆ ಚೆನ್ನಪ್ಪ ಗೌಡರ ಮನೆಯಲ್ಲಿ ಜೂ.24ರಂದು ಉದ್ಘಾಟನೆಗೊಂಡಿತು.ಸಂಘದ ಉದ್ಘಾಟನೆಯನ್ನು ಪುಷ್ಪಾವತಿ ಆಲ್ಕಬೆ ಅವರು ನೆರವೇರಿಸಿದರು.ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ ಅವರು ಮಾತನಾಡಿದರು.ಸಂಘಗಳ ವ್ಯವಹಾರಗಳ...
Loading posts...
All posts loaded
No more posts
