ಬಾಲ್ಯದ ಜೀವನ

ಪುಟ್ಟ-ಪುಟ್ಟ ಮನಸುಗಳು,
ಚಿಕ್ಕ-ಪುಟ್ಟ ಕನಸುಗಳು…
ಬಾಲ್ಯದ ಜೀವನ ಎಷ್ಟೊಂದು ಚಂದ…
ಬದುಕಿನ ತುಂಟಾಟ, ಗೆಳೆಯರ ಒಡನಾಟ…
ಬಾಲ್ಯದ ಬದುಕಿನ ಆ ದಿನಗಳು,
ಎಂದೂ ಮರೆಯದ ಆ ಕ್ಷಣಗಳು…

. . . . . . . . .

ಅರಿಯದ ವಯಸ್ಸಿನಲ್ಲಿ, ತಿಳಿಯದ ಮನಸ್ಸಿನಲ್ಲಿ
ಕಳೆದುಹೋದದ್ದೇ ಬಾಲ್ಯ….
ಮರಳಿ ಬಾರದು ಆ ಬಾಲ್ಯ…
ಸುಂದರ ದಿನಗಳ
ಸವಿ-ಸವಿ ನೆನಪುಗಳ,
ಎಂದೂ ಸವೆಯದ ಆ ಪಯಣ…
ಬಾಲ್ಯದ ಬದುಕಿನ ಆ ಪಯಣ…

. . . . . . .

ಶಾಲೆಯ ಮೊದಲ ದಿನ, ಗುರುಗಳ ಕಂಡ ಕ್ಷಣ
ಮನದಲ್ಲಿ ಏನೋ ಒಂದು ಅಳುಕು…
ದಿನಗಳು ಕಳೆದಂತೆ, ಗೆಳೆಯರ ಜೊತೆಗಿನ ಬಾಲ್ಯದ ಮಧುರವಾದ ಕ್ಷಣಗಳು…
ಎಂದೂ ಮರೆಯದ ಆ ಕ್ಷಣಗಳು…
ಶಾಲಾ ಬದುಕಿನ ಆ ದಿನಗಳು…

ವರುಷಕ್ಕೊಂದು ಬೇಸಿಗೆ ರಜೆಯು ಬರುವುದಂತೆ….
ಆ ದಿನಗಳು ತುಂಬಾ ಸೊಗಸಂತೆ,
ಪ್ರತಿದಿನ ಒಂದೊಂದು ಆಟವಂತೆ…
ಚಿಕ್ಕ-ಚಿಕ್ಕ ಕಾರಣಕ್ಕೂ ಬರುವ ಹುಸಿ-ಮುನಿಸು…
ಎಂದೂ ಮರೆಯದ ಆ ವರುಷ,
ವರುಷದ ಪ್ರತಿದಿನವೂ ಹರುಷ…

ಪುಟ್ಟ-ಪುಟ್ಟ ಮನಸುಗಳು,
ಚಿಕ್ಕ-ಪುಟ್ಟ ಕನಸುಗಳು…
ಬಾಲ್ಯದ ಬದುಕೆಷ್ಟು ಚಂದ…
ಅರಿಯದ ವಯಸ್ಸಿನಲ್ಲಿ, ತಿಳಿಯದ ಮನಸ್ಸಿನಲ್ಲಿ
ಕಳೆದುಹೋದದ್ದೇ ಬಾಲ್ಯ…
ಮರಳಿ ಬಾರದು ಆ ಬಾಲ್ಯ,
ಮುಗ್ಧತೆಯ ಚೆಲುವಿನ ಆ ಬಾಲ್ಯ…

✍ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading