ಸೌಹಾರ್ದ ಕ್ರಿಕೆಟ್ ಕಪ್: ವೆಂಕಟರಮಣ ಸೊಸೈಟಿ ಸಿಬ್ಬಂದಿ‌ ರನ್ನರ್ ಅಪ್

ಸೌಹಾರ್ದ ಕ್ರಿಕೆಟರ್ಸ್ ನಡೆಸಿದ ಅಮರ್, ಅಕ್ಬರ್, ಅಂತೋನಿ ಟ್ರೋಫಿ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟ ಪುತ್ತೂರಿನಲ್ಲಿ ಇಂದು ನಡೆಯಿತು. ಪಂದ್ಯಾಟದಲ್ಲಿ ವೆಂಕಟರಮಣ ಸೊಸೈಟಿ ಪುತ್ತೂರು ಶಾಖೆಯ ಸಿಬ್ಬಂದಿಗಳಾದ ಸಂದೇಶ್ ಹಾಗೂ ಬಿ.ಸಿ ರೋಡ್ ಶಾಖೆಯ ವಿಶ್ವನಾಥ್ ಭಾಗವಹಿಸಿದ ಸಹಕಾರಿ ಸಂಘ ಬ್ಯಾಂಕ್ ತಂಡ ರನ್ನರ್ ಅಪ್ ಗಳಿಸಿದೆ. ಕ್ಯಾಂಪ್ಕೋ ಪುತ್ತೂರು ತಂಡ ಪ್ರಥಮ ಸ್ಥಾನ ಗಳಿಸಿತು.

ಕಂದ್ರಪ್ಪಾಡಿ : ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನ

ದೇವಚಳ್ಳ ಗ್ರಾ.ಪಂ.ನ ಕಂದ್ರಪ್ಪಾಡಿ ಬೂತ್ ನಲ್ಲಿ ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನ ನಡೆಸಿದರು. ಅಭ್ಯರ್ಥಿಗಳಾದ ರಮೇಶ್ ಪಡ್ಪು, ಭವಾನಿಶಂಕರ ಮುಂಡೋಡಿ, ಉಷಾ ದೇವ, ಸೀತಮ್ಮ ಕರಂಗಲ್ಲು, ತಾ.ಪಂ.ಸದಸ್ಯೆ ಯಶೋಧ ಬಾಳೆಗುಡ್ಡೆ, ಗ್ರಾ.ಪಂ.ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಮಾಜಿ ಸದಸ್ಯರಾದ ಶಿವಪ್ರಕಾಶ್ ಅಡ್ಡನಪಾರೆ, ವಾರ್ಡ್ ಸಮಿತಿ ಅಧ್ಯಕ್ಷ ಯೋಗೀಶ್ ದೇವ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Ad Widget

ಮರ್ಕಂಜ : ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರು

ಮರ್ಕಂಜ ಬೂತ್ ನಲ್ಲಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಜತೆ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಸಾಥ್ ನೀಡಿದರು.

ಎಲಿಮಲೆ : ಸೈಂಟ್ ಮೇರಿಸ್ ಹಾರ್ಡ್‌ವೇರ್ ಮತ್ತು ಪೈಂಟ್ಸ್ ಶುಭಾರಂಭ

ಎಲಿಮಲೆಯ ಸೈಂಟ್ ಮೇರಿಸ್ ಇಂಡಸ್ಟ್ರೀಸ್ ನ ನೂತನ ಘಟಕವಾಗಿ ಹಾರ್ಡ್‌ವೇರ್, ಪೈಂಟ್ಸ್, ಪೈಪ್ಸ್ ಮತ್ತು ಪಿಟ್ಟಿಂಗ್ಸ್, ಸ್ಯಾನಿಟರಿವೇರ್ಸ್ , ಸಿಮೆಂಟ್ ಮತ್ತು ಸಿಮೆಂಟ್ ಪ್ರೊಡಕ್ಟ್ ನ ವಿಶಾಲವಾದ ಮಳಿಗೆ ಡಿ‌.28 ರಂದು ಶುಭಾರಂಭಗೊಂಡಿತು. ಧರ್ಮಗುರುಗಳಾದ ಫಾ|ಸಿಬಿ ಪನಚಿಕಲ್ ಪ್ರಾರ್ಥಿಸಿ, ಸಂಸ್ಥೆಯ ಬೆಳವಣಿಗೆಗೆ ಶುಭಹಾರೈಸಿದರು. ಶ್ರೀಮತಿ ರೋಸಮ್ಮ ಮತ್ತು ಮ್ಯಾಥ್ಯೂ ಕಕ್ಕಿಂಜೆ ದಂಪತಿಗಳು ಉದ್ಘಾಟಿಸಿ ಶುಭಹಾರೈಸಿದರು. ಸುಮಾರು...

ಹುಟ್ಟುಹಬ್ಬ ಆಚರಿಸಿ ಗ್ರಾಮದ ಸೇವಕನಿಗೆ ಕೃತಜ್ಞತೆ ಸಲ್ಲಿಸಿದ ಕಾರ್ಯಕರ್ತರು

ನಡುಗಲ್ಲಿನಲ್ಲಿ ಮತದಾನ ಮುಗಿದ ಬಳಿಕ ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಚುನಾವಣಾ ಅಭ್ಯರ್ಥಿ ವಿಜಯಕುಮಾರ್ ಚಾರ್ಮತ ಅವರ ಹುಟ್ಟುಹಬ್ಬವನ್ನು ನಾಲ್ಕೂರು ಗ್ರಾಮದ ಬಿ.ಜೆ.ಪಿ. ಕಾರ್ಯಕರ್ತರು ಸೇರಿ ಆಚರಿಸಿದರು. ಈ ಮೂಲಕ ಗ್ರಾಮದ ಅಭಿವೃದ್ಧಿ ಗೆ ದುಡಿದ ಗ್ರಾ.ಪಂ.ಸದಸ್ಯನಿಗೆ ಕೃತಜ್ಞತೆ ಸಲ್ಲಿಸಿದರು.

ಉಬರಡ್ಕ : ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರು

ಉಬರಡ್ಕ : ವಾರ್ಡ್ 1, 2 ಮತ್ತು 3 ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜತೆ ಕಾರ್ಯಕರ್ತರು ಸಾಥ್ ನೀಡಿದರು.

ಮೊಗ್ರ : ಹಿರಿಯರ ಮತದಾನಕ್ಕೆ ನೆರವಾದ ಗ್ರಾಮಭಾರತ ತಂಡದ ಸದಸ್ಯರು

ಮೊಗ್ರ ಬೂತ್ ನಲ್ಲಿ 97 ವರ್ಷದ ಚೆನ್ನು ಅವರ ಮತದಾನಕ್ಕೆ ಗ್ರಾಮಭಾರತ ತಂಡದ ಸದಸ್ಯರು ನೆರವಾದರು.

ಮೊಗ್ರ ಮತಗಟ್ಟೆ ಬಳಿ ಗ್ರಾಮಭಾರತ ತಂಡದಿಂದ ಸ್ವಚ್ಛತೆ

ಮೊಗ್ರ ಮತಗಟ್ಟೆ ಬಳಿ ಮತದಾನದ ಮುಗಿದ ಬಳಿಕ ಮತಗಟ್ಟೆ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಭಾರತ ತಂಡದ ಸದಸ್ಯರು ಭಾಗವಹಿಸಿದರು.

ಗುತ್ತಿಗಾರು : ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ

ಗುತ್ತಿಗಾರು ಮತಗಟ್ಟೆ ಬಳಿ ಮತದಾನ ಮುಗಿದ ಬಳಿಕ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ ನಡೆಯಿತು.

ನೆಲ್ಲೂರು ಕೆಮ್ರಾಜೆ : ಸೌಹಾರ್ದ ವೇದಿಕೆ ಅಭ್ಯರ್ಥಿಗಳ ಜತೆ ಕಾರ್ಯಕರ್ತರು

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾರ್ಣಕಜೆ ಮತ್ತು ಬೊಳ್ಳಾಜೆ ಬೂತ್ ಗಳಲ್ಲಿ ಸೌಹಾರ್ದ ವೇದಿಕೆ ಅಭ್ಯರ್ಥಿಗಳೊಂದಿಗೆ ಕಾರ್ಯಕರ್ತರು ಮತಯಾಚಿಸಿದರು.
Loading posts...

All posts loaded

No more posts

error: Content is protected !!