ಶಾಂತಿನಗರ : ನ.ಪಂ.ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ

. . . . . . . . .

ಇತ್ತೀಚೆಗೆ ಸುಳ್ಯದ ಶಾಂತಿನಗರದಲ್ಲಿ ಗುಂಡು ಹಾರಿಸಿ ಕೊಲೆ ನಡೆದ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿ ಶಾಂತಿನಗರದ ಪದ್ಮನಾಭ ಎಂಬವರ ಮನೆಯಲ್ಲಿ ಬಿದ್ದಿದ್ದರು. ಇದರಿಂದಾಗಿ ಪದ್ಮನಾಭರು ಅನಿವಾರ್ಯವಾಗಿ ಮನೆ ಬದಲಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಅವರಿಗೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ಸಹಾಯಧನ ಮಂಜೂರು ಮಾಡುವರೇ ಕ್ರಮಕೈಗೊಳ್ಳಲಾಗಿದ್ದು ಹಾಗೂ ನಗರ ಪಂಚಾಯಿತ್ ನಿಧಿಯಿಂದ ಪಕ್ಕಾ ಮನೆ ನಿರ್ಮಾಣಕ್ಕಾಗಿ 50 ಸಾವಿರ ರೂ ಮಂಜೂರು ಮಾಡಲಾಗಿರುತ್ತದೆ.
ನಗರ ಪಂಚಾಯತನ 50 ಸಾವಿರ ರೂಗಳ ಸಹಾಯಧನದಲ್ಲಿ ಮೊದಲ ಕಂತಿನ 25 ಸಾವಿರ ರೂಗಳ ಚೆಕ್ಕನ್ನು ಇತ್ತೀಚೆಗೆ ಪದ್ಮನಾಭ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಚಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ, ಸದಸ್ಯ ಸುಧಾಕರ ಕುರುಂಜಿಭಾಗ್, ಸ್ಥಳೀಯರಾದ ದಾಮೋದರ ಮಂಚಿ, ನಾರಾಯಣ ಶಾಂತಿನಗರ, ಬಾಲಗೋಪಾಲ ಸೇರ್ಕಜೆ, ಗೌತಮ್ ಸೇರ್ಕಜೆ, ಮತ್ತಿತರರು ಉಪಸ್ಥಿತರಿದ್ದರು.
ನಗರ ಪಂಚಾಯತ್ ವತಿಯಿಂದ ಗರಿಷ್ಠ ರೀತಿಯ ಸಹಾಯವನ್ನು ಮಾಡಲಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಧ್ಯಕ್ಷರು ಈ ಸಂದರ್ಭದಲ್ಲಿ ಹೇಳಿದರು.
ಪದ್ಮನಾಭ ಅವರ ಕಷ್ಟಕಾಲದಲ್ಲಿ ಗರಿಷ್ಠವಾಗಿ ನೆರವಾದ ನಗರ ಪಂಚಾಯತ್ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಸ್ಥಳೀಯರು ಅಭಿನಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading