- Tuesday
- August 18th, 2026
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉಡುಪಿಯ ಕೃಷ್ಣಾಪುರ ಜನಾರ್ಧನ ತೀರ್ಥ ಸಂಸ್ಥಾನದ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಡಿ.31 ರ ಶುಕ್ರವಾರದಂದು ಭೇಟಿ ನೀಡಿ ದೇವರ ದರ್ಶನ ಪಡೆದರು.ಜ.18 ರಂದು ಶ್ರೀ ಕೃಷ್ಣ ಪರಮಾತ್ಮ ಮತ್ತು ಮುಖ್ಯಪ್ರಾಣ ದೇವರ ದ್ವೈವಾರ್ಷಿಕ ಪರ್ಯಾಯದ 50ನೇ ವರ್ಷದ ಪೂಜಾ ಪರ್ಯಾಯ ಮಹೋತ್ಸವ ಜರುಗಲಿದ್ದು, ಆ ಪ್ರಯುಕ್ತ ಶ್ರೀಪಾದರು...
ಕೊಲ್ಲಮೊಗ್ರು ಗ್ರಾಮದ ಪಡಿಕಲ್ಲು ಎಂಬಲ್ಲಿ ಕಟ್ಟವನ್ನು ನಿರ್ಮಿಸಿ ಚಾಂತಾಳ ಮತ್ತು ಪಡಿಕಲ್ಲಿಗೆ ನೀರು ಹಾಯಿಸುವಂತಹ ವ್ಯವಸ್ಥೆಯನ್ನು ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ಇಟ್ಟು ನಾಲೆಯಲ್ಲಿ ತುಂಬಿದ್ದ ಹೂಳನ್ನು ಸ್ವಚ್ಛಗೊಳಿಸಿ ಹೂಳು ತುಂಬಿದಂತಹ ಎಲ್ಲಾ ಭಾಗವನ್ನು ಸ್ವಚ್ಛ ಮಾಡಿ ಕಟ್ಟೆ ಕಟ್ಟಿ ನೀರನ್ನು ರೈತರ ತೋಟಗಳಿಗೆ ಹಾಯಿಸುವಂತಹ...
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಸಚಿವರ ವಿಶೇಷ ಅನುದಾನದಿಂದ ರೂ.30 ಲಕ್ಷ ಅನುದಾನ ಮಂಜೂರಾಗಿದ್ದು ಗುದ್ದಲಿ ಪೂಜೆಯು ಜ.1ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಶುಭಹಾರೈಸಿದರು. ಜ.3 ರಂದು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲು ರಸ್ತೆ ಹೋರಾಟ ಸಮಿತಿ ವತಿಯಿಂದ ಸಿದ್ಧತೆ ನಡೆಸಿತ್ತು. ಆದರೆ...
ಸುಳ್ಯ: ದಿವಂಗತ ಸಂತೋಷ್ ಮಡ್ತಿಲ ಅಭಿಮಾನಿ ಬಳಗ ಸುಳ್ಯ ಇವರ ವತಿಯಿಂದ ಅವರ ಪ್ರಥಮ ವರ್ಷದ ಪುಣ್ಯತಿಥಿ ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರವನ್ನು ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸುಳ್ಯದ ಬ್ಲಡ್ ಬ್ಯಾಂಕ್ ನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ. ನೀಲಾಂಬಿಕೈ ನಟರಾಜನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು....
ಅಮರಪಡ್ನೂರು ಗ್ರಾಮದ ದಿ.ಸತೀಶ್ ನಾಯ್ಕ ರವರ ಪುತ್ರ ಚೂಂತಾರು ಯೋಗೀಶ್ ಕುಮಾರ್ ಹೃದಯಾಘಾತದಿಂದ ಡಿ.31ರ ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 22 ವರ್ಷ ವಯಸ್ಸಾಗಿತ್ತು. ಅವರಿಗೆ ಕಳೆದ ಡಿ.27ರಂದು ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ...
ಇಂದು(ಜ.01) ತಂಟೆಪ್ಪಾಡಿ ನಿನಾದದಲ್ಲಿ ಸಾಂಸ್ಕೃತಿಕ ನೆನಪು: ತಂಟೆಪ್ಪಾಡಿ ಶಂಭಟ್ಟರು ಹಾಗೂ ಯಕ್ಷಗಾನ ಶ್ರೀದೇವಿ ಮಹಾತ್ಮೆ
ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು(ಜ.01) 'ತಂಟೆಪ್ಪಾಡಿ ಶಂಭಟ್ಟರು' ಒಂದು ಸಾಂಸ್ಕೃತಿಕ ನೆನಪು ಹಾಗೂ ಪಾವಂಜೆ ಮೇಳದಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ನಡೆಯಲಿದೆ. ಸಂಜೆ 4.45ರಿಂದ ನಡೆಯಲಿರುವ 'ತಂಟೆಪ್ಪಾಡಿ ಶಂಭಟ್ಟರು' ಒಂದು ಸಾಂಸ್ಕೃತಿಕ ನೆನಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಶ್ರೀಕೃಷ್ಣ ಚೊಕ್ಕಾಡಿ ವಹಿಸಲಿದ್ದಾರೆ. ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್ ನಾಕೂರು 'ಶಂಭಟ್ಟರ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಿಟ್ ವಿತರಣೆ " ವಾತ್ಸಲ್ಯ ಕಾರ್ಯಕ್ರಮ"ನಡೆಯಿತು. ಈ ವಾತ್ಸಲ್ಯ ಕಾರ್ಯಕ್ರಮವು ಹೇಮಾವತಿ ಹೆಗ್ಗಡೆ ಯವರಆಶಯದಂತೆ ಕಡು ಬಡವ ಪಲಾನುಭವಿಗಳಿಗೆ ಜೀವನಾಶ್ಯಕತೆಗೆ ಬೇಕಾದ ಸಾಮಾಗ್ರಿಗಳನ್ನು ಹಾಗೂಕುಟುಂಬದಲ್ಲಿ ದುಡಿಯಲು ಅಶಕ್ತರಾದವರಿಗೆ ಮನೆಗೆ ಬೇಕಾದ ಸವಲತ್ತುಗಳು, ಮಾಶಸಾನ, ಅನಾರೋಗ್ಯಸ್ಥರಿಗೆಔಷಧಿ ಮತ್ತು ಮನೆಯ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳುವುದು ಹಾಗೂ ಆಶಕ್ತ ಮತ್ತು ನಿರ್ಗತಿಕರಿಗೆ ಸಹಕಾರನೀಡುವುದು...
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಆಂಬುಲೆನ್ಸ್ ಖರೀದಿಸುವ ಯೋಜನೆಗೆ. ಗುತ್ತಿಗಾರು ರಾಘವೇಂದ್ರ ಬೇಕರಿ ಮಾಲಕ ಅನಿಲ್ ಕುಮಾರ್ ಸಹಾಯಧನ ವಿತರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕೋಶಾಧಿಕಾರಿ ಟ್ರಸ್ಟ್ ಸದಸ್ಯರಾದ ಮೋಹನ್ ದಾಸ್ ಶಿರಾಜೆ, ವಿಶ್ವನಾಥ್ ಅಚಳ್ಳಿ ಉಪಸ್ಥಿತರಿದ್ದರು.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಆಂಬುಲೆನ್ಸ್ ಖರೀದಿಸುವ ಯೋಜನೆಗೆ ಗುತ್ತಿಗಾರು ಬದ್ರಿಯಾ ಜುಮ್ಮಾ ಮಸೀದಿ ಪರವಾಗಿ ಅಧ್ಯಕ್ಷ ಅಬ್ಬಾಸ್ ವಳಲಂಬೆ ಮತ್ತು ಧರ್ಮಗುರು ಅಬ್ದುಲ್ ನಾಸಿರ್ ಸಖಾಫಿ ಉಸ್ತಾದ್ ಸಹಾಯ ಧನ ವಿತರಿಸಿದರು . ಈ ಸಂದರ್ಭದಲ್ಲಿ ಮೊಯಿದುಕುಂಞ ಬಾಕಿಲ, ಮಜೀದ್ ವಳಲಂಬೆ, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಕೋಶಾಧಿಕಾರಿ...
ಸುಳ್ಯ ನಗರದ ವಸತಿಗೃಹವೊಂದರಲ್ಲಿ ಅನ್ಯ ಕೋಮಿನ ಯುವಕ ಯುವತಿ ಇರುವ ಬಗ್ಗೆ ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ವರದಿಯಾಗಿದೆ.ಯುವತಿ ಹಾಗೂ ಯುವಕ ಕೇರಳ ಮೂಲದವರಾಗಿದ್ದು, ಯುವತಿಯ ಕುರಿತು ಕೇರಳದ ಠಾಣೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಯುವತಿ ಪತ್ತೆಯಾಗಿರುವ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರನ್ನು...
Loading posts...
All posts loaded
No more posts
