- Tuesday
- August 18th, 2026
ನಾಲ್ಕೂರು ಗ್ರಾಮದ ಹಲ್ಗುಜಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಜ.13 ರಿಂದ ಜ.16 ರವರೆಗೆ ಶ್ರೀ ದೈವಗಳ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದರ ಪ್ರಯುಕ್ತ ಜ.01 ರ ಶನಿವಾರದಂದು ಚಪ್ಪರ ಮಹೂರ್ತ ಮಾಡಲಾಯಿತು.ಈ ಸಂದರ್ಭದಲ್ಲಿ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ನಿಸರ್ಗ ಯುವಕ ಮಂಡಲ ಐನೆಕಿದು ಇದರ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸಾಮಾನ್ಯ ಸಭೆಯು ಜ.02 ರಂದು ಐನೆಕಿದು ಶಾಲೆಯಲ್ಲಿ ನಡೆಯಿತು.2022ನೇ ಸಾಲಿನ ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾಗಿ ಅಜಿತ್ ಕಲ್ಲೇರಿ, ಉಪಾಧ್ಯಕ್ಷರಾಗಿ ಅಶೋಕ್ ಐಪಿನಡ್ಕ, ಕಾರ್ಯದರ್ಶಿಯಾಗಿ ಭರತ್ ವಾಡ್ಯಪ್ಪನ ಮನೆ, ಜೊತೆ ಕಾರ್ಯದರ್ಶಿಯಾಗಿ ಕುಶನ್ ನೆಕ್ರಾಜೆ, ಕೋಶಾಧಿಕಾರಿಯಾಗಿ ಸುಹಾಸ್ ಕೋಟೆಬೈಲು,...
ಕಳಂಜ ಅಲ್ ಫಲಾಹ್ ಯೂತ್ ಕ್ಲಬ್ ಸದಸ್ಯರಿಂದ ಗ್ರಾಮದ ಮಣಿಮಜಲು ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು. ಈ ಶ್ರಮದಾನದಲ್ಲಿ ಅಲ್ ಫಲಾಹ್ ಯೂತ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಭಾಗಿಗಳಾಗಿದ್ದರು.
ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಜ.01ರಂದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಕಾಲಮಿತಿ ಯಕ್ಷಗಾನ ಬಯಲಾಟ 'ಶ್ರೀದೇವಿ ಮಹಾತ್ಮೆ' ವಿಜೃಂಭಣೆಯಿಂದ ನಡೆಯಿತು. ಅನೇಕ ಪ್ರೇಕ್ಷಕರು, ಕಲಾಭಿಮಾನಿಗಳು ಉಪಸ್ಥಿತರಿದ್ದು ಯಕ್ಷಗಾನದ ಸವಿಯುಂಡರು. ಇದಕ್ಕೂ ಮುಂಚಿತವಾಗಿ ಸಂಜೆ 'ತಂಟೆಪ್ಪಾಡಿ...
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು. ಒಡಿಯೂರು ಸಂಘದ ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಗುತ್ತಿಗಾರಿನ ಅಕ್ಷಯ್ ಪುಟ್ಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರ ನಾಯಕತ್ವದ ಎನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ನಿಟ್ಟೆ ತಂಡ ವಿಟಿಯು ಮಂಗಳೂರು ಝೋನ್ ಪುಟ್ ಬಾಲ್ ಮ್ಯಾಚ್ ನಲ್ಲಿ ವಿಜೇತವಾಗಿ ಡಿ.31 ರಿಂದ ಬೆಂಗಳೂರಿನಲ್ಲಿ ನಡೆದ ಇಂಟರ್ ಝೋನ್ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಅಲ್ಲಿ ಇವರ ತಂಡ ರಾಷ್ಟ್ರೀಯ ತಂಡಕ್ಕೆ...
ಜ.1ರಂದು ದಿ. ಸಂತೋಷ್ ಮಡ್ತಿಲ ಅಭಿಮಾನಿ ಬಳಗದ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅವರ ಪ್ರಥಮ ವರ್ಷದ ಪುಣ್ಯತಿಥಿ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಜ.1 ರಂದು ನಡೆಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ವೈದ್ಯಾಧಿಕಾರಿ ಡಾ. ಕರುಣಾಕರ, ಡಾ. ಹಿಮಕರ, ದೊಡ್ಡಣ್ಣ...
ಸರಕಾರಿ ಮಾದರಿ ಶಾಲೆ ಗುತ್ತಿಗಾರು ಇಲ್ಲಿನ ದೈಹಿಕ ಶಿಕ್ಷಕರಾದ ದಯಾನಂದ ಮುತ್ಲಾಜೆ ಅವರು ಡಿ. 31 ರಂದು ನಿವೃತ್ತರಾದರು. ಇವರಿಗೆ ಪ್ರಾ.ಶಾಲಾ ಶಿಕ್ಷಕರ ಸಂಘ ಸುಳ್ಯ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ್ ಗೌಡ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಅತ್ಯಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ತುಂಬತ್ತಾಜೆ, ಉಪಾಧ್ಯಕ್ಷ ಕುಶಾಲಪ್ಪ...
ಉಡುಪಿಯಲ್ಲಿ ಬೃಹತ್ ಜವುಳಿ ಪಾರ್ಕ್ ಅನ್ನು ನಿರ್ಮಾಣ ಮಾಡಲಾಗುವುದು. ಇಲ್ಲಿ ಬಾರೀ ಪ್ರಮಾಣದಲ್ಲಿ ಜವುಳಿ ಉದ್ದಿಮೆಯನ್ನು ಆರಂಭಿಸಲಾಗುವುದು. ಸುಮಾರು 20 ಎಕರೆ ಪ್ರದೇಶದಲ್ಲಿ ಶೀಘ್ರ ಜವುಳಿ ಪಾರ್ಕ್ ನಿರ್ಮಾಣಗೊಳ್ಳಲಿದೆ. ಈ ಮೂಲಕ ಸಹಸ್ರಾರು ಜನರಿಗೆ ಉದ್ಯೋಗವಕಾಶ ದೊರಯಲಿದೆ. ಜವುಳಿ ಪಾರ್ಕ್ ಮಾಡಲು ಬೇಕಾದ ಯೋಜನೆಗಳನ್ನು ಸಿದ್ದಪಡಿಸಲಾಗಿದ್ದು ಸರಕಾರ ಮಟ್ಟದಲ್ಲಿ ಆಗಬೇಕಾದ ನಿಯಮಗಳನ್ನು ಶೀಘ್ರ ರೂಪಿಸಿ ಶೀಘ್ರ...
ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಶಾಖೆಯನ್ನು ತೆರೆಯುವ ಬಗ್ಗೆ ಕೃಷಿಕರ ಸಭೆಯನ್ನು ಜ.1 ರಂದು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ "ರೈತರು ಹಾಗೂ ಅಡಿಕೆ ಬೆಳೆಗಾರರ ಪರವಾಗಿ ಇರುವ ಕ್ಯಾಂಪ್ಕೋ ಸಂಸ್ಥೆಯ ಶಾಖೆಯನ್ನು ತೆರೆದರೆ ಇಲ್ಲಿಯ ಕೃಷಿಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ನಾವು...
Loading posts...
All posts loaded
No more posts
