ಒಂದು ತಿಂಗಳೊಳಗೆ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಭರವಸೆ – ಹರೀಶ್ ಕಂಜಿಪಿಲಿ ; ಹೋರಾಟ ಸಮಿತಿಯ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ರಿಂದ ಪ್ರತಿಭಟನೆ ಹಿಂತೆಗೆತ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಸಚಿವರ ವಿಶೇಷ ಅನುದಾನದಿಂದ ರೂ.30 ಲಕ್ಷ ಅನುದಾನ ಮಂಜೂರಾಗಿದ್ದು ಗುದ್ದಲಿ ಪೂಜೆಯು ಜ.1ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಶುಭಹಾರೈಸಿದರು. ಜ.3 ರಂದು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಲು ರಸ್ತೆ ಹೋರಾಟ ಸಮಿತಿ ವತಿಯಿಂದ ಸಿದ್ಧತೆ ನಡೆಸಿತ್ತು. ಆದರೆ ಇಂದು ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ ಮತ್ತು ಒಂದು ತಿಂಗಳೊಳಗಾಗಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಮುಚ್ಚಿನಡ್ಕ ಪಾಂಬಾರು ಅಮಲ ರಸ್ತೆ ಡಾಮರೀಕರಣವಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡಿರುವುದಾಗಿ ಹೋರಾಟ ಸಮಿತಿ ಅಧ್ಯಕ್ಷ ಪಾಲೆಪ್ಪಾಡಿ ಡಾ.ಬಾಲಸುಬ್ರಹ್ಮಣ್ಯ ಭಟ್ ತಿಳಿಸಿದರು. ಗ್ರಾಮ ಪಂಚಾಯತ್ ಎದುರು ಪ್ರತಿಭಟನೆಗೆ ಮುಂದೆ 45 ದಿನಗಳೊಳಗಾಗಿ ರಸ್ತೆ ಡಾಮರೀಕರಣಗೊಳ್ಳದೆ ಇದ್ದಲ್ಲಿ ನಮ್ಮಬೇಡಿಕೆ ಈಡೇರದಿದ್ದಲ್ಲಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಉಪಾಧ್ಯಕ್ಷ ವಿಕ್ರಂ ಪೈ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಜ್ ಕುಕ್ಕೇಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಎ.ಪಿ.ಎಂ.ಸಿ. ಉಪಾಧ್ಯಕ್ಷ ನವೀನ್ ಕುಮಾರ್ ಸಾರಕರೆ, ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ ಕಲ್ಲಗದ್ದೆ, ಮಮತ ಉದ್ದಂಪಾಡಿ, ಸುಂದರಲಿಂಗಂ, ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಮಡ್ತಿಲ, ಪುರಂದರ ಶಾಂತಿಮೂಲೆ, ವಾಸುದೇವ ನಿಡುಬೆ, ಮಹೇಶ ಜಬಳೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಡಾ.ಬಾಲಸುಬ್ರಹ್ಮಣ್ಯ ಭಟ್, ಜಯಪ್ರಸಾದ್ ಕಜೆತ್ತಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಡಾ.ಬಾಲಸುಬ್ರಹ್ಮಣ್ಯ ಭಟ್, ಜಯಪ್ರಸಾದ್ ಕಜೆತ್ತಡ್ಕ, ರಾಜೀವಿ ಲಾವಂತಡ್ಕ, ಹೇಮಂತ್ ಮಠ, , ಶಿವರಾಮ ನೆಕ್ರೆಪ್ಪಾಡಿ ಪ್ರದೀಪ್ ಪಾಲೆಪ್ಪಾಡಿ, ಶೇಖರ ಮಡ್ತಿಲ,ಧರ್ಮಪಾಲ ಲಾವಂತಡ್ಕ, ನಾಗಪ್ಪ ಪಾಲೆಪ್ಪಾಡಿ, ಶಿವಪ್ರಸಾದ್ ಕಟ್ಟತ್ತಾರು, ಕುಮಾರ ಕಟ್ಟತ್ತಾರು ಹಾಗೂ ಊರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಂತರಾಮ ಕಣಿಲೆಗುಂಡಿ ಸ್ವಾಗತಿಸಿ, ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading