ಅ.16 : ಕನಕಮಜಲು ಪ್ರಾ.ಕೃ.ಪ. ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ

ನೂರು ವರ್ಷಗಳನ್ನು ದಾಟಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ಅಡ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಅ 16 ರಂದು ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ನಡೆಯಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಾ .ಗೋಪಾಲಕೃಷ್ಣ ಭಟ್ ಅವರು ತಿಳಿಸಿದ್ದಾರೆ.ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ...

ಗುತ್ತಿಗಾರು : ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನ

ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2 ರಿಂದ 12ರವರೆಗೆ ಅಮ್ಮನಿಗಾಗಿ ಒಂದು ಪುಸ್ತಕ ಅಭಿಯಾನ ಕಾರ್ಯಕ್ರಮ ಗ್ರಂಥಾಲಯದಲ್ಲಿ ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಭತ್ತು ಅಂಗನವಾಡಿ ಕೇಂದ್ರದ ಆರು ವರ್ಷದ ಒಳಗಿನ ಮಕ್ಕಳು ಪಾಲ್ಗೊಂಡು ರಾಜ್ಯ ವ್ಯಾಪ್ತಿ ಅಭಿಯಾನದ ಕೇಂದ್ರ ಬಿಂದುಗಳಾಗಿರುತ್ತಾರೆ. ಯಾವುದೇ ವಿಷಯವನ್ನಾದರೂ ಸತತವಾಗಿ ಮಾಡುವುದರಿಂದ ಮಾತ್ರ ಸಾಧಿಸಲು ಸಾಧ್ಯ ಆದ್ದರಿಂದ ಎಳುವೆಯಲ್ಲಿ...
Ad Widget

ವಳಲಂಬೆ : ಸಿಡಿಲು ಬಡಿದು ಮನೆ,ಕೊಟ್ಟಿಗೆ ಹಾಗೂ ವಯರಿಂಗ್ ಗೆ ಹಾನಿ

ಗುತ್ತಿಗಾರು ಪರಿಸರದಲ್ಲಿ ಅ.11 ರಂದು ಭಾರಿ ಗುಡುಗು ಹಾಗೂ ಮಳೆಯಿಂದಾಗಿ ಅಪಾರ ಹಾನಿಯಾದ ಘಟನೆ ವರದಿಯಾಗಿದೆ. ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿಯಾಗಿರುವ ಮಣಿಯಾನ ಪುರುಷೋತ್ತಮ ರವರ ಮನೆಗೆ ಸಿಡಿಲು ಬಡಿದು ಮೀಟರ್ ವರೆಗಿನ ವಯರಿಂಗ್ ಹಾಗೂ ಸರ್ವಿಸ್ ವಯರ್ , ಮೈನ್ ಸ್ವಿಚ್ ಬೋರ್ಡ್ ಸುಟ್ಟುಹೋಗಿದೆ. ಮನೆಯ ಗೋಡೆಯಲ್ಲಿ ಬಿರುಕು...

ಅಡ್ಡನಪಾರೆ : ಸಿಡಿಲು ಬಡಿದು ಮನೆಗೆ ಹಾನಿ – ಲಕ್ಷಾಂತರ ನಷ್ಟ

ದೇವಚಳ್ಳ ಗ್ರಾಮದ ಅಡ್ಡನಪಾರೆ ರವೀಂದ್ರ ಕಾನಾವು ಅವರ ಮನೆಗೆ ಅ.11 ರ ಸಂಜೆ ಸಿಡಿಲು ಬಡಿದು ಮನೆಗೆ ಭಾರಿ ಹಾನಿಯಾಗಿರುವ ಘಟನೆ ನಡೆದಿದೆ. ಸಂಜೆ 5.30 ರ ಸುಮಾರಿಗೆ ಮನೆಯ ಮಾಡಿಗೆ ಸಿಡಿಲು ಬಡಿದು ಮನೆಯ ಒಂದು ಭಾಗದ ಹೆಂಚು, ಮನೆಯ ಸಂಪೂರ್ಣ ವಯರಿಂಗ್, ಇಲೆಕ್ಟ್ರಾನಿಕ್ ಉಪಕರಣ, ಇನ್ವರ್ಟರ್ ಸಂಪೂರ್ಣ ಹಾನಿಗೊಂಡಿದೆ. ಲಕ್ಷಾಂತರ ನಷ್ಟ ಸಂಭವಿಸಿದ್ದು...

ನಿರಂಜನ ಕಡ್ಲಾರು ಸಾಹಿತ್ಯದಲ್ಲಿ ಅಂಕಿತಾ ಕಡ್ಲಾರು ಕಂಠಸಿರಿಯಲ್ಲಿ ಮೂಡಿದ ಭಕ್ತಿಗೀತೆ ಬಿಡುಗಡೆ

ತುಳುನಾಡಿನ ಮಹಾಶಕ್ತಿಯಾಗಿರುವ ಕಲ್ಲುರ್ಟಿ ದೈವದ "ಅಪ್ಪೆ ಕಲ್ಲುರ್ಟಿ" ಎಂಬ ತುಳು ಭಕ್ತಿಗೀತೆ ಶ್ರೀ ಕ್ಷೇತ್ರ ಪನೋಲಿಬೈಲಿನಲ್ಲಿ ಇಂದು ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಶ್ರೀ ಕ್ಷೇತ್ರ ಪನೋಲಿಬೈಲಿನ ಮುಖ್ಯ ಅರ್ಚಕರಾದ ವಾಸುದೇವ ಮೂಲ್ಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಾರಾಯಣ ಮೂಲ್ಯ ಮತ್ತು ಶ್ರೀ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ದಯಾನಂದ್ ಕುಲಾಲ್ ಭಂಡಾರ ಮನೆ ಪನೋಲಿಬೈಲು ಮತ್ತು ಕೇಶವ...

ನಡುಗಲ್ಲು : ಮಕ್ಕಳ ಭಜನಾ ತರಬೇತಿ ಶಿಬಿರ ಸಮಾರೋಪ

ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು - ನಾಲ್ಕೂರು ಗ್ರಾಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನಾಲ್ಕೂರು ಒಕ್ಕೂಟ ಹಾಗೂ ತಾಲೂಕು ಭಜನಾ ಪರಿಷತ್ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮರಕತ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ...

ಎಲಿಮಲೆ : ಸ್ವಚ್ಛತಾ ಕಾರ್ಯಕ್ರಮ

ಮಿತ್ರ ಬಳಗ ಎಲಿಮಲೆ " ಇದರ ವತಿಯಿಂದ ಎಲಿಮಲೆಯ ಕೆಳಗಿನ ಪೇಟೆಯಿಂದ ನಾರ್ಣಕಜೆ ವರೆಗೆ ರಸ್ತೆಯ ಎರಡು ಬದಿಯ ಕಾಡುಗಳನ್ನು ಕಡಿದು ಸ್ವಚ್ಛ ಗೊಳಿಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಉದಯಕುಮಾರ್ ಚಳ್ಳ, ಹರಿಪ್ರಸಾದ್ ಬಿವಿ., ಅಪ್ಪು. ರಾಮಕೃಷ್ಣ, ಹರ್ಷಿತ್,ಸುನಿಲ್ ಸುಳ್ಳಿ, ಪ್ರಶಾಂತ್ ಅಂಬೆಕಲ್ಲು, ಜಯಂತ ಸುಳ್ಳಿ, ಮಣಿಕಂಠ ಎಲಿಮಲೆ, ಜಯಂತ ಹರ್ಲಡ್ಕ, ತೀರ್ಥೇಶ್ ಗುಡ್ಡನಮನೆ.ತನುಶ್, ರಂಜಿತ್ ಹೊಟ್ಟುಚೋಡಿ,...

ಸುಳ್ಯ: ಬಾಲಕನ ಚಿಕಿತ್ಸೆಗೆ ನೆರವಾದ “ಆಸರೆ” ತಂಡ

ಸುಳ್ಯದ ಬೀರಮಂಗಲದ ನಿವಾಸಿ 9 ವರ್ಷದ ಹಾರ್ದಿಕ್ ಎಂಬ ಪುಟ್ಟ ಬಾಲಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪ್ರತೀ ತಿಂಗಳು ರೂ.20 ಸಾವಿರದಿಂದ 30 ಸಾವಿರದಂತೆ ವರ್ಷಕ್ಕೆ ಲಕ್ಷಕ್ಕಿಂತಲೂ ಅಧಿಕ ವೆಚ್ಚವಾಗುತ್ತಿದ್ದು, ಈ ವೆಚ್ಚವನ್ನು ಭರಿಸಲು ಮನೆಯವರು ಅಶಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ವಿ.ಜೆ ವಿಖ್ಯಾತ್ ಯೂಟ್ಯೂಬ್ ಚಾನೆಲ್ ಪ್ರಸ್ತುತಪಡಿಸುವ “ಆಸರೆ” ತಂಡವು ಹಾರ್ದಿಕ್ ನ ಚಿಕಿತ್ಸೆಗೆ...

ಐವರ್ನಾಡು : ಬಾಲಕಿಯರ ಖೋಖೋ ತಂಡ ವಿಭಾಗ ಮಟ್ಟಕ್ಕೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಇದರ ವಿಭಾಗ ಮಟ್ಟದ ಖೋಖೋ ಪಂದ್ಯಾಟದಲ್ಲಿ ಸ.ಪ.ಪೂ ಕಾಲೇಜು ಐವರ್ನಾಡು ಹೈಸ್ಕೂಲ್ ಬಾಲಕಿಯರ ತಂಡ ಮತ್ತು ಸ.ಹಿ.ಪ್ರಾ ಶಾಲೆ ಐವರ್ನಾಡು ಬಾಲಕಿಯರ ತಂಡ ಅ.10 ರಂದು ಸ.ಪ.ಪೂ ಕಾಲೇಜು ಬ್ರಹ್ಮಾವರ ಇಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದೆ.

ಐವರ್ನಾಡು : ಶಾಲಾ ಮಕ್ಕಳಿಗೆ ಖೋಖೋ ಜರ್ಸಿ ಮತ್ತು ಕ್ರೀಡಾ ಸಾಮಾಗ್ರಿಗಳ ವಿತರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರು ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಉಡುಪಿ ಬ್ರಹ್ಮಾವರದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರವನ್ನು ಅ.9 ರಂದು ನೀಡಲಾಯಿತು. ಸಹಕಾರ ನೀಡಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಯೋಗೀಶ್ ಕಲ್ಲಗದ್ದೆ, ಶರತ್ ಕುದ್ಮಾರು(ದುಬೈ), ಜಗನ್ನಾಥ್ ಐವರ್ನಾಡು, ರಂಜಿತ್ ಶಾಂತಿಮೂಲೆ, ಪ್ರಮೋದ್ ಕಣಿಲೆಗುಂಡಿ,...
Loading posts...

All posts loaded

No more posts

error: Content is protected !!