ಸುಳ್ಯ: ಬಾಲಕನ ಚಿಕಿತ್ಸೆಗೆ ನೆರವಾದ “ಆಸರೆ” ತಂಡ

ಸುಳ್ಯದ ಬೀರಮಂಗಲದ ನಿವಾಸಿ 9 ವರ್ಷದ ಹಾರ್ದಿಕ್ ಎಂಬ ಪುಟ್ಟ ಬಾಲಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪ್ರತೀ ತಿಂಗಳು ರೂ.20 ಸಾವಿರದಿಂದ 30 ಸಾವಿರದಂತೆ ವರ್ಷಕ್ಕೆ ಲಕ್ಷಕ್ಕಿಂತಲೂ ಅಧಿಕ ವೆಚ್ಚವಾಗುತ್ತಿದ್ದು, ಈ ವೆಚ್ಚವನ್ನು ಭರಿಸಲು ಮನೆಯವರು ಅಶಕ್ತರಾಗಿದ್ದಾರೆ.

. . . . . . . . .

ಈ ನಿಟ್ಟಿನಲ್ಲಿ ವಿ.ಜೆ ವಿಖ್ಯಾತ್ ಯೂಟ್ಯೂಬ್ ಚಾನೆಲ್ ಪ್ರಸ್ತುತಪಡಿಸುವ “ಆಸರೆ” ತಂಡವು ಹಾರ್ದಿಕ್ ನ ಚಿಕಿತ್ಸೆಗೆ ನೆರವು ನೀಡುವ ಸಲುವಾಗಿ ಅಕ್ಟೋಬರ್ 03 ರಂದು “ಭವತಿ ಭಿಕ್ಷಾಂದೇಹಿ” ಎಂಬ ಸಂಕಲ್ಪದೊಂದಿಗೆ ಸುಳ್ಯ ಪೇಟೆ, ಶಾಲಾ ಕಾಲೇಜು ಹಾಗೂ ದಸರಾ ವೇದಿಕೆಯ ಸಭಾಂಗಣದಲ್ಲಿ ವಿಶೇಷ ವೇಷದೊಂದಿಗೆ ತೆರಳಿ ಸಹಾಯಧನ ಸಂಗ್ರಹಿಸುವುದರ ಜೊತೆಗೆ ಆನ್ಲೈನ್ ಮೂಲಕವೂ ಕರ್ನಾಟಕದ ಜನತೆಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿತ್ತು.

. . . . . . .

“ಆಸರೆ” ತಂಡದ ಸದಸ್ಯರು ವಿಶೇಷ ವೇಷದೊಂದಿಗೆ ಸುಳ್ಯ ಪೇಟೆ, ಶಾಲಾ ಕಾಲೇಜು ಹಾಗೂ ದಸರಾ ವೇದಿಕೆಯ ಸಭಾಂಗಣದಲ್ಲಿ ಸಹಾಯಧನ ಸಂಗ್ರಹಕ್ಕಾಗಿ ತೆರಳಿದಾಗ ಸ್ಪಂದಿಸಿದ ಸುಳ್ಯದ ಜನತೆ ಸುಮಾರು 1 ಲಕ್ಷದ 47 ಸಾವಿರದ 359 ರೂಪಾಯಿ(1, 47,359) ಸಹಾಯಧನವನ್ನು ನೀಡಿ ಮಾನವೀಯತೆ ಮೆರೆದರು.

ಅದೇ ರೀತಿ ಆನ್ಲೈನ್ ಮೂಲಕ ಕರ್ನಾಟಕದ ಜನತೆಯಲ್ಲಿ “ಆಸರೆ” ತಂಡ ಮಾಡಿದ ಮನವಿಗೆ ಸ್ಪಂದಿಸಿದ ಕರ್ನಾಟಕದ ಜನತೆ ಸುಮಾರು 35 ಸಾವಿರ ರೂಪಾಯಿ(35,000) ಸಹಾಯಧನವನ್ನು ನೀಡಿ ಮಾನವೀಯತೆ ಮೆರೆದರು. ಅದೇ ರೀತಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ 10 ಸಾವಿರ ರೂಪಾಯಿ(10,000) ಸಹಾಯಧನವನ್ನು ನೀಡಿ ಹಾರ್ದಿಕ್ ನ ಚಿಕಿತ್ಸೆಗೆ ನೆರವಾದರು. ಹಾಗೂ ಆಸರೆ ತಂಡದ ಸದಸ್ಯರು 7 ಸಾವಿರದ 641 ರೂಪಾಯಿ ರೂಪಾಯಿ(7,641) ಸಹಾಯಧನವನ್ನು ನೀಡಿದರು.

ಅಂತಿಮವಾಗಿ ಸಹೃದಯಿ ದಾನಿಗಳಿಂದ ಸಂಗ್ರಹವಾದ ಒಟ್ಟು 2 ಲಕ್ಷ ರೂಪಾಯಿ(2,00,000) ಸಹಾಯಧನವನ್ನು ಅಕ್ಟೋಬರ್ 08 ರಂದು ಸುಳ್ಯದ ದಸರಾ ವೇದಿಕೆಯಲ್ಲಿ ಹಾರ್ದಿಕ್ ನ ಚಿಕಿತ್ಸೆಗಾಗಿ ಹಾರ್ದಿಕ್ ನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

“ಆಸರೆ” ತಂಡದ ಸಹಾಯಧನ ಸಂಗ್ರಹದಲ್ಲಿ ವಿ.ಜೆ ವಿಖ್ಯಾತ್, ಚಂದು ಸುಳ್ಯ, ಧೀರಜ್ ಸುಳ್ಯ ಇವರುಗಳು ವೇಷ ಧರಿಸಿದ್ದು, ಕಿಶೋರ್ ಯಾದವ್, ಕಾರ್ತಿಕ್ ಗೌಡ, ಪ್ರಜ್ವಲ್ ಸುಳ್ಯ, ಸ್ವಾತಿ ಸೌಂಡ್ಸ್, ಮಂಜಣ್ಣ, ರೋಹಿತ್, ಡಿಸೈನ್ ಫ್ಯಾಕ್ಟರಿ, ಕಾವಿಲಮ್ಮ ಪ್ರಿಂಟರ್ಸ್, ಯೋಗೀಶ್ ದೇರಾಜೆ, ಭಾಸ್ಕರ್, ಬಾಲು, ನವೀನ, ಜೀವನ್ ಕೆರೆಮೂಲೆ, ರಜನಿ ಕಲರ್ಸ್, ದೀಪಿಕಾ, ರಂಜಿತಾ, ಯಶಸ್ವಿ ಯಾಪಾರೆ, ಎನ್.ಎಸ್ ಫೋಟೋಗ್ರಫಿ, ವಿನಯ ಪ್ರಸಾದ್, ಮುರಳಿ ಕೃಷ್ಣ, ಅದ್ವೈತ್, ಪ್ರಮೋದ್, ವಿಘ್ನೇಶ್, ದಸರಾ ಸಮಿತಿ ಸುಳ್ಯ, ಚಿದಾನಂದ, ಪೋಲೀಸ್ ಠಾಣೆ ಸುಳ್ಯ, ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ, ಶಶಿ ಬ್ರದರ್ಸ್ ಇವರುಗಳು ಸಹಕರಿಸಿದ್ದಾರೆ.

ವರದಿ :- ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading