ಎಲಿಮಲೆಯಲ್ಲಿ 7ನೇ ವರ್ಷದ ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮ – ಸನ್ಮಾನ

ಎಲಿಮಲೆ: ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಸುಳ್ಯ ಪ್ರಖಂಡದ ಅಯೋಧ್ಯೆ ಶಾಖೆ ಎಲಿಮಲೆ ಇದರ ಆಶ್ರಯದಲ್ಲಿ 7ನೇ ವರ್ಷದ ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮವು ನ.28ರಂದು ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಸಂಜೆ ಭಜನಾ ಕಾರ್ಯಕ್ರಮ, ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

. . . . . . . . .

ಸಭಾ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಭಟ್ ಚಳ್ಳ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷದ್ ಅಯೋಧ್ಯೆ ಶಾಖೆ ಎಲಿಮಲೆಯ ಅಧ್ಯಕ್ಷ ಭೋಜಪ್ಪ ಗೌಡ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.ಶ್ರೀದೇವಿ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಿದರು.

. . . . . . .

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಳ್ಯ ತಾಲೂಕು ಸಂಘಚಾಲಕ ಚಂದ್ರಶೇಖರ ತಳೂರು ಆಗಮಿಸಿದ್ದರು. ಗೌರವ ಉಪಸ್ಥಿತರಾಗಿ ದೈವನರ್ತಕ ಹಾಗೂ ಜ್ಯೋತಿಷಿ ಚಿದಾನಂದ ಅಡ್ಡನಪಾರೆ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಕಾರ್ಯದರ್ಶಿ ನವೀನ್ ಎಲಿಮಲೆ , ದುರ್ಗಾವಾಹಿನಿ ಸಂಯೋಜಕಿ ಜಯಂತಿ ಎಲಿಮಲೆ, ಮಾತೃಶಕ್ತಿ ಸಂಯೋಜಕಿ ಶಶಿಕಲಾ ಕಾಡುಜಬಳೆ, ಬಜರಂಗದಳ ಸಂಯೋಜಕ ವಿಕ್ರಾಂತ್ ಚಳ್ಳ, ಅಯೋಧ್ಯೆ ಶಾಖೆಯ ಕಾರ್ಯದರ್ಶಿ ಸುನಿಲ್ ಸುಳ್ಳಿ, ಗೋರಕ್ಷಾ ಪ್ರಮುಖ್ ನಾಗರಾಜ್ ಕೇಪಳಕಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪವರ್‌ಮ್ಯಾನ್ ಅಭಿಷೇಕ್ ಎಲಿಮಲೆ, ನಾಟಿ ವೈದ್ಯೆ ವಸಂತಿ ಹೊಟ್ಟುಚೋಡಿ ಹಾಗೂ ನಿವೃತ್ತ ಅಡುಗೆ ಸಹಾಯಕಿ ಶೇಷಮ್ಮ ಮಣಿಯೂರು ಅವರನ್ನು ಸನ್ಮಾನಿಸಲಾಯಿತು. ಗಜಾನನ ಸಿಙಗಾರಿ ಮೇಳದ ಸದಸ್ಯರಿಂದ ಆಕರ್ಷಕ ಪ್ರದರ್ಶನ ನಡೆಯಿತು.

ಯಕ್ಷಿತ್ ಚಳ್ಳ ಸ್ವಾಗತಿಸಿ, ಸುನಿಲ್ ಸುಳ್ಳಿ ವಂದಿಸಿದರು. ತಶ್ಮಿ ಮಂದ್ರಪ್ಪಾಡಿ ಪ್ರಾರ್ಥಿಸಿದರು. ಉದಯ ಚಳ್ಳ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading