ಕಲ್ಮಕಾರು : ಗಾಳಿ-ಮಳೆಗೆ ಮರ ಬಿದ್ದು ಮನೆ ಧ್ವಂಸ ; ಗಂಭೀರ ಗಾಯಗೊಂಡ ಮಹಿಳೆಯ ಚಿಕಿತ್ಸೆಗೆ ಆರ್ಥಿಕ ನೆರವಿಗೆ ಮನವಿ

ಕಲ್ಮಕಾರು ಗ್ರಾಮದ ಓಂ ಪ್ರಕಾಶ್ ನಿಡುಬೆ ಎಂಬುವವರ ಪತ್ನಿ ಸುಶ್ಮಿತಾ ನಿಡುಬೆ ಅವರ ಆಲೆಟ್ಟಿ ಗ್ರಾಮದ ಚಳ್ಳಂಗಾರು ಎಂಬಲ್ಲಿರುವ ತವರು ಮನೆಯ ಮೇಲೆ ನವೆಂಬರ್ 25ರಂದು ಸುರಿದ ಗಾಳಿ-ಮಳೆಯ ಸಂದರ್ಭದಲ್ಲಿ ಮರವೊಂದು ಬಿದ್ದಿದ್ದು, ಈ ಘಟನೆಯಲ್ಲಿ ಮನೆಯು ಸಂಪೂರ್ಣ ಧ್ವಂಸಗೊಂಡಿದ್ದು, ಸುಶ್ಮಿತಾ ನಿಡುಬೆ ಅವರು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ತಿಳಿದುಬಂದಿದ್ದು, ವೈದ್ಯಕೀಯ ಚಿಕಿತ್ಸೆ ಹಾಗೂ ಇತರ ವೆಚ್ಚಗಳಿಗಾಗಿ ಸುಮಾರು ₹2 ಲಕ್ಷಕ್ಕೂ ಹೆಚ್ಚಿನ ಹಣದ ಅವಶ್ಯಕತೆ ಇರುವುದಾಗಿ ಮನೆಯವರು ತಿಳಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ದಾನಿಗಳು ಹಾಗೂ ಸಹೃದಯಿಗಳು ಕೈಜೋಡಿಸಿ, ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ನೀಡುವಂತೆ ಕೋರಲಾಗಿದೆ. ನೆರವು ನೀಡಲು ಇಚ್ಛಿಸುವವರು ಇಲ್ಲಿ ನೀಡಿರುವ ಸ್ಕ್ಯಾನರ್ ಮೂಲಕ ಅಥವಾ ನೇರವಾಗಿ 9483213730 ಸಂಖ್ಯೆಗೆ ಹಣ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಓಂ ಪ್ರಕಾಶ್ ನಿಡುಬೆ(9483213730) ಅವರನ್ನು ಸಂಪರ್ಕಿಸಬಹುದು.
STATE BANK INDIA
Account number : 37153541066
Branch : Subrahmanya
IFSC CODE : SBIN0040951
Name : Omprakash ಸಹೃದಯಿ ದಾನಿಗಳು ಗೂಗಲ್ ಪೇ ಮೂಲಕ ಹಣ ಪಾವತಿಸಲು ಸಾಧ್ಯವಾಗದೇ ಇದ್ದಲ್ಲಿ ಇಲ್ಲಿ ನೀಡಲಾಗಿರುವ ಅಕೌಂಟ್ ಗೆ ಹಣ ಪಾವತಿ ಮಾಡಬಹುದಾಗಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading