ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ- KSET2026ರ ಅಂತಿಮ ಫಲಿತಾಂಶ ಬಿಡುಗಡೆಯಾಗಿದ್ದು, ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಅಭ್ಯರ್ಥಿಗಳು ಉತ್ತೀರ್ಣರಾಗಿ ರಾಜ್ಯ ಮಟ್ಟದ ಅರ್ಹತೆಯನ್ನು ಪಡೆದಿರುತ್ತಾರೆ, ನಿರಂತರ ಪರಿಶ್ರಮದ ಜೊತೆಗೆ ವಿದ್ಯಾಮಾತಾ ಅಕಾಡೆಮಿಯ ಮೂಲಕ ದಿನನಿತ್ಯ ಪಡೆದ, ರಾತ್ರಿ ನಿರ್ವಹಿಸುವ ಆನ್ಲೈನ್(Online) ಲೈವ್ ತರಗತಿಗಳ ಮೂಲಕ ಈ ಗಣನೀಯ ಸಾಧನೆ ಮಾಡಿದ್ದು, ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಮತ್ತು ತರಬೇತುದಾರರ ತಂಡ ಉತ್ತೀರ್ಣರಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

. . . . . . . . .

ಈ ರೀತಿ ನಡೆಯುತ್ತದೆ ವಿದ್ಯಾಮಾತಾದ ತರಬೇತಿ
2026ನೇ ಸಾಲಿನ ಅರ್ಹತಾ ಪರೀಕ್ಷೆಯ ಪೂರ್ವ ಸಿದ್ದತಾ ತರಬೇತಿಯು ರಾತ್ರಿ 8 ರಿಂದ 10ರವರೆಗೆ ನಡೆಯುವುದರ ಜೊತೆಗೆ ಪ್ರತಿನಿತ್ಯ ಅಣುಕು ಪರೀಕ್ಷೆ (Mock Test), ವಿಷಯಾಧಾರಿತ ತರಗತಿಗಳು ಅಲ್ಲದೇ ವಿಶೇಷ ಮಾಹಿತಿ ಕಾರ್ಯಾಗಾರ ನಡೆದಿರುತ್ತದೆ ಅದಲ್ಲದೆ ಅಧ್ಯಯನ ಸಾಮಾಗ್ರಿ (Study Materials ) ಒದಗಿಸಿ ವಿದ್ಯಾರ್ಥಿಗಳಿಗಿರುವ ಗೊಂದಲಗಳನ್ನು ನಿವಾರಿಸಿ ಪರಿಣಾಮಕಾರಿಯಾಗಿ ತರಬೇತಿ ನಡೆಸಿದ ಕೀರ್ತಿ ವಿದ್ಯಾಮಾತಾ ಅಕಾಡೆಮಿಗೆ ಸಲ್ಲುತ್ತದೆ.

. . . . . . .

ಈ ಹಿಂದಿನ ಅರ್ಹತಾ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿ ಸಾಧನೆ
KSET, NET, KARTET, CTETಗಳಂತಹ ಪ್ರವೇಶ ಪರೀಕ್ಷೆಗಳಲ್ಲಿ ಕಳೆದ 5ವರ್ಷಗಳಲ್ಲಿ 450ಕ್ಕೂ ಅಧಿಕ ಅಭ್ಯರ್ಥಿಗಳು ಉತ್ತೀರ್ಣರಾಗಿರುವುದು ಅಲ್ಲದೇ ವಿವಿಧ ಶಿಕ್ಷಕರ ನೇಮಕಾತಿ ಸೇರಿದಂತೆ IAS, KAS ಬ್ಯಾಂಕಿಂಗ್, ರೈಲ್ವೆ, ಆರ್ಮಿ ಸೇರಿದಂತೆ ವಿವಿಧ ಸರಕಾರಿ ನೇಮಕಾತಿಗಳಿಗೆ ನಿರಂತರವಾಗಿ ತರಬೇತಿಗಳನ್ನು ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು ಇವೆಲ್ಲವೂ ವಿದ್ಯಾಮಾತಾದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

KSET 2026ರಲ್ಲಿ ಉತ್ತೀರ್ಣರಾದ ವಿದ್ಯಾಮಾತಾದ ವಿದ್ಯಾರ್ಥಿಗಳು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವರಹಳ್ಳಿ ಗ್ರಾಮದ ಗುಂಡಡ್ಕ ನಿವಾಸಿ ಪ್ರಸ್ತುತ ನೆಹರು ಮೆಮೋರಿಯಲ್ ಪಿ ಯು ಕಾಲೇಜು ಅರಂತೋಡು ಸುಳ್ಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪದ್ಮ ಕುಮಾರ್ ಜಿ.ಆರ್.

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಾಪೆ ಮಜಲು ನಿವಾಸಿ ಪೊಲೀಸ್ ಇಲಾಖೆಯ ನಿವೃತ್ತ ಸಹಾಯಕ ಉಪನಿರೀಕ್ಷಕರಾದ ಶ್ರೀಧರ ಮಣಿಯಾಣಿ ಇವರ ಪುತ್ರಿ ದಿವ್ಯಶ್ರೀ ಎಸ್.

ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬಂತಹಿತ್ಲು ನಿವಾಸಿ ಪ್ರಸ್ತುತ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಬೋಂದೇಲ್ ಮಂಗಳೂರು ಇಲ್ಲಿ ಶೈಕ್ಷಣಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ಲಕ್ಷ್ಮಿ ಎಸ್.

ಬಂಟ್ವಾಳ ತಾಲೂಕಿನ ಪೆರಾಜೆ ಬುಡೋಳಿ ಗ್ರಾಮದ ಕುಡೋಲು ನಿವಾಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜ್ ವಿಟ್ಲ ಇಲ್ಲಿ ಶೈಕ್ಷಣಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅನುಪಮಾ ಪಿ.

ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಮಡತಡ್ಕ ನಿವಾಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಯನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶಾಲಾಕ್ಷಿ ಎಂ.

ಪುತ್ತೂರು ತಾಲೂಕಿನ ಕೈಕಾರ ಗ್ರಾಮದ ಒಳಮೊಗರು ಅಜ್ಜಿ ಕಲ್ಲು ನಿವಾಸಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತಡ್ಕ ಅಜ್ಜಿ ಕಲ್ಲು ಇಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಚೇತನ ಕುಮಾರಿ ಎ.

ಚಿಕ್ಕಮಗಳೂರು ಜಿಲ್ಲೆಯ ಜಯನಗರದ ಕಾಫಿ ಡೇ ನಿವಾಸಿ ಪ್ರಸ್ತುತ ಶ್ರೀ ಆದಿ ಚುಂಚನಗಿರಿ ಪ್ರೌಢಶಾಲೆ, ಚಿಕ್ಕಮಗಳೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರುಚಿ ಎಸ್.ಕೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ದರ್ಖಾಸು ಮಲೆ ಬೆಟ್ಟು ನಿವಾಸಿ ಪ್ರಸ್ತುತ ಸರಕಾರಿ ಪ್ರಾಥಮಿಕ ಶಾಲೆ ಮಲೆಬೆಟ್ಟು ಕಾರ್ಕಳ ಉಡುಪಿ ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಾನಂದರವರು
ವಿದ್ಯಾಮಾತಾ ಅಕಾಡೆಮಿಯು ನೀಡಿದ ನಿರಂತರ ತರಬೇತಿ ಮತ್ತು ಮಾರ್ಗದರ್ಶನದ ಫಲವಾಗಿ ಉತ್ತೀರ್ಣರಾಗಿರುತ್ತಾರೆ.

ಇದೀಗ 2026ರ ಅರ್ಹತಾ ಪರೀಕ್ಷೆಗಳಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವುದು ಮುಂದಿನ ಉದ್ದೇಶಿತ ತರಬೇತಿಗಳಿಗೆ ಹೊಸ ಉತ್ಸಾಹ ಬಂದಿದ್ದು ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ಮುಂಬರುವ ಅರ್ಹತಾ ಪರೀಕ್ಷೆಗಳ ಮತ್ತು ನೇಮಕಾತಿ ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿಗಳನ್ನು ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು ಆಸಕ್ತರು 96204 68869 ಸಂಖ್ಯೆಯನ್ನು ಸಂಪರ್ಕಿಸಿ ತರಬೇತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading