ಜಾಲ್ಸೂರು : 70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮ

ಆದಿ ದ್ರಾವಿಡ ಸಮಾಜ ಸೇವಾ ಸಂಘ(ರಿ.) ಸುಳ್ಯ ಘಟಕ ಇದರ ಆಶ್ರಯದಲ್ಲಿ ಸ್ವರ ಸಂಗಮ ಪಂಜಿಕ್ಕಲ್ಲು ಇವರ ಸಹಕಾರದೊಂದಿಗೆ ಆರ್.ಪಿ ಕಲಾ ಸೇವಾ ಟ್ರಸ್ಟ್(ರಿ.) ಪಾಂಬಾರು ನೇತ್ರತ್ವದಲ್ಲಿ “70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮ-2026” ನ.22 ರಂದು ಪಂಚಾಯತ್ ಸಭಾಭವನ ಜಾಲ್ಸೂರಿನಲ್ಲಿ ನಡೆಯಿತು.

. . . . . . . . .

ಈ ಕಾರ್ಯಕ್ರಮದಲ್ಲಿ ಗೀತ ಗಾಯನ, ನೃತ್ಯರೂಪಕ, ಸಾಹಿತ್ಯ ಕವಿಗೋಷ್ಠಿ, ಹಾಗೂ ಪ್ರಶಸ್ತಿ ಪ್ರದಾನ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

. . . . . . .

ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಚಂದ್ರ ಕಾವು ಧರ್ಮದರ್ಶಿಗಳು(ಶ್ರೀ ಮಾರಿಯಮ್ಮ ದೇವಿ ಕ್ಷೇತ್ರ ಬoಗ್ಲಗುಡ್ಡೆ ಕಾವು) ದೀಪ ಪ್ರಜ್ವಲನೆ ಮಾಡುವುದರ ಮೂಲಕ ಆರ್.ಪಿ ಕಲಾ ಸೇವಾ ಟ್ರಸ್ಟ್ (ರಿ.) ಪಾಂಬಾರು ಇದರ ಜತೆ ಕಾರ್ಯದರ್ಶಿ ಆಗಿರುವ ವಸಂತಿ ಎಣ್ಮೂರು ಇವರು ಸ್ವಾಗತಿಸಿದರು. ಕು| ಲಾವಣ್ಯ ಮತ್ತು ಕು| ಸಹನ್ಯ ಎಣ್ಮೂರು ಪ್ರಾರ್ಥಿಸಿದರು. ಸಭಾಧ್ಯಕ್ಷರಾಗಿ ಬಾಲಕೃಷ್ಣ ದೊಡ್ಡೇರಿ(ಅಧ್ಯಕ್ಷರು ಆದಿ ದ್ರಾವಿಡ ಸಮಾಜ ಸೇವಾ ಸಂಘ ರಿ. ಸುಳ್ಯ ಘಟಕ) ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಚಂದ್ರಶೇಖರ ಪೆರಾಲು(ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ) ಇವರು ಆಶಯ ಭಾಷಣವನ್ನು ಮಾಡಿದರು. ಬಾಬು ಕೆ ಎಂ ಸ್ಥಾಪಕಾಧ್ಯಕ್ಷರು(ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ಘಟಕ), JFM ಪೂರ್ಣಿಮಾ ಪೆರ್ಲಂಪಾಡಿ(ಅಧ್ಯಕ್ಷರು ಜೆ.ಸಿ. ಐ ಬೆಳ್ಳಾರೆ ಹಾಗೂ ಕವಿಯಿತ್ರಿ), ಶ್ರೀ ವಿಶ್ವನಾಥ್ ಪುಂಚತ್ತಾರು(ಅರಣ್ಯ ವೀಕ್ಷಕರು, ಹಾಗೂ ಸಾಮಾಜಿಕ ಅರಣ್ಯ ವಲಯ ಪುತ್ತೂರು), ಶ್ರೀ ದೀಪಕ್ ಪೈ ಉಪ್ಪಿನಂಗಡಿ(ರಂಗಭೂಮಿ ಕಲಾವಿದರು ಹಾಗೂ ಗಾಯಕರು) ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಆರ್ ಪಿ ಕಲಾ ಸೇವಾ ಟ್ರಸ್ಟ್(ರಿ.) ಪಾಂಬಾರು. ಇದರ ಉಪಾಧ್ಯಕ್ಷರಾಗಿರುವ ರೋಹಿತ್ ಕುರಿಕ್ಕಾರ್ ವಂದಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್(ರಿ.) ಪಾಂಬಾರು ಇದರ ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ ಇವರು ಉಪಸ್ಥಿತರಿದ್ದರು.

ಯಕ್ಷ ಬೊಳ್ಳಿ ದಿನೇಶ್ ರೈ ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಿ ವಿ ಸುರೇಶ್ ದೇವರಗುಂಡ, ಪದ್ಮರಾಜ್ ಬಿ ಸಿ ಚಾರ್ವಕ, ಪೂರ್ಣಿಮಾ ಪಿ ಪೆರ್ಲಂಪಾಡಿ, ರವಿ ಪುತ್ತೂರು, ಮೆಲಿಷ ನಿಶಾಲ್, ಕೆ. ನಿರಂಜನ್ ರಾವ್, ಕೃಷ್ಣ ಬುಳೇರಿಕಟ್ಟೆ ,ರಾಜಸಾಬ್ ದೊಡ್ಮನಿ, ವಿಷ್ಮ ಏಕತಡ್ಕ ಅಜ್ಜಿಕಲ್ಲು, ಸುರೇಶ್ ಚಾರ್ವಕ, ಸದಾನಂದ ಪಡುಬಿದ್ರಿ, ದೀಪಕ್ ಪೈ ಉಪ್ಪಿನಂಗಡಿ, ಡಾ. ಸಚಿನ್ ಸಾಲ್ಯಾನ್ ಹಾಗೂ ಸಂದೇಶ್ ನಾಯಕ್ ಇವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಕಡಬ(ಮಾಜಿ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ), ಡಿ.ವಿ ಸುರೇಶ್ ದೇವರಗುಂಡ(ಹಿರಿಯ ಸ್ಟೇಷನ್ ಅಧೀಕ್ಷಕರು. ರೈಲ್ವೆ), ನಿರಂಜನ್ ರಾವ್ (ಉದ್ಯಮಿಗಳು ಹಾಗೂ ಖ್ಯಾತ ಗಾಯಕರು), ಪದ್ಮರಾಜ್ ಬಿ ಸಿ ಚಾರ್ವಾಕ(ಚಲನಚಿತ್ರ ನಿರ್ದೇಶಕ, ಖ್ಯಾತ ನಿರೂಪಕರು, ಹಾಗೂ ಗಾಯಕರು), ರಾಜ ಸಾಬ್ ದೊಡ್ಮನಿ(ನಿರ್ವಾಹಕರು ಕೆ ಎಸ್ ಆರ್ ಟಿ ಸಿ), ಶಿವಾನಂದ ಪಡುಬಿದ್ರಿ(ಕುಶಲಕರ್ಮಿ ಕೆ ಎಸ್ ಆರ್ ಟಿ ಸಿ), ಡಾ ಸಚಿನ್ ಸಾಲ್ಯಾನ್(ಅಂತಾರಾಷ್ಟ್ರೀಯ ಮಟ್ಟದ ಜಾನಪದ ಕಲಾವಿದರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ತೀರ್ಪುಗಾರರು) ಮುಖ್ಯ ಅತಿಥಿಗಳಾಗಿ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಮಾತನಾಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್(ರಿ.) ಪಾಂಬಾರು ಇದರ ಅಧ್ಯಕ್ಷರಾದ ಶ್ರೀಧರ್ ಎಕ್ಕಡ್ಕ ಇವರು ಉಪಸ್ಥಿಯಲ್ಲಿದ್ದರು.

ಮುಖ್ಯ ಅತಿಥಿಗಳನ್ನು ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ.) ಪಾಂಬಾರು ಇದರ ಸಂಚಾಲಕರಾದ ರವಿ ಪಾಂಬಾರು ಸ್ವಾಗತಿಸಿದರು. ಪ್ರಾಸ್ತವಿಕ ನುಡಿ ಆರ್ ಪಿ ಕಲಾ ಸೇವಾ ಟ್ರಸ್ಟ್(ರಿ.) ಪಾಂಬಾರು ಇದರ ಸಂಯೋಜಕರು ಆಗಿರುವ ಕು. ಪವಿತ್ರ ಯಂ ಬೆಳ್ಳಿಪ್ಪಾಡಿ ನಿರೂಪಿಸಿ ಸಾಹಿತ್ಯ ಕವಿಗೋಷ್ಠಿಯಲ್ಲಿ ಗಿರೀಶ್ ಪೆರಿಯಡ್ಕ, ಸುರೇಶ್ ಕುಮಾರ್ ಚಾರ್ವಾಕ, ಪೂರ್ಣಿಮಾ ಪೆರ್ಲಂಪಾಡಿ, ಎಂ ಎ ಮುಸ್ತಫಾ ಬೆಳ್ಳಾರೆ, ಕವನವನ್ನು ವಾಚಿಸಿದರು.

ಗೀತ ಗಾಯನದಲ್ಲಿ ಸ್ಪರ್ಧಾ ಕಾರ್ಲಪ್ಪಾಡಿ, ಜಿಷಾ ಪಿ ರಾವ್ ನೆಹರೂ ನಗರ, ಗೀತಾ ಕೊಕ್ಕಡ, ಚೈತ್ರಾ ಗದಗ, ಹೇಮಲತಾ ಸಂಪ್ಯ, ಮಹೇಶ್ ಉಬರಡ್ಕ, ಪಲ್ಲವಿ ಸುಳ್ಯ ಹಾಗೂ ಉಮೇಶ್ ಬೆಟ್ಟಂಪಾಡಿ ಹಾಡಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಹಿರಿಯರ ಸಮ್ಮುಖದಲ್ಲಿ ಪ್ರಶಂಸನಾ ಪತ್ರವನ್ನು ಗೌರವಪೂರ್ವಕವಾಗಿ ನೀಡಿ ಅಭಿನಂದಿಸಲಾಯಿತು.

ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಿ ವಿ ಸುರೇಶ್ ದೇವರ ಗುಂಡ, ಪದ್ಮರಾಜ್ ಬಿ ಸಿ ಚಾರ್ವಕ, ಪೂರ್ಣಿಮಾ ಪಿ ಪೆರ್ಲಂಪಾಡಿ, ರವಿ ಪುತ್ತೂರು, ಮೆಲಿಷ ನಿಶಾಲ್, ಕೆ. ನಿರಂಜನ್ ರಾವ್, ಕೃಷ್ಣ ಬುಳೇರಿಕಟ್ಟೆ ,ರಾಜ ಸಬ್ ದೊಡ್ಮನಿ, ವಿಷ್ಮ ಏಕತಡ್ಕ ಅಜ್ಜಿಕಲ್ಲು, ಸುರೇಶ್ ಚಾರ್ವಕ, ಸದಾನಂದ ಪಡುಬಿದ್ರಿ, ದೀಪಕ್ ಪೈ ಉಪ್ಪಿನಂಗಡಿ, ಡಾ. ಸಚಿನ್ ಸಾಲ್ಯಾನ್, ಸಂದೇಶ್ ನಾಯಕ್ ಇವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.ಕಡಬ(ಮಾಜಿ ಸದಸ್ಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ), ಡಿ. ವಿ ಸುರೇಶ್ ದೇವರಗುಂಡ( ಹಿರಿಯ ಸ್ಟೇಷನ್ ಅಧೀಕ್ಷಕರು. ರೈಲ್ವೆ), ಶ್ರೀ ನಿರಂಜನ್ ರಾವ್(ಉದ್ಯಮಿಗಳು ಹಾಗೂ ಖ್ಯಾತ ಗಾಯಕರು), ಶ್ರೀ ಪದ್ಮರಾಜ್ ಬಿ ಸಿ ಚಾರ್ವಾಕ(ಚಲನಚಿತ್ರ ನಿರ್ದೇಶಕ, ಖ್ಯಾತ ನಿರೂಪಕರು ಹಾಗೂ ಗಾಯಕರು), ರಾಜಾಸಾಬ್ ದೊಡ್ಮನಿ(ನಿರ್ವಾಹಕರು ಕೆ ಎಸ್ ಆರ್ ಟಿ ಸಿ), ಶಿವಾನಂದ ಪಡುಬಿದ್ರಿ(ಕುಶಲ ಕರ್ಮಿ ಕೆ ಎಸ್ ಆರ್ ಟಿ ಸಿ), ಡಾ. ಸಚಿನ್ ಸಾಲ್ಯಾನ್(ಅಂತಾರಾಷ್ಟ್ರೀಯ ಮಟ್ಟದ ಜಾನಪದ ಕಲಾವಿದರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ತೀರ್ಪುಗಾರರು) ಮುಖ್ಯ ಅತಿಥಿಗಳಾಗಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು. ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಮಾತನಾಡಿದರು. ಆರ್ ಪಿ ಕಲಾ ಸೇವಾ ಟ್ರಸ್ಟ್(ರಿ.) ಪಾಂಬಾರು ಇದರ ಕೋಶಾಧಿಕಾರಿ ಆಗಿರುವ ಸನತ್ ಕೆ ಬೆಳ್ಳಾರೆ ಇವರು ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading