ಸುಬ್ರಹ್ಮಣ್ಯ : “ಕಣ್ಣಿನ ಆರೋಗ್ಯ ಸೂಕ್ಷ್ಮ ಹಾಗೂ ಆರೈಕೆ ಅಗತ್ಯ” : ಡಾ. ಮಂಜುನಾಥ್

ಸುಬ್ರಹ್ಮಣ್ಯ ನವಂಬರ್ 22: “ನಮ್ಮ ದೇಹದ ಎಲ್ಲಾ ಭಾಗಗಳಿಗಿಂತ ಕಣ್ಣು ಬಹಳ ಸೂಕ್ಷ್ಮವಾದಂತಹ ಅಂಗ ಕಣ್ಣು, ಕಣ್ಣಿನ ಆರೈಕೆ ಅತಿ ಅಗತ್ಯ. ನಮಗೆ ಒಂದು ಕಣ್ಣು ಕಾಣದಿದ್ದರೆ ಅದು ಇನ್ನೊಂದು ಕಣ್ಣಿಗೆ ಒತ್ತಡ ತರುವುದರೊಂದಿಗೆ ತೊಂದರೆ ಕೂಡ ಬರಬಹುದು. ಆದ್ದರಿಂದ ಆಗಾಗ ಕಣ್ಣಿನ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಸೂಕ್ತ” ಎಂದು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಮಂಜುನಾಥ್ ನುಡಿದರು.

. . . . . . . . .

ಮಂಗಳೂರು ಪ್ರಸಾದ್ ಸೂಪರ್ ಸ್ಪೆಷಾಲಿಟಿ ನೇತ್ರಾಲಯದ ವೈದ್ಯಾಧಿಕಾರಿ ಡಾ. ಸಚಿತ ಅವರು ಮಾತನಾಡಿ “ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಆಗಾಗ ಕಣ್ಣಿನ ತಪಾಸಣೆ ಮಾಡುತ್ತಿರಬೇಕು. ಕಣ್ಣಿನ ತೊಂದರೆ ಬಂದಾಗ ಮಾತ್ರ ಅಲ್ಲ ಹಾಗೆಯೇ ನಮ್ಮ ಕಣ್ಣನ್ನು ಹೊಳಪಾಗಿ ಹಾಗೂ ಸುರಕ್ಷಿತವಾಗಿ ಇರುವಲ್ಲಿ ನಾವು ಸೇವಿಸುವ ತರಕಾರಿಯ ಹಾಗೂ ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಬಲ್ಲವು. ಹಾಗಿದ್ದಲ್ಲಿ ನಾವು ಮರಣದ ನಂತರ ನಮ್ಮ ಕಣ್ಣನ್ನು ದಾನ ಮಾಡಬಹುದು. ಅದಕ್ಕೆ ಅದಕ್ಕೆ ಹೇಳುವುದು ‘ನೇತ್ರದಾನ ಮಹಾದಾನ’” ಎಂದು ನುಡಿದರು.

. . . . . . .

ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು.

ವೇದಿಕೆಯಲ್ಲಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಶ್ಮಿ ರೈ, ರವಿ ಕಕ್ಕೆಪದವು ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಮಾದವ ದೇವರಗದ್ದೆ, ಶಿಬಿರದ ಸಂಯೋಜಕ ಗೋಪಾಲ ಎಣ್ಣೆಮಜಲು, ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ನಿರ್ದೇಶಕ ಲೋಕೇಶ್ ಬಿ ಎಂ, ರೋಟರಿ ಕ್ಲಬ್ ನ ಸುದರ್ಶನ ಶೆಟ್ಟಿ, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಹರ್, ಆರೋಗ್ಯ ನಿರೀಕ್ಷಕರಾದ ಬಸವರಾಜ, ರವಿಶಂಕರ್, ಉಮ್ಮರ್ ಖಾನ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಮಾರು 70ಕ್ಕಿಂತಲೂ ಅಧಿಕ ಫಲಾನುಭವಿಗಳು ತಪಾಸಣೆ ಮಾಡಿಸಿಕೊಂಡರು. ಅಲ್ಲದೆ 10 ಜನರಿಗೆ ಕ್ಯಾಟ್ ರಾಟ್ ಸರ್ಜರಿಗೆ ಸೂಚಿಸಿ ವ್ಯವಸ್ಥೆ ಮಾಡಿದರು. ಶಿಬಿರದ ಯೋಜನೆ ನಿರ್ದೇಶಕ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲು ಎಲ್ಲರನ್ನು ಸ್ವಾಗತಿಸಿದರು. ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಬಸವರಾಜ್ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading