ಕುಲ್ಕುಂದ : ಶ್ರೀ ಶೃಂಗೇರಿ ಶಾರದಾ ಪೀಠ ಧರ್ಮಾಭ್ಯುದಯ ಧರ್ಮಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭ ; “ನಮ್ಮ ಸಂಸ್ಕೃತಿಯನ್ನು ಅರಿತುಕೊಂಡರೆ ಭವ್ಯ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ” : ಬಾಲಕೃಷ್ಣ ಬೋರ್ಕರ್

ಸುಬ್ರಹ್ಮಣ್ಯ : “ಸಂಸ್ಕಾರಯುತ ಧಾರ್ಮಿಕ ಶಿಕ್ಷಣವನ್ನು ಒಂದರಿಂದ ಒಂಬತ್ತನೇ ತರಗತಿಯ ಹಿಂದು ಮಕ್ಕಳಿಗೆ ಶಾರದಾ ಪೀಠ ಧರ್ಮಾಭ್ಯುದಯ ಧರ್ಮಶಿಕ್ಷಣ ನೀಡುತ್ತಿದೆ. ವೇದಗಳು, ಉಪನಿಷತ್ತುಗಳು, ಪುರಾಣಗಳು, ಆಚಾರ-ವಿಚಾರ, ನಮ್ಮ ಕೈಂಕಾರ್ಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಚಿಕ್ಕ ಮಕ್ಕಳಿಗೆ ದಾರೆ ಎರೆಯುವ ಮುಖಾಂತರ, ಜೊತೆಗೆ ಸನಾತನ ಸಂಸ್ಕೃತಿಯ ಅರಿವನ್ನು ಮೂಡಿಸುವ ಕಾರ್ಯಕ್ರಮದಲ್ಲಿ ನಾವು ತೊಡಗಿಕೊಂಡಿದ್ದೇವೆ. ಸಮಾಜದಲ್ಲಿ ನಡೆಯುವ ದುಷ್ಪರಿಣಾಮಗಳ ಬಗ್ಗೆ ನಮಗೆ ಅರಿವಿದೆ. ಅದಕ್ಕೆ ತಿಲಾಂಜಲಿ ನೀಡುವ ಕಾರ್ಯಕ್ರಮ ಇದಾಗಿದೆ. ಮಕ್ಕಳಿಗೆ ಯೋಗ್ಯ ಸಂಸ್ಕಾರ ಕೊಡುವ ಮುಖಾಂತರ ಮುಂದಿನ ಉತ್ತಮ ಸಮಾಜ ನಿರ್ಮಾಣಕ್ಕೆ ಈ ಕಾರ್ಯಕ್ರಮ ಸಹಕಾರಿಯಾಗಿದೆ. ಧರ್ಮ ಶಿಕ್ಷಣದ ಹೆಸರಿನಲ್ಲಿ ಬಲವಂತ ಮತಾಂತರ ಹಿಂದೂ ಸಮಾಜ ಆಘಾತಕ್ಕೆ ಒಳಗಾಗುವುದನ್ನು ಕಾಣುತ್ತೇವೆ. ನಮ್ಮತನದ ಅರಿವು ನಮಗೆ ಇಲ್ಲದೆ ಇರುವಂತಹ ನಮ್ಮನ್ನು ನಾವು ಅರಿತಾಗ ಯಾರು ನಮ್ಮನ್ನು ಆಕ್ರಮಣ ಮಾಡಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ನಾವು ಆಳವಾಗಿ ಅರಿತುಕೊಂಡರೆ ಭವ್ಯ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ” ಎಂದು ಧರ್ಮಾಭ್ಯುದಯ ಧಾರ್ಮಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ನುಡಿದರು.

. . . . . . . . .

ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ, ಕರಕಮಲ ಸಂಜಾತರಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠ ಧರ್ಮಾಭ್ಯುದಯ ಧರ್ಮಶಿಕ್ಷಣ ತರಗತಿಯ ಉದ್ಘಾಟನಾ ಸಮಾರಂಭ ಭಾನುವಾರ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಮೂಲದಲ್ಲಿ ನಡೆಯಿತು.

. . . . . . .

ಧರ್ಮಶಿಕ್ಷಣ ಗ್ರಾಮ ಸಮಿತಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯಜ್ಞೇಶ್ ಆಚಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಪುತ್ತೂರು-ಕಡಬ ಧರ್ಮಾಭ್ಯುದಯ ಧಾರ್ಮಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಶ್ರೀ ಅಂಬಿಕಾ ವಿದ್ಯಾಲಯ ಪುತ್ತೂರು ಹಾಗೂ ಧರ್ಮಾಭ್ಯುದಯ ಧಾರ್ಮಿಕ ಸಮಿತಿ ಸಂಚಾಲಕರಾದ ಸುಬ್ರಹ್ಮಣ್ಯ ನಟೋಜ, ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಇದರ ಅಧ್ಯಕ್ಷರಾದ ಗಿರಿಧರ ಸ್ಕಂದ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಮನೋಹರ ನಾಳ, ಧರ್ಮಾಭ್ಯುದಯ ಧಾರ್ಮಿಕ ಸಮಿತಿ ಸಂಚಾಲಕರಾದ ಅಚ್ಯುತ ಗೌಡ, ಗೌರವ ಸಲಹೆಗಾರರಾದ ಅಶೋಕ್ ಮೂಲೆಮಜಲು, ಉಮೇಶ್ ಸಾಯಿರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಇದರ ಅಧ್ಯಕ್ಷರಾದ ಗಿರಿಧರ ಸ್ಕಂದ ಸ್ವಾಗತಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಆಚಾರ್ಯ ವಂದಿಸಿದರು. ರೋಹಿತ್ ಇಂಜಿರಾಡಿ ಕಾರ್ಯಕ್ರಮ ನಿರೂಪಿಸಿದರು.

ಉಪಾಧ್ಯಕ್ಷರಾದ ರಾಜೇಶ್ ಎನ್.ಎಸ್., ಸೋಮಸುಂದರ ಶೆಟ್ಟಿ, ಶಿವರಾಮ ಪಳ್ಳಿಗದ್ದೆ, ಮಹಿಳಾ ಪ್ರಮುಖರಾದ ಶೋಭಾ ಗಿರಿಧರ್, ಯಶೋಧ ಕೃಷ್ಣ, ಜಯನ್ ಡಿಪ್ಪೋ, ಜನಾರ್ಧನ ಪಳ್ಳಿಗದ್ದೆ, ಯಶೋಧ ಕೃಷ್ಣ, ಸುರೇಶ್ ಡಿಷ್ಟೋ, ಭಾರತಿ ದಿನೇಶ್, ವಿನೋದ್, ಪ್ರವೀಣ್ ಚಾಡಿಮನೆ, ಮಿಥುನ್ ಕುಲ್ಕುಂದ, ಭರತ್ ಪಳ್ಳಿಗದ್ದೆ, ವಿಕಾಸ್ ಕುಲ್ಕುಂದ, ರೂಪಿತ್ ಕುಲ್ಕುಂದ ಹಾಗೂ ಸರ್ವಸದಸ್ಯ ಪ್ರಮುಖರು ಇದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading