ಸುಳ್ಯದ ಜನತೆಯ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದಿದ್ದರೆ ಸುಳ್ಯದ ಜನಪ್ರತಿನಿಧಿಗಳ ವಿರುದ್ಧ ಜನರ ಹಕ್ಕಿಗಾಗಿ ಹೋರಾಟ ಮಾಡಬೇಕಿತ್ತು – ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಪ್ರಶ್ನೆ

ಸುಳ್ಯದಲ್ಲಿ ಬಿಜೆಪಿಯಿಂದ 1994 ರಿಂದ ಈಚೇಗೆ ಸನ್ಮಾನ್ಯ ಅಂಗಾರರು ಶಾಸಕರಾಗಿ ಆಯ್ಕೆ ಆಗುತ್ತಿದ್ದಾರೆ, ಪ್ರಸ್ತುತ ಭಾಗೀರಥಿ ಮುರುಳ್ಯ ಆಯ್ಕೆ ಆಗಿದ್ದಾರೆ. ಸುಳ್ಯ ಕ್ಷೇತ್ರಕ್ಕೆ ಒಳಪಟ್ಟಂತೆ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಸಂಸದರು ಕಳೆದ 1991 ರಿಂದ 2008ರ ವರೆಗೆ ಧನಂಜಯ್ ಕುಮಾರ್, 2004 ರಿಂದ 2009ರ ವರೆಗೆ ಡಿ.ವಿ ಸದಾನಂದ ಗೌಡ, 2009 ರಿಂದ 2024ರ ವರೆಗೆ ಮೂರು ಬಾರಿ ನಳಿನ್ ಕುಮಾರ್ ಕಟೀಲ್, 2024 ರಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೀಗೆ 35 ವರ್ಷಗಳ ಸತತ ಆಯ್ಕೆಯೊಂದಿಗೆ ಬಿಜೆಪಿ ಜನಪ್ರತಿನಿಧಿಗಳು ಇರುವುದು ಸುಳ್ಯದ ಜನತೆಗೆ ತಿಳಿದಿರುವ ವಿಚಾರ. ಸಾಲದಕ್ಕೆ ಸುಳ್ಯ ನಗರ ಪಂಚಾಯತ್ ಆಡಳಿತ ಕೂಡಾ ಕಳೆದ 23 ವರ್ಷಗಳಿಂದ ಬಿಜೆಪಿ ಕೈಯಲ್ಲಿ ಇದ್ದರೂ.. ಇದೀಗ ಸುಳ್ಯದ ಜನತೆಯ ಹಕ್ಕಿಗೆ ಬಿಜೆಪಿ ಪಕ್ಷ ಹೋರಾಟ ಮಾಡುತ್ತಿದೆ ಎಂದಾದರೆ ಇವರು ಸುಳ್ಯದ ಜನರನ್ನು ಅವಿದ್ಯಾವಂತರು, ಬುದ್ಧಿ ಭ್ರಮಣೆಯುಳ್ಳವರು ಅಂತ ಭಾವಿಸಿದ್ದಾರಾ? ಅಥವಾ ಇದು ಮುಂಬರುವ ಸ್ಥಳೀಯ ಪಂಚಾಯತ್ ಚುನಾವಣೆಗಾಗಿ ರಚಿಸಿರುವ ಹೊಸ ಸ್ವರೂಪದ ನಾಟಕ ಕಂಪನಿಯ ಅವತಾರವೇ... ? ಎಂದು ಖಾರವಾಗಿ ಉತ್ತರಿಸಬೇಕಾದ ಸಂದರ್ಭ ಅಂತ ನಾನು ಭಾವಿಸುತ್ತೇನೆ. ವಾಸ್ತವವಾಗಿ ಇವರಿಗೆ ಅಭಿವೃದ್ಧಿ ಬಯಸುವ ಮನಸಿದ್ದರೆ, 35 ವರ್ಷಗಳ ಕಾಲ ಜನಪ್ರತಿನಿಧಿಗಳಾಗಿ ಅವಕಾಶ ಸಿಕ್ಕಿದಾಗ ಮಾಡಲಾಗದ ಒಂದು 110 ಕಿವಿ ಸ್ಥಾವರ, ಸುಳ್ಯಕ್ಕೆ ಒಂದು ಕ್ರೀಡಾಂಗಣ,ಸುಳ್ಯಕ್ಕೊಂದು ಬೈಪಾಸ್ ರಸ್ತೆ, ಸುಳ್ಯಕ್ಕೊಂದು ಕಸ ವಿಲೇವಾರಿಗಾಗಿ ಒಂದು ಸುಸಜ್ಜಿತ ಸ್ಥಳ, ಸುಳ್ಯ ತಾಲೂಕಿನ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಿಸದೇ ಇರುವುದನ್ನು ಕಂಡಾಗ,ಇನ್ನು ಇವರಿಗೆ ಯಾವ ಅವಕಾಶ ಕೊಟ್ಟರು ಈ ಜನ್ಮದಲ್ಲಿ ಮಾಡಲು ಸಾಧ್ಯ ಇಲ್ಲ ಅಂತ ಇಡೀ ಸುಳ್ಯದ ಜನತೆ ಮಾತನಾಡುತ್ತಿದ್ದಾರೆ. ಇದು ನೂರಕ್ಕೆ ನೂರು ಸತ್ಯವಾದ ಮಾತು ಕೂಡ ಆಗಿರುತ್ತದೆ. ಇವತ್ತು ಇವರು ರಾಜ್ಯ ಸರ್ಕಾರವನ್ನು ದೂಷಣೆ ಮಾಡುತ್ತಿದ್ದಾರೆ. ಹಾಗಿದ್ದರೆ ನಮ್ಮ ತಾಲೂಕಿನವರೇ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆದ ಸಮಯದಲ್ಲಿ ಈ ಬಿಜೆಪಿ ಗರು ಏನು ಆಕಾಶ ನೋಡಿಕೊಂಡೆ ಕೂತಿದ್ರಾ.....? ಇವತ್ತು ಕರ್ನಾಟಕ ಸರಕಾರವನ್ನು ಗುರಿಯಾಗಿಟ್ಟುಕೊಂಡು ದೂರುತ್ತಿರುವ ಬಿಜೆಪಿಗೆ ಕೇಂದ್ರದಲ್ಲಿ ಒಂದು ಸರಕಾರ ಇದೆ ಅದಕ್ಕೆ ನಮ್ಮ ಜಿಲ್ಲೆಯವರು ಜನಪ್ರತಿನಿಧಿಗಳಾಗಿದ್ದಾರೆ, ಆ ಸರ್ಕಾರಕ್ಕೆ ಕೂಡ ಜಿಲ್ಲೆಯ ತಾಲೂಕಿನ ಅಭಿವೃದ್ಧಿ ಮಾಡುವ ಜವಾಬ್ದಾರಿ ಇದೆ, ಅಲ್ಲಿಂದಲೂ ಅನುದಾನ ತರಿಸಿ ಅಭಿವೃದ್ಧಿ ಮಾಡಬೇಕಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದಷ್ಟು ಕೆಳಮಟ್ಟಕ್ಕೆ ಬಿಜೆಪಿ ಇಳಿಯುತೇ.... ಎಂಬ ನೋವಿನ ಭಾವನೆಯು ಜನಸಾಮಾನ್ಯರಲ್ಲಿ ಎದ್ದು ಕಾಣುತ್ತಿದೆ . ಅಷ್ಟಕ್ಕೂ ಕೆಲವರು, ನನ್ನ ಬಗ್ಗೆನೂ ಪ್ರತಿಭಟನೆ ನೇತೃತ್ವ ವಹಿಸಿರುವವರು ಕಸದ ಬಗ್ಗೆ ಮಾತನಾಡಿದ್ದನ್ನು ಗಮನಿಸಿದರೆ, ಕಳೆದ ಎಷ್ಟು ವರ್ಷಗಳಿಂದ ಸರ್ಕಾರಿ ಸ್ಥಳಗಳಲ್ಲಿ ಕಸ ಹಾಕಿ ತನ್ನ ವರ್ಗಸ್ಥಳದಲ್ಲಿ ಕಸ ಹಾಕಲಾಗಿದೆ ಎಂದು ಬಿಂಬಿಸಿ ನ.ಪ ದಿಂದ ಎಷ್ಟು ಹಣ ಹಗಲು ದರೋಡೆ ಮಾಡಿದ್ದಾರೆ, ಮತ್ತು ತಮ್ಮ ರಾಜಕೀಯ ಉದ್ದೇಶದಿಂದ ಮೀನು ಮಾರುಕಟ್ಟೆ ಏಲಂ ವಿಚಾರದಲ್ಲಿ ಸುಳ್ಯ ನಗರ ಪಂಚಾಯಿತಿಗೆ ಎಷ್ಟು ನಷ್ಟ ಉಂಟು ಮಾಡಿದ್ದಾರೆ...? ಅಂತ ತಿಳಿದುಕೊಳ್ಳಲು ಅವರಿಗೆ ಸ್ವಜನ ಪಕ್ಷಪಾತ ಅಡ್ಡಿ ಬಂತೇ? ಎಂದು ನಾನು ಬಹಳ ಖಾರವಾಗಿ ಪ್ರತಿಭಟನಾ ಬಿಜೆಪಿಗರನ್ನು ಪ್ರಶ್ನಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading