ರಾಷ್ಟ್ರಮಟ್ಟದ ಮಾಧ್ಯಮ ಪ್ರವಾಸಕ್ಕೆ ತೆರಳಿದ ಸುಳ್ಯದ ಯೂಟ್ಯೂಬರ್ ವಿಜೆ ವಿಖ್ಯಾತ್

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ಪತ್ರಿಕಾ ವಾರ್ತಾ ಕಛೇರಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಮಾಧ್ಯಮ ಪ್ರವಾಸಕ್ಕೆ ಸುಳ್ಯದ ಯೂಟ್ಯೂಬರ್ ಹಾಗೂ ಕಂಟೆಂಟ್ ಕ್ರಿಯೇಟರ್ ವಿಜೆ ವಿಖ್ಯಾತ್ ಗುಜರಾತ್ ನ ಏಕ್ತಾ ನಗರಕ್ಕೆ ತೆರಳಿದ್ದಾರೆ. ಗುಜರಾತ್ ನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ವಿಶ್ವದ ಅತೀ ಎತ್ತರದ ಪ್ರತಿಮೆ ‘ಸ್ಟಾಚ್ಯೂ ಆಫ್ ಯೂನಿಟಿ’ ಆವರಣದಲ್ಲಿ ನಡೆಯುತ್ತಿರುವ “ಭಾರತ್ ಪರ್ವ್-2026” ಮತ್ತು “ರಾಷ್ಟ್ರೀಯ ಏಕ್ತಾ ದಿವಸ್” ಆಚರಣೆಯ ಕುರಿತು ವರದಿ ಮಾಡಲು ಕರ್ನಾಟಕದಿಂದ ಆಯ್ಕೆಯಾದ ಕಂಟೆಂಟ್ ಕ್ರಿಯೇಟರ್ ಗಳ ತಂಡದಲ್ಲಿ ವಿಜೆ ವಿಖ್ಯಾತ್ ಸ್ಥಾನ ಪಡೆದಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 30 ರಂದು ಉದ್ಘಾಟಿಸಿರುವ ಈ ಬೃಹತ್ ಸಾಂಸ್ಕೃತಿಕ ಹಬ್ಬ ನವೆಂಬರ್ 15ರ ವರೆಗೆ ನಡೆಯಲಿದ್ದು, ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಘೋಷವಾಕ್ಯದಡಿ ದೇಶದ ಎಲ್ಲಾ ರಾಜ್ಯಗಳ ಕಲೆ, ಸಂಸ್ಕೃತಿ, ಕರಕುಶಲ ಹಾಗೂ ಖಾದ್ಯ ವೈಭವವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading