ಗ್ರಾಹಕರ ವಿಶ್ವಾಸದ 35 ವರ್ಷಗಳ ಯಶಸ್ವಿ ಪಯಣ – 36ನೇ ವರ್ಷಕ್ಕೆ ಕಾಲಿರಿಸಿದ ಸುಳ್ಯದ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್

ಸುಳ್ಯದ ಶಿಲ್ಪಿ ಕುರುಂಜಿ ವೆಂಕಟರಮಣ ಗೌಡರ ದಿವ್ಯಹಸ್ತದಿಂದ ಉದ್ಘಾಟನೆಗೊಂಡು, ಮೋಂಟಡ್ಕ ಬಾಲಕೃಷ್ಣ ಗೌಡರ ದಿವ್ಯಹಸ್ತದಿಂದ ದೀಪೋಜ್ವಲನೆಗೊಂಡ ಈ ಸಂಸ್ಥೆಯು ಅಂದಿನಿಂದ ಇಂದಿನವರೆಗೆ ಗ್ರಾಹಕರ ವಿಶ್ವಾಸ ಮತ್ತು ಪ್ರೀತಿಯನ್ನು ಸಂಪಾದಿಸಿಕೊಂಡು ಮುನ್ನಡೆಯುತ್ತಿದೆ.

. . . . . . . . .

ಗುಣಮಟ್ಟ, ನಂಬಿಕೆ ಹಾಗೂ ಗ್ರಾಹಕ ಸ್ನೇಹಿ ಸೇವೆಯ ಮೂಲಕ ಸ್ವರ್ಣೋದ್ಯಮದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಸುಳ್ಯದ ಮುಖ್ಯರಸ್ತೆಯ ಶ್ರೀಯುತ ದಯಾನಂದ ಕೊಯಿಂಗೋಡಿ ಅವರ ಮಾಲಕತ್ವದ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ಸಂಸ್ಥೆಯು ಯಶಸ್ವಿಯಾಗಿ 35 ವರ್ಷಗಳನ್ನು ಪೂರೈಸಿ 36ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

. . . . . . .

ಸ್ವರ್ಣಾಭರಣ ಕ್ಷೇತ್ರದಲ್ಲಿ ನಂಬಿಕೆಗೆ ಮತ್ತೊಂದು ಹೆಸರಾಗಿ ಬೆಳೆದು ಬಂದಿರುವ ಮುಳಿಯ ಜ್ಯುವೆಲ್ಲರ್ಸ್, ಉತ್ತಮ ಗುಣಮಟ್ಟದ ಆಭರಣಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕ ಸೇವೆಯ ಮೂಲಕ ತನ್ನದೇ ಆದ ಗ್ರಾಹಕ ಬಳಗವನ್ನು ಹೊಂದಿದೆ.

ಸಾಂಪ್ರದಾಯಿಕ ಆಭರಣಗಳ ಸೊಬಗಿನೊಂದಿಗೆ ಆಧುನಿಕ ಕಾಲಘಟ್ಟದ ಫ್ಯಾಷನ್‌ಗೆ ಹೊಂದಿಕೊಳ್ಳುವ ಆಕರ್ಷಕ ವಿನ್ಯಾಸದ ಆಭರಣಗಳ ಅಪಾರ ಸಂಗ್ರಹ ಸಂಸ್ಥೆಯ ವಿಶೇಷತೆಯಾಗಿದೆ. ವೈವಿಧ್ಯಮಯ ವಿನ್ಯಾಸಗಳು, ಆಕರ್ಷಕ ಕಲಾತ್ಮಕತೆ ಹಾಗೂ ಗುಣಮಟ್ಟಕ್ಕೆ ನೀಡುವ ಆದ್ಯತೆ ಗ್ರಾಹಕರನ್ನು ನಿರಂತರವಾಗಿ ಆಕರ್ಷಿಸುತ್ತಿವೆ.

ವ್ಯವಹಾರದಲ್ಲಿ ವಿಶ್ವಾಸವೇ ಮುಖ್ಯ ಎಂಬ ಧ್ಯೇಯದೊಂದಿಗೆ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಗ್ರಾಹಕರ ಮನಗೆದ್ದಿರುವ ಮುಳಿಯ ಜ್ಯುವೆಲ್ಲರ್ಸ್, ಗ್ರಾಹಕರ ಪ್ರೀತಿ, ಸಹಕಾರ ಮತ್ತು ವಿಶ್ವಾಸದ ಬಲದಿಂದ 36ನೇ ವರ್ಷದ ಸಂಭ್ರಮದ ಹೆಜ್ಜೆಯನ್ನಿಡುತ್ತಿದೆ. ಈ ಯಶಸ್ವಿ ಪಯಣ ಸಂಸ್ಥೆಯ ಸೇವಾ ಬದ್ಧತೆ ಮತ್ತು ಗ್ರಾಹಕರೊಂದಿಗಿನ ಆತ್ಮೀಯ ಸಂಬಂಧಕ್ಕೆ ಸಾಕ್ಷಿಯಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading