ಸುಪ್ರೀತ್ ಮೋಂಟಡ್ಕ ಅವರಿಗೆ ಜೇಸಿಐ ನಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್

ಸಮಾಜದಲ್ಲಿ ಸದ್ದಿಲ್ಲದೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೌನಸಾಧಕರನ್ನು ಗುರುತಿಸಿ ಗೌರವಿಸುವುದು ಜೇಸಿಐ ಭಾರತ ವಲಯ 15ರ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿಯಾಗಿರುತ್ತದೆ.

. . . . . . . . .

ಇದರನ್ವಯ ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ ಜೇಸಿಐ ಸಪ್ತಾಹ ಸುಸ್ನಿಲ 2026 ಕಾರ್ಯಕ್ರಮಕ್ಕೆ ಆಗಮಿಸಿದ ಜೇಸಿಐ ಭಾರತ ವಲಯ ಯ15ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಲಯ ಸಂಯೋಜಕರಾದ ಜೆಎಫ್ಎಂ ಲೋಕೇಶ್ ಅಕ್ರಿಕಟ್ಟೆ ಅವರು ಘಟಕದ ಕಾರ್ಯವೖಖರಿಗಳು ಅಂತಯೇ ಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ಜೇಸಿಐ ಕಾರ್ಯಕ್ರಮದಲ್ಲಿ ತೆರೆಯ ಮರೆಯಲ್ಲಿ ಸದಾ ಬೆಂಬಲವಾಗಿದ್ದು, ಪ್ರತಿಯೊಂದು ಜೇಸಿಐಯ ಕಾರ್ಯಕ್ರಮದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾ, ವಲಯ ಮಟ್ಟದಲ್ಲಿಯೂ ಗುರುತಿಸಿಕೊಂಡಿರುವ ಸಾಮಾಜಿಕ, ಧಾರ್ಮಿಕ, ಚಿತ್ರರಂಗ, ರಾಜಕೀಯ ಮುಂದಾಳು, ಮೌನ ಸಾಧಕ ಶ್ರೀ ಸುಪ್ರೀತ್ ಮೋಂಟಡ್ಕರವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಿಭಾಗದ ವಲಯಾಧಿಕಾರಿಗಳಿಂದ ವಿಶೇಷ ಮನ್ನಣೆಯೊಂದಿಗೆ ಗೌರವಪೂರ್ವಕವಾಗಿ
ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್
ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಅಬ್ದುಲ್ಲಾ ಎ, ಗುರುರಾಜ್ ಅಜ್ಜಾವರ, ರವಿರಾಜ್ ಅಡ್ಕಾರ್, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಯು.ಪಿ ಶಿವಾನಂದ, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ನ ಶ್ರೀಹರಿ ಪೈಂದೋಡಿ ಮತ್ತು ಪ್ರಸನ್ನ ಐವರ್ನಾಡು, ಗುರುಪ್ರಸಾದ್ ನಾಯಕ್, ತಾರಾ ಚೂಂತಾರು, ಸುರೇಶ್ ಕಾಮತ್, ವಿನೋದ್ ಮೂಡಗದ್ದೆ, ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading