ಕೃಷಿಕರ ಬದುಕಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಮರುಜಾರಿಗೆ ಆಕ್ರೋಶ – ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ವೆಂಕಟ್ ವಳಲಂಬೆ



ಜನತೆ ನೂರಾರು ವರ್ಷಗಳಿಂದ ಪರಿಸರ, ಕಾಡು, ಜಲ ಮತ್ತು ನೈಸರ್ಗಿಕ ಕೃಷಿಗೆ ಒಗ್ಗಿಕೊಂಡು ಹಲವಾರು ತಲೆಮಾರುಗಳಿಂದ ಜೀವನ ನಡೆಸಿಕೊಂಡಿದ್ದು, ಆರ್ಥಿಕ ಸಮಸ್ಯೆಯನ್ನು ಹೊಂದಿದ್ದರೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಬೆವರು ಸುರಿಸಿ ಜೀವನ ಸಾಗಿಸುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೆ ಮತ್ತೆ ಗಾಯದ ಮೇಲೆ ಬರೆ ಎಳೆಯುವ ಕಾರ್ಯ ಆಗುತ್ತಿದೆ. ಯಾವುದೇ ಸರ್ಕಾರವಿರಲಿ ಅದಕ್ಕೆ ಸರಿಯಾದ ಇಚ್ಛಾ ಶಕ್ತಿಯನ್ನು ಬಳಸಿ ಜನರ ಬದುಕಿಗೆ ತೊಂದರೆ ಆಗದೆ ಸರಕಾರಗಳು ಮುಂದೆ ನಿಂತು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜನರ ಜೊತೆಗಿರುವುದು ಅನಿವಾರ್ಯ. ಮುಂದೆ ಜನರ ಜೊತೆ ಯಾವುದೇ ಹೋರಾಟಕ್ಕೂ ಹಿನ್ನಡೆಯಾಗದಂತೆ ಗಂಭೀರ ಸ್ವರೂಪಕ್ಕೂ ನಾವು ನಮ್ಮ ಕ್ಷೇತ್ರ ಜೊತೆಗೆ ನಿಲ್ಲಲೇ ಬೇಕಾದ ಜವಾಬ್ದಾರಿ ಇದ್ದು ಇದೀಗ ಹಲವಾರು ವರ್ಷಗಳಿಂದ ಮುಂಚೂಣಿಯಲ್ಲಿ ನಿಂತು ಈ ನಾಡಿನ ಜನರ ಜೊತೆ ಕೆಲಸ ಮಾಡುತ್ತಿರುವ ‘ಮಲೆನಾಡು ಹಿತ ರಕ್ಷಣಾ ವೇದಿಕೆ’ ನಿರ್ಧರಿಸುವ ಮುಂದಿನ ಕಾರ್ಯ ಯೋಜನೆ ಜೊತೆ ನಾನು ಹಾಗೂ ಬಿಜೆಪಿ ಮತ್ತು ಪ್ರತಿ ಗ್ರಾಮದ ಪಾರ್ಟಿಯ ಕಾರ್ಯಕರ್ತರು ರೈತರಿಗೆ ಶಕ್ತಿ ತುಂಬ ಕೆಲಸವನ್ನು ಮಾಡುತ್ತಿದ್ದೇವೆ. ಇದು ‘ಕ್ಯಾನ್ಸರ್’ ರೀತಿಯ ವರದಿ, ಇದರಿಂದ ಕೆಲ ಗ್ರಾಮಗಳು ಮಾತ್ರ ಎಂಬ ಭಾವನೆ ನಮ್ಮಲ್ಲಿದೆ ಇದನ್ನು ಬಿಟ್ಟು ಪ್ರತಿ ಗ್ರಾಮಕ್ಕೂ ಮುಂದೆ ಈ ಸಮಸ್ಯೆ ಹಬ್ಬಲಿದೆ. ಮತ್ತು ಆ ಗ್ರಾಮದ ಜೊತೆಗೆ ಎಲ್ಲಾ ಗ್ರಾಮದ ನಾಗರಿಕರು ಕೈಜೋಡಿಸಬೇಕಾಗಿ ವಿನಂತಿಸುತ್ತ ನಾವೆಲ್ಲ ಒಟ್ಟಾಗಿ ಸೇರಿ ನಮ್ಮ ಕ್ಷೇತ್ರದ ರಕ್ಷಣೆ, ರೈತರ ಬದುಕಿನ ಜೊತೆ ಚೆಲ್ಲಾಟವಾಡುವ ಸರ್ಕಾರದ ಅಧಿಕಾರಿಗಳ ಧೋರಣೆ ವಿರುದ್ಧ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ಈ ಮೂಲಕ ವ್ಯಕ್ತಪಡಿಸುತ್ತೇವೆ ಎಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading