ಪಂಜ : ಸ್ಕೌಟ್ ಗೈಡ್ ಗೀತಗಾಯನ ಸ್ಪರ್ಧೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಪಂಜ ಇದರ ಸ್ಕೌಟ್ ಗೈಡ್ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯು ಆಗಸ್ಟ್ 28 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯದ ಸಭಾಂಗಣದಲ್ಲಿ ಜರುಗಿತು.

. . . . . . . . .

 ಈ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್ಎಸ್ ಪಿ.ಯು ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಕೃಷ್ಣ ಭಟ್ ಸ್ಪರ್ಧೆಯನ್ನು ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ದಕ್ಷಿಣ ಕನ್ನಡ ಜಿಲ್ಲಾ ಗೈಡ್ ಆಯುಕ್ತರಾದ ವಿಮಲಾ ರಂಗಯ್ಯ ಭಾಗವಹಿಸಿದರು. ತೀರ್ಪುಗಾರರಾಗಿ ಕೃಷ್ಣಪ್ಪ ಬಂಬಿಲ, ರಾಜ್ ಮುಖೇಶ್ ಸುಳ್ಯ ಹಾಗೂ ಪುರೋಹಿತ್ ಸಚಿನ್ ಶರ್ಮ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ್ ರೈ ಎಸ್ ಸ್ವಾಗತಿಸಿ, ಕೋಶಾಧಿಕಾರಿ ಸೋಮಶೇಖರ ನೆರಳ ವಂದಿಸಿದ ಈ ಕಾರ್ಯಕ್ರಮವನ್ನು ಸ್ಕೌಟ್ ಶಿಕ್ಷಕ ಸತೀಶ್ ನಿರೂಪಿಸಿದರು.

. . . . . . .

ಸ್ಪರ್ಧೆಯ ಫಲಿತಾಂಶ
ಕಬ್ ವಿಭಾಗದಲ್ಲಿ ಪ್ರಥಮ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮರುಳ್ಯ ಅಲೆಕ್ಕಾಡಿ, ದ್ವಿತೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥ
ಬುಲ್ ಬುಲ್ ವಿಭಾಗದಲ್ಲಿ ಪ್ರಥಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ದ್ವಿತೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗತೀರ್ಥ
ಸ್ಕೌಟ್ ವಿಭಾಗ ವಿಭಾಗದಲ್ಲಿ ಪ್ರಥಮ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ, ದ್ವಿತೀಯ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
ಗೈಡ್ ವಿಭಾಗದಲ್ಲಿ ಪ್ರಥಮ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ, ದ್ವಿತೀಯ ಕೆಪಿಎಸ್ ಪ್ರೌಢಶಾಲೆ ಬೆಳ್ಳಾರೆ
ರೋವರ್ ವಿಭಾಗದಲ್ಲಿ ಪ್ರಥಮ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು
ರೇಂಜರ್ ವಿಭಾಗದಲ್ಲಿ ಪ್ರಥಮ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ, ದ್ವಿತೀಯ ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಪಡೆದುಕೊಂಡಿದೆ.
ಸ್ಥಳೀಯ ಸಂಸ್ಥೆಯ ಗೀತ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಶಾಲಾ ತಂಡಗಳು ಜಿಲ್ಲಾಮಟ್ಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೈಡ್ ಆಯುಕ್ತರಾದ ವಿಮಲಾ ರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಎಸ್ ಎಸ್ ಪಿ ಯು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿಯಾದ ನಂದಾ ಭಾಗವಹಿಸಿ ಶುಭ ಹಾರೈಸಿದರು. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಎಸ್ ಎಸ್ ಪಿ ಯು ಸುಬ್ರಹ್ಮಣ್ಯದ ಮುಖ್ಯ ಶಿಕ್ಷಕರು ಅಧ್ಯಾಪಕ ವೃಂದ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಹಾಗೂ ಗೈಡ್ ಶಿಕ್ಷಕಿ ಸ್ಮಿತಾ, ಸ್ಕೌಟ್ ಶಿಕ್ಷಕ ಸತೀಶ್ ಗೀತಗಾಯನ ಸ್ಪರ್ಧೆಯ ಆಯೋಜನೆಯಲ್ಲಿ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading