ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಸುಬ್ರಹ್ಮಣ್ಯ ಆಗಸ್ಟ್ 28 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮಿ ಪೂಜೆಯನ್ನು ಸಡಗರ ಭಕ್ತಿ ಭಾವದಿಂದ ಆಚರಿಸಲಾಯಿತು.

. . . . . . . . .

ಬೆಳಿಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಹೊಸಳಿಗಮ್ಮ ದೈವದ ಗುಡಿಯಲ್ಲಿ ಪ್ರಾರ್ಥನೆ ಮಾಡಿ ನಂತರ ಶ್ರೀ ದೇವಳದ ಎದುರುಗಡೆ ಹರಿಯುತ್ತಿರುವ ದರ್ಪಣ ತೀರ್ಥ ನದಿ ತಟದಲ್ಲಿ ಪೂಜಾ ವಿಧಿ ವಿಧಾನಗಳನ್ನು ಪುರೋಹಿತರು ನೆರವೇರಿಸಿ ಸಂಪ್ರದಾಯದಂತೆ ದರ್ಪಣ ತೀರ್ಥ ನದಿಯಲ್ಲಿ ಬಾಗಿನ ಅರ್ಪಿಸಲಾಯಿತು. ತದನಂತರ ಅಲ್ಲಿಂದ ಕಳಸದಲ್ಲಿ ತೀರ್ಥವನ್ನು ಪುರೋಹಿತರು, ಆಡಳಿತ ಮಂಡಳಿಯವರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಎಲ್ಲಾ ಭಕ್ತಾದಿಗಳು, ಯಶಸ್ವಿನಿ, ವಾಲಗದವರು, ಬಿರುದಾವಳಿಗಳೊಂದಿಗೆ ಬಂದು ಶ್ರೀ ದೇವಳದ ಶೃಂಗೇರಿ ಮಠದಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಸಲ್ಲಿಸಲಾಯಿತು. ಅಪರಾಹ್ನ 11:00 ನಂತರ ಮಹಾಪೂಜೆ ಜರುಗಿ ಬಂದಂತಹ ಎಲ್ಲ ಮಹಿಳಾ ಭಕ್ತಾದಿಗಳಿಗೆ ರವಿಕೆ, ಬಳೆ, ಅರಿಶಿನ-ಕುಂಕುಮ ಹಾಗೂ ದಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಕಾರ್ಯ ನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ಭಕ್ತರು ಹಾಜರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading