ಜಟ್ಟಿಪಳ್ಳ : ಮಾನಸ ಮಹಿಳಾ ಮಂಡಳದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಾನಸ ಮಹಿಳಾ ಮಂಡಳ (ರಿ) ಜಟ್ಟಿಪಳ್ಳ, ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜಟ್ಟಿಪಳ್ಳದ ಯುವಸದನ ದಲ್ಲಿ ಜರುಗಿತು… ಸುಳ್ಯದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ಜ್ಯೋತ್ನಾ ದಿನೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿ ಬೆಳ್ಳಿಹಬ್ಬ ಆಚರಿಸಿ ಈಗಲೂ ಉತ್ತಮ ಕಾರ್ಯಚಟುವಟಿಕೆ ಗಳನ್ನು ನಡೆಸುತ್ತಿರುವ ಮಹಿಳಾ ಮಂಡಲಕ್ಕೆ ಮೆಚ್ಚುಗೆ ಯನ್ನು ವ್ಯಕ್ತಪಡಿಸಿದರು. ಮಹಿಳಾ ಮಂಡಲದ ಅಧ್ಯಕ್ಷರಾದ ಚಿತ್ರಲೇಖ ಮಡಪ್ಪಾಡಿಯವರು ಸಭಾಧ್ಯಕ್ಷತೆ ವಹಿಸಿದ್ದರು.

. . . . . . . . .

ಮಹಿಳಾ ಮಂಡಲದ ಗೌರವಧ್ಯಕ್ಷೆ ಚಂದ್ರಾಕ್ಷಿ ಜೆ ರೈ ಶುಭ ಹಾರೈಸಿದರು. ನೂತನ ಅಧ್ಯಕ್ಷೆ ಶ್ರೀಮತಿ ಸವಿತಾ ಸತೀಶ್ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ಅನನ್ಯ ಅನಿಲ್ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಸವಿತಾ ಲಕ್ಷ್ಮಣ್ ಪ್ರಾರ್ಥಿಸಿದರು.ಚಿತ್ರಲೇಖ ಮಡಪ್ಪಾಡಿ ಸ್ವಾಗತಿಸಿದರು. ರಮ್ಯಾ ರಾಮಣ್ಣ ಲೆಕ್ಕ ಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಜೆ ವಂದಿಸಿದರು. ನೂತನ ಖಜಾoಜಿ ಸೌಮ್ಯ ಮಹೇಶ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading