ಕರಡು ಮತದಾರರ ಪಟ್ಟಿ ಪ್ರಕಟ – ಸುಳ್ಯದಲ್ಲಿ ಒಟ್ಟು 196619 ಮತದಾರರು- 11868 ಮಂದಿ ಮತದಾರರ ಪಟ್ಟಿಯಿಂದ ಹೊರಕ್ಕೆ – 13143 ಮಂದಿಗೆ ನೋಟೀಸ್ ಜಾರಿ, ಪೂರಕ ದಾಖಲೆ ಸಲ್ಲಿಸಲು ಸೂಚನೆ

ಸುಳ್ಯ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಗೊಂಡು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ. ಈ ಪ್ರಕ್ರಿಯೆಯಲ್ಲಿ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 196619 ಮತದಾರರಿದ್ದು, 11,868 ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮೀ ರಾಯಕೋಡ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

. . . . . . . . .

207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,08,487 ಮತದಾರರಿದ್ದು, ಈ ಪೈಕಿ 1,96,619 ಮತದಾರರ ಗಣತಿ ನಮೂನೆಗಳನ್ನು ಸಮರ್ಪಕವಾಗಿ ಸಲ್ಲಿಸಲಾಗಿದೆ. ಮತದಾರರ ಪಟ್ಟಿಯ ಪರಿಶೀಲನೆಯ ಸಂದರ್ಭದಲ್ಲಿ ಒಟ್ಟು 11,868 ಮತದಾರರನ್ನು ಎ ಎಸ್ ಡಿ ಡಿ ಓ ವರ್ಗದಲ್ಲಿ ಗುರುತಿಸಲಾಗಿದೆ.

. . . . . . .

ಹೆಸರು ಹಾಗೂ ವಿಳಾಸದಲ್ಲಿ ವ್ಯತ್ಯಾಸ ಇರುವ ಮತದಾರರರು (ಎನಾಮಿಲಿಸ್ ಲೀಸ್ಟ್) 10892 ಮಂದಿ ಹಾಗೂ 2025 ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದು 2002 ಮತ್ತು 2022ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಮತದಾರರು (ನೋ ಮ್ಯಾಪಿಂಗ್ ಲೀಸ್ಟ್) 2251 ಮಂದಿ ಇದ್ದಾರೆ ಇವರೆಲ್ಲರೂ ಸೇರಿದಂತೆ ಒಟ್ಟು 13143 ಮಂದಿಗೆ ನೋಟೀಸ್ ಬರಲಿದ್ದು ಅವರು ನಿಗದಿತ ಸಮಯದೊಳಗೆ ಅದಕ್ಕೆ ಪೂರಕ ದಾಖಲೆ ನೀಡಬೇಕಿದೆ.

ಎ ಎಸ್ ಡಿ ಡಿ ಓ ಪಟ್ಟಿ, ಎನಾಮಿಲಿಸ್ ಪಟ್ಟಿ , ನೋ ಮ್ಯಾಪಿಂಗ್ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವುದು ಅಂತಿಮವಾಗಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂಬ ಅರ್ಥವಲ್ಲ. ಹೆಸರು, ವಿಳಾಸ ತಪ್ಪಾಗಿ, ಗೈರು, ವಲಸೆ, ಮರಣ ಅಥವಾ ದ್ವಿಪ್ರತಿ ಎಂದು ಗುರುತಾಗಿದ್ದರೆ ಸಂಬಂಧಪಟ್ಟ ಮತದಾರರು ಚುನಾವಣಾ ಅಧಿಕಾರಿಗಳು ಹಾಗೂ ಬಿ ಎಲ್ ಓ ಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಅವಕಾಶವಿದೆ. ಎಸ್ ಐ ಆರ್ ಪ್ರಕ್ರಿಯೆಯ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸುವುದು ಹಾಗೂ ಅನರ್ಹ ಮತದಾರರನ್ನು ತೆಗೆದುಹಾಕುವುದು ಆಗಿದೆ. ಹಕ್ಕು ಮತ್ತು ಆಕ್ಷೇಪಣೆಗಳಿಗೆ ಆ.24 ರಿಂದ ಸೆ, 23 ರವರೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸರಿಪಡಿಸಲು ಕ್ಷೇತ್ರದದಲ್ಲಿ 18 ಹೆಚ್ಚುವರಿ ಸಹಾಯಕ ಮತದಾರ ನೋಂದಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಅವರು ಮತಗಟ್ಟೆಗಳಿಗೆ ಭೇಟಿ ನೀಡಿ ಆಕ್ಷೇಪಣೆಗಳನ್ನು ಅ.22 ರ ಒಳಗೆ ಪುನರ್ ಪರೀಶೀಲಿಸಿ ಕ್ರಮ ಬದ್ಧವಾಗಿದ್ದರೇ ಪುನಃ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಿದ್ದಾರೆ. ಅಂತಿಮ ಮತದಾರರರ ಪಟ್ಟಿ ಅ.27 ರಂದು ಪ್ರಕಟಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಾವಣಾಧಿಕಾರಿಯಾಗಿರುವ ಕಡಬ ತಹಶೀಲ್ದಾರ್ ಗಣೇಶ್, ಸುಳ್ಯ ಉಪ ತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್. ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading