ಕರೀಮ್ ಕೆ.ಮ್.
ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ 14 ನೇ ವಾರ್ಷಿಕ ಮಹಾಸಭೆಯು ಆ. 30 ರಂದು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಕರೀಮ್ ಕೆ.ಎಮ್. ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಸೀದಿ ಖತಿಬರಾದ ಮುನೀರ್ ಸಖಾಫಿ ಉದ್ಘಾಟನೆ ಮಾಡಿದರು. ಗೌರವಾಧ್ಯಕ್ಷ ಇಬ್ರಾಹಿಮ್ ಪೈಝಿ ದುವಃ ನೇರವೆರಿಸಿದು. ಕಿರಾಹತ್ ಮಿಸ್ಹಬ್ ಬೆಟ್ಟಂಪಾಡಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಸಲಾಮ್ ಮುಸ್ಲಿಯಾರ್ ಪೈಚಾರ್, ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಪಿ.ಕೆ. ಹಾಗೂ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ, ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಬಶೀರ್ ಆರ್ ಬಿ. ಉಪಸ್ಥಿತರಿದ್ದರು. ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಕೆ.ಪಿ. ಮಂಡಿಸಿದರು. ನಂತರ 2020 -21 ನೇ ಸಾಲಿನ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಹಾಗೂ 2020 – 2021 ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಇಬ್ರಾಹಿಂ ಪೈಝಿಯವರು ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಕರೀಮ್ ಕೆ.ಮ್., ಉಪಾಧ್ಯಕ್ಷರಾಗಿ ಅಶ್ರಫ್ ಪೈಚಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಸಾಲಿ ಕೆ.ಪಿ., ಕಾರ್ಯದಶಿಗಳಾಗಿ ಸಲಾಮ್ ಪಿ.ಎಸ್. ಹಾಗೂ ಆರ್ಷದ್ ಪ್ರಗತಿ, ಕೋಶಾಧಿಕಾರಿಯಾಗಿ ಮುಜೀಬ್ ಪೈಚಾರ್, ಸದಸ್ಯರುಗಳಾಗಿ ಸತ್ತಾರ್ ಪಿ.ಕೆ., ಹನೀಫ್ ಪಿ.ಕೆ., ಲತೀಫ್ ಪಿ.ಕೆ., ಮನಾಫ್ ಎಚ್ ಎಸ್,ತಯ್ಯುಬ್ ಎಸ್ ವೈ, ಜುನೈದ್ ಪೈಚಾರ್,ಫಿರ್ದೌಸ್ ಅರ್ತಾಜೆ, ಅಫೀಝ್.ಪಿ ಎ, ಸಾನೀಫ್ ಬೊಳುಬೈಲು, ಸರ್ವಾನ್ ಪೈಚಾರ್, ಪವಾಝ್ ಸೊಣಂಗೇರಿ ಮೊದಲಾದವರನ್ನು ಅಯ್ಕೆ ಮಾಡಲಾಯಿತು. ಮುಜೀಬ್ ಪೈಚಾರ್ ಸ್ವಾಗತಿಸಿ, ಸತ್ತಾರ್ ಪೈಚಾರ್ ವಂದಿಸಿದರು.