ಆ. 22ರಂದು ಬೆಳ್ಳಾರೆಯಲ್ಲಿ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಮತ್ತು ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ವತಿಯಿಂದ ಮಂಗಳೂರಿನ ಮಂಗಳಾ ಹಾಸ್ಪಿಟಲ್ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್ ಸಹಯೋಗದಲ್ಲಿ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ,ವಿದ್ಯಾರ್ಥಿನಿಗಳಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ 22ರಂದು ಬೆಳಿಗ್ಗೆ 8-30ಕ್ಕೆ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲಿನಲ್ಲಿ ನಡೆಯಲಿದೆ.

. . . . . . . . .

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷರಾದ ಆರೀಫ್ ಬೆಳ್ಳಾರೆ ವಹಿಸಲಿದ್ದಾರೆ.ಹಿರಿಯರಾದ ಕೃಷ್ಣ ಭಟ್ ಕೆದಿಲ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.ಗೌರವಾನ್ವಿತ ಅತಿಥಿಗಳಾಗಿ ಬೆಳ್ಳಾರೆ ಝಕರಿಯಾ ಜುಮುಅ: ಮಸೀದಿಯ ಅಧ್ಯಕ್ಷರಾದ ಹಾಜಿ ಅಬೂಬಖರ್ ಮಂಗಳ,ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲಿನ ಸಂಚಾಲಕರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ,ಮಂಗಳೂರಿನ ಮಂಗಳ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನಿನ ಸಾರ್ವಜನಿಕ ಸಂಬಂಧ ಅಧಿಕಾರಿಯಾದ ದಿಲೀಪ್ ಕುಮಾರ್,ರೋಟರಿ ವಲಯ 5ರ ಲೆಫ್ಟಿನೆಂಟ್ ರೋ ಚಂದ್ರಶೇಖರ್ ರೈ ಭಾಗವಹಿಸಲಿದ್ದಾರೆ.ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಎಲ್ಲಾ ರೀತಿಯ ಆರೋಗ್ಯ ತೊಂದರೆಗಳನ್ನು ತಪಾಸಣೆ ಮಾಡಲಾಗುವುದು.ಈ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

. . . . . . .

ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading