ಏನೆಕಲ್ಲು : “ಕೃಷ್ಣೋತ್ಸವ-2026” ಶ್ರೀಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ

ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ(ರಿ.) ಏನೆಕಲ್ಲು ಇದರ ಆಶ್ರಯದಲ್ಲಿ ಐದನೇ ವರ್ಷದ ಕೃಷ್ಣೋತ್ಸವ- 2026 ಶ್ರೀಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ ದಿನಾಂಕ 30 ಆಗಸ್ಟ್ 2026 ಆದಿತ್ಯವಾರ ಶ್ರೀ ಆದಿಶಕ್ತಿ ಭಜನಾ ಮಂದಿರ(ರಿ.) ಏನೆಕಲ್ ಸಭಾಭವನದಲ್ಲಿ ನಡೆಯಲಿದೆ.

. . . . . . . . .

ಕಲಾಮಾಯೆ ಸಂಸ್ಥೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ತನ್ನ ಹತ್ತನೇ ವರ್ಷದ ದಶ ಸಂಭ್ರಮವನ್ನು ಆಚರಿಸಿಕೊಂಡಿದ್ದು ಇದೀಗ ಐದನೇ ವರ್ಷದ “ಕೃಷ್ಣೋತ್ಸವ -2026” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂರು ವರ್ಷದ ಒಳಗಿನ ಮಕ್ಕಳಿಗಾಗಿ ‘ಮುದ್ದುಕೃಷ್ಣ’, ಮೂರರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ‘ಪುಟಾಣಿ ಕೃಷ್ಣ’, ಆರರಿಂದ ಹತ್ತು ವರ್ಷದ ಒಳಗಿನ ಮಕ್ಕಳಿಗಾಗಿ ‘ಬಾಲಕೃಷ್ಣ’ ಹಾಗೂ ಹತ್ತು ವರ್ಷ ಮೇಲ್ಪಟ್ಟವರಿಗೆ ವಿಶೇಷ ‘ರಾಧಾಕೃಷ್ಣ ಜೋಡಿ ನೃತ್ಯ ಸ್ಪರ್ಧೆ’ ಯನ್ನು ಹಮ್ಮಿಕೊಳ್ಳಲಾಗಿದೆ,

. . . . . . .

ಪ್ರತಿ ವಿಭಾಗದ ಸ್ಪರ್ಧೆಯು ಸಾರ್ವಜನಿಕವಾಗಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಆಗಸ್ಟ್ 25ರ ಒಳಗಾಗಿ ಹೆಸರು ನೋಂದಾಯಿಸಲು ತಿಳಿಸಿದೆ ಪ್ರತಿ ವಿಭಾಗದ ಸ್ಪರ್ಧೆಯ ಪ್ರಥಮ, ದ್ವಿತೀಯ, ತೃತೀಯ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರೋತ್ಸಾಹಕ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9686714517 ಈ ಸಂಖ್ಯೆಯನ್ನು ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading