ವಿದ್ಯಾಮಾತಾ ಪುತ್ತೂರು – GPSTR, PSTR ಹಾಗೂ HSTR ಸರಕಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಾಗಾರ..!

ಪುತ್ತೂರು : ಕರ್ನಾಟಕ ಶಿಕ್ಷಣ ಇಲಾಖೆಯು ಶೀಘ್ರದಲ್ಲೇ 15,000 ಸರಕಾರಿ ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತಿದೆ. ಶಿಕ್ಷಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿಸಲು ಪುತ್ತೂರಿನ ಉನ್ನತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯಾದ ‘ವಿದ್ಯಾಮಾತಾ ಅಕಾಡೆಮಿ’ ಮುಂದಾಗಿದೆ.

. . . . . . . . .

ಆಸಕ್ತ ಅಭ್ಯರ್ಥಿಗಳ ಪೂರ್ವ ಸಿದ್ಧತೆಗಾಗಿ ದಿನಾಂಕ 23.08.2026ರ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ‘GPSTR / PSTR / HSTR ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ’ವನ್ನು ಆಯೋಜಿಸಲಾಗಿದೆ.

. . . . . . .

ಕಾರ್ಯಾಗಾರದ ಮುಖ್ಯ ಅಂಶಗಳು : ವಿಸ್ತೃತ ನೇಮಕಾತಿ ಮಾಹಿತಿ, ನೂತನ ಪರೀಕ್ಷಾ ಮಾದರಿ, ಪಠ್ಯಕ್ರಮ (Syllabus) ಮತ್ತು ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಕುರಿತು ಸ್ಪಷ್ಟ ಮಾಹಿತಿ. ತಜ್ಞರಿಂದ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಪರಿಣಾಮಕಾರಿ ಅಧ್ಯಯನ ಕ್ರಮಗಳು, ಟೈಮ್ ಮ್ಯಾನೇಜ್‌ಮೆಂಟ್ ಹಾಗೂ ಶಾರ್ಟ್‌ಕಟ್ ಟಿಪ್ಸ್.

ಸಂದೇಹ ಪರಿಹಾರ : ಅಭ್ಯರ್ಥಿಗಳ ವೈಯಕ್ತಿಕ ಗೊಂದಲ ಹಾಗೂ ಪ್ರಶ್ನೆಗಳಿಗೆ ನುರಿತ ಉಪನ್ಯಾಸಕರಿಂದ ನೇರ ಉತ್ತರ. ಸರಕಾರಿ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳು ಈ ಅಪರೂಪದ ತರಬೇತಿ ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿದ್ಯಾಮಾತಾ ಅಕಾಡೆಮಿ ಪ್ರಕಟಣೆಯಲ್ಲಿ ವಿನಂತಿಸಿದೆ. ಕಾರ್ಯಾಗಾರಕ್ಕೆ ಸೀಟುಗಳು ಮಿತವಾಗಿದ್ದು, ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಕಾರ್ಯಾಗಾರ ವಿದ್ಯಾಮಾತಾ ಅಕಾಡೆಮಿ, ಎಪಿಎಂಸಿ ರಸ್ತೆ, ಪುತ್ತೂರು ಇಲ್ಲಿ ನಡೆಯಲಿದ್ದು, ಉಚಿತ ನೋಂದಣಿಗಾಗಿ 8590773486 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading