ಸುಳ್ಯಕ್ಕೆ ಮೈನಾರಿಟಿ ಹಾಸ್ಟೆಲ್ ಮಂಜೂರು ಮಾಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ರವರಿಗೆ ಮನವಿ

ಶಿಕ್ಷಣ ಕಾಶಿ ಎಂದು ಹೆಸರು ಪಡೆದಿರುವ ಸುಳ್ಯ ಗ್ರಾಮೀಣ ಪ್ರದೇಶವಾಗಿದ್ದರೂ, ವಿಶೇಷ ಬೌಗೋಳಿಕ ಹಿನ್ನಲೆ ಹೊಂದ್ದಿದ್ದು, ಕೇರಳ ರಾಜ್ಯ, ಕೊಡಗು ಜಿಲ್ಲೆಯ ಗಡಿ ಪ್ರದೇಶವಾಗಿರುತ್ತದೆ ಅಲ್ಲದೇ ಕೆ.ಜಿ ಯಿಂದ ಪಿ.ಜಿ ಯವರೆಗೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಮತ್ತು ಇಂಜಿನಿಯರಿಂಗ್, ನರ್ಸಿಂಗ್, ಮೆಡಿಕಲ್, ಡೆಂಟಲ್, ಪಾಲಿಟೆಕ್ನಿಕ್ ಮೊದಲಾದ ಎಲ್ಲಾ ಕೋರ್ಸ್ ಗಳನ್ನು ಹೊಂದಿರುವ ತಾಲೂಕು ಕೇಂದ್ರದಲ್ಲಿ

. . . . . . . . .

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯದ ಕೊರತೆ ಇರುತ್ತದೆ, ಅಲ್ಲದೇ ಸಚಿವರು ಇತ್ತೀಚೆಗೆ ಸುಳ್ಯಕ್ಕೆ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಬಗ್ಗೆ ಸಚಿವರ ಗಮನ ಸೆಳೆದ ಸಂದರ್ಭದಲ್ಲಿ ಸಹಮತ ಸೂಚಿಸಿರುತ್ತೀರಿ, ಆದ್ದರಿಂದ ಸುಳ್ಯ ತಾಲೂಕು ಕೇಂದ್ರದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯ ಮಂಜೂರು ಮಾಡುವಂತೆ ಆದೇಶ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ 

. . . . . . .

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಶವಾದ್ ಸುಳ್ಯ, ಸುಳ್ಯ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ವ್ಯವಸ್ಥಾಪಕ ಕಮಾಲುದ್ದೀನ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading