ವಿವೇಕಾನಂದ ಕಾಲೇಜಿನಲ್ಲಿ 45ನೇ ಮಾನ್ಸೂನ್ ಚೆಸ್ ಪಂದ್ಯಾಟ

ಪುತ್ತೂರು: ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಇದರ ಆಶ್ರಯದಲ್ಲಿ 45ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟ ಇದೇ ಆಗಸ್ಟ್ ತಿಂಗಳ 18 ,19 ಮತ್ತು 20ರಂದು ನಡೆಯಲಿದೆ.

. . . . . . . . .

ಈ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪಂದ್ಯಾಟವು ಸ್ವಿಸ್ ಮಾದರಿಯ ಕ್ಲಾಸಿಕಲ್ ಶೈಲಿಯಲ್ಲಿ( 1 ಗಂಟೆ) ಆರರಿಂದ ಒಂಬತ್ತು ಸುತ್ತುಗಳಲ್ಲಿ ನಡೆಯಲಿದೆ. ಮೊದಲ 10 ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಗುವುದು . ಉತ್ತಮ 3 ಜನ ಮಹಿಳಾ ಆಟಗಾರ್ತಿಯರಿಗೆ ಬಹುಮಾನ,ಅಲ್ಲದೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ ಎಸ್ ( 9480656799) ಇವರನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರಾದ ಪ್ರೊ. ಶ್ರೀ ಕೃಷ್ಣ ಗಣರಾಜ ಭಟ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading