ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು 80ನೇ ಸ್ವಾತಂತ್ರೋತ್ಸವ; ಯುವಕರು ರಾಷ್ಟ್ರ ಸೇವೆಯಲ್ಲಿ ಸದಾ ಸಿದ್ಧರಿರಬೇಕು; ಪಿ.ಬಿ. ದಿವಾಕರ ರೈ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು 80ನೇ ಸ್ವಾತಂತ್ರೋತ್ಸವ ಸಂಭ್ರಮದಿಂದ ನೆರವೇರಿತು. ಕಾಲೇಜಿನ ಸಂಚಾಲಕ ಎ.ಸಿ. ವಸಂತ ಧ್ವಜಾರೋಹಣ ಗೈದರು. 
ನಂತರ ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಪ್ಯುಲರ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಪಿ.ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ರಾಷ್ಟ್ರ ಸೇವೆಯಲ್ಲಿ ಸದಾ ಸಿದ್ಧರಿರಬೇಕು ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ ಮತ್ತು ನಿವೃತ್ತ ಯೋಧ ಜಯಕರ ಮಡ್ತಿಲ ಇವರಿಗೆ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 56 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಕಾರ್ಯದರ್ಶಿ ಅಬ್ದುಲ್ಲ ಎ., ಪ್ರಾಂಶುಪಾಲ ರಮೇಶ್ ಎಸ್., ಉಪನ್ಯಾಸಕ ಮೋಹನಚಂದ್ರ ಎನ್.ಪಿ., ಕಾಲೇಜಿನ ನಾಯಕ ಗುರುರಾಜ್ ಕೆ.ಡಿ., ಪ್ರೌಢಶಾಲಾ ನಾಯಕ ಶುಶಾಂಕ್ ಕೆ. ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ  ಡಾ| ನಿತಿನ್ ಪ್ರಭು, ಜಯಂತ್ ಕುಮಾರ್ ಅಮೈ, ಧನ್ಯರಾಜ್ ಕೆ.ಕೆ. ಮತ್ತು ಡಿ.ವಿ. ಸದಾನಂದ ಪ್ರತಿವರ್ಷದಂತೆ ಸಿಹಿತಿಂಡಿ ವಿತರಿಸುತ್ತಾರೆ. ಕಾಲೇಜಿನ ಸಂಚಾಲಕ ಎ.ಸಿ. ವಸಂತ ಸ್ವಾಗತಿಸಿ, ಮುಖ್ಯೋಪಾಧ್ಯಾ ಸೋಮಶೇಖರ ಪಿ. ವಂದಿಸಿ, ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading