Ad Widget

ಜೀವನದ ಯಾತ್ರೆ

ನಾ ಬರೆಯಲು ಹೊರಟಿರುವೆ…
ನನ್ನ ಮನಸ್ಸಿನ ಮಾತುಗಳನ್ನ…
ಪೂರ್ತಿ ವಿವರಿಸಲಾರೆ…
ನನ್ನ ಪುಟ್ಟ ಕವನದಲ್ಲಿ ಈ ದಿನ…

. . . . .

ನೋವೆಂಬ ಬೆಂಕಿ ಚೆಂಡಿನ ಜೊತೆ…
ನಗು ಎಂಬ ಮಳೆ ಸುರಿಸಿ…
ಮಾತು ಎಂಬ ಪಟಾಕಿ ಸಿಡಿಸಿ…
ಇರುವುದರಲ್ಲಿ ಸಂತೋಷ ಕಾಣುವುದು ಜೀವನ…

ಅವಮಾನ ಎಂಬ ಚುಚ್ಚು ಮದ್ದಿನ ಜೊತೆ…
ಚಿಂತೆಯಿಲ್ಲದಂತೆರುವುದು ಜೀವನ…
ಸವಾಲು ಎಂಬ ಅಗ್ನಿ ಪರೀಕ್ಷೆಯಲ್ಲಿ…
ಹೋರಾಟ ನಡೆಸುವುದು ಜೀವನ…

ಗುರಿ ಎಂಬ ಹಾದಿಯಲ್ಲಿ…
ಕನಸು ಎಂಬ ಆಸೆ ಬಿತ್ತಿ…
ನಿರೀಕ್ಷೆ ಎಂಬ ನಂಬಿಕೆ ಇಟ್ಟು…
ಸಾಗುತ್ತಿರುವುದು ಜೀವನ…

ಸಾಧನೆ ಎಂಬ ಹಠದಲ್ಲಿ…
ಮನಸ್ಸು ಎಂಬ ಪಾದರಸವನ್ನು …
ಹಿಡಿತದಲ್ಲಿ ಇಟ್ಟಿರುವುದು ಹೃದಯವನ್ನು…
ಜೀವ ಹಾತೊರೆಯುತಿಹುದು ಯಶಸ್ಸನ್ನು…

✍️ ಸೌಮ್ಯ.ಸಿ.ಡಿ.ಎಲಿಮಲೆ
ಕೆ.ಎ‌ಸ್.ಎ‌ಸ್.ಕಾಲೇಜು ಸುಬ್ರಹ್ಮಣ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!