ಬಂಗ್ಲೆಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. SDMC ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಇವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

. . . . . . . . .

ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಆಗಮಿಸಿದ್ದರು, ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್, ಸ್ವಾತಂತ್ರ ಹೋರಾಟಗಾರರ ಛದ್ಮವೇಷ ಸಹಿತ ಜಯಘೋಷ ಹಾಗೂ ದೇಶಭಕ್ತಿ ಗೀತೆಗಳ ಮೂಲಕ ಕೊಲ್ಲಮೊಗ್ರು ಪೇಟೆಗೆ ಮೆರವಣಿಗೆಯ ಮೂಲಕ ಸಾಗಿದರು. ನಂತರ ಸಭಾಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಶಾಲಾ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಕುಮಾರಿ ವೈಶಾಲಿ ಕಣಜಾಲು ಇವರು ನೀಡಿದ ಬಹುಮಾನವನ್ನು ವಿತರಿಸಿದರು. 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಕಲಿಕೆಯಲ್ಲಿ ಪ್ರಥಮ ದ್ವಿತೀಯ ಬಂದ ವಿದ್ಯಾರ್ಥಿಗಳಿಗೆ ದತ್ತಿನಿಧಿಯ ಬಡ್ಡಿ ಹಣವನ್ನು ವಿತರಿಸಲಾಯಿತು.

. . . . . . .

ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಗ್ರಾಮ ಪಂಚಾಯತ್ ಕೊಲ್ಲಮೊಗ್ರು, ಸಚಿನ್ ಗೋಲ್ಯಾಡಿ ಬಾಲಸುಬ್ರಹ್ಮಣ್ಯ ಎನ್ ಜಿ, ಲೋಕೇಶ್ ಚಾಂತಾಳ, ದಿವಂಗತ ಜಬ್ಬರ್ ಇವರ ಪುತ್ರ ರಜಾಕ್, ಉದಯ ಶಿವಾಲ, ಲಕ್ಷ್ಮೀಶ ಕೊಲ್ಲಮೊಗ್ರು ಇವರೆಲ್ಲರೂ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ವಿತರಿಸಿದರು. ಮಧ್ಯಾಹ್ನದ ಭೋಜನದ ವ್ಯವಸ್ಥೆ ಇತ್ತು. ಈ ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪೋಷಕರು, ಚಂದ್ರ ಶೇಖರ ಕೋನಡ್ಕ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಹಳೆವಿದ್ಯಾರ್ಥಿಗಳು, ಉಪಾಧ್ಯಕ್ಷರಾದ ಮೋಹನ್ ಅಂಬೆಕಲ್ಲು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪುಷ್ಪಾವತಿ ಕಣಜಾಲು ಮತ್ತು ಅಂಗನವಾಡಿ ಪುಟಾಣಿಗಳು, ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರು ಇದರ ಅಧ್ಯಕ್ಷರು ಗಾಯತ್ರಿ ಕೊಳಗೆ ಹಾಗೂ ಸರ್ವ ಸದಸ್ಯರು ಸರ್ವ ಸದಸ್ಯರು ಇವರು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವರ್ಗ, ವಿದ್ಯಾರ್ಥಿ ವೃಂದ, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading