ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸುಳ್ಯದ ಇಶಾನ್ ಹೆಸರು; ಕಣ್ಣಿಗೆ ಬಟ್ಟೆ ಕಟ್ಟಿ, ಒಂದು ಕೈಯಿಂದ ಕೀಬೋರ್ಡ್ ನುಡಿಸಿ ‘IBR Achiever’ ಗೌರವಕ್ಕೆ ಪಾತ್ರ

ಸುಳ್ಯ, ಆಗಸ್ಟ್ 14: ಸುಳ್ಯ ತಾಲೂಕಿನ ಪ್ರತಿಭಾವಂತ ಬಾಲಕ ಇಶಾನ್ ಬಿ.ಎ. ಅವರು ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಕೇವಲ ಬಲಗೈಯನ್ನು ಬಳಸಿ ಎಲೆಕ್ಟ್ರಾನಿಕ್ ಕೀಬೋರ್ಡ್ ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

. . . . . . . . .

13 ವರ್ಷ 5 ತಿಂಗಳ ವಯಸ್ಸಿನ ಇಶಾನ್ ಅವರು 4 ನಿಮಿಷ 17 ಸೆಕೆಂಡುಗಳಲ್ಲಿ ಈ ಸಾಹಸವನ್ನು ಮಾಡಿ ತೋರಿಸಿದರು. ಈ ವಿಶಿಷ್ಟ ಸಾಧನೆಯನ್ನು 2026ರ ಜುಲೈ 13ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ದೃಢಪಡಿಸಿದೆ. ಇದಕ್ಕಾಗಿ ಅವರಿಗೆ ‘IBR Achiever’ ಪ್ರಶಸ್ತಿಯನ್ನು ಸಂಸ್ಥೆಯ ವತಿಯಿಂದ ನೀಡಲಾಗಿದೆ.

. . . . . . .

ಪ್ರಸ್ತುತ ಮಂಗಳೂರಿನ ಶಾರದ ವಿದ್ಯಾಲಯದಲ್ಲಿ 8ನೇ ತರಗತಿ ಓದುತ್ತಿರುವ ಇಶಾನ್, ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಡಾ. ದಿನೇಶ್ ರಾವ್ ಅವರಿಂದ ಕೀಬೋರ್ಡ್ ವಾದನದ ತರಬೇತಿ ಹಾಗೂ ಆಚಾರ್ಯ ಮಂಜುನಾಥ್ ಪೂಜಾರ್ ಗುರೂಜಿ, ಶಿವಮೊಗ್ಗ ಅವರಿಂದ ಗಾಂಧಾರ ವಿದ್ಯೆಯ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ಇಶಾನ್ ಅವರು ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರಾಧ್ಯಾಪಕರಾದ ಅಜಿತ್ ಬಿ.ಟಿ. ಮತ್ತು ಬ್ಯಾಂಕ್ ಆಫ್ ಬರೋಡದ ಉದ್ಯೋಗಿ ಸುಪ್ರಿತಾ ಕೆ.ಎಸ್. ದಂಪತಿಗಳ ಪುತ್ರರಾಗಿದ್ದಾರೆ.

ತಮ್ಮ ಮಗನ ಸಾಧನೆಯ ಬಗ್ಗೆ ಮಾತನಾಡಿದ ಪೋಷಕರು, “ಇಶಾನ್‌ನ ಪರಿಶ್ರಮ ಮತ್ತು ಗುರುಗಳ ಮಾರ್ಗದರ್ಶನದಿಂದ ಈ ದಾಖಲೆ ಸಾಧ್ಯವಾಯಿತು. ಮುಂದೆಯೂ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬುದು ನಮ್ಮ ಆಶಯ” ಎಂದು ತಿಳಿಸಿದರು.

ಇಶಾನ್ ಅವರ ಈ ಅಪೂರ್ವ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು, ಸ್ನೇಹಿತರು ಹಾಗೂ ಸಂಗೀತಾಸಕ್ತರಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ. ಶಾರದ ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗವೂ ಇಶಾನ್‌ಗೆ ಅಭಿನಂದನೆ ಸಲ್ಲಿಸಿದೆ.

ಒಂದು ಕೈಯಿಂದ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನುಡಿಸುವ ಈ ಅಪರೂಪದ ಪ್ರದರ್ಶನವು ಇಶಾನ್‌ನ ಏಕಾಗ್ರತೆ, ಅಭ್ಯಾಸ ಮತ್ತು ಸಂಗೀತದ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading