Ad Widget

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನ – ರಾಷ್ಟ್ರೀಯ ಕ್ರೀಡಾ ದಿನ

ಭಾರತ ಇಂದು ಎಲ್ಲಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ಜಗತ್ತಿನ ಗಮನ ಸೆಳೆಯುತ್ತಿದೆ. ಸಂಗೀತ,ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರ, ಕಲಾಕ್ಷೇತ್ರ ಜೊತೆಗೆ ಕ್ರೀಡಾಕ್ಷೇತ್ರದಲ್ಲಿ ಜಗತ್ತಿನ ಗಮನ ಭಾರತದತ್ತ ನೆಟ್ಟಿದೆ. ದೇಶದಲ್ಲಿ ಕ್ರೀಡಾ ಕ್ಷೇತ್ರ ಬಹಳಷ್ಟು ಮುಂದುವರಿದಿದೆ. ಅದೆಷ್ಟು ಜನರ ಕನಸು ಕ್ರೀಡಾಕ್ಷೇತ್ರದಲ್ಲಿ ತಾವು ಕೂಡ ಮಿಂಚಬೇಕೆಂಬುದು.

. . . . . .

ಆಗಸ್ಟ್ 29 ರಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನ ಎಂದು ಆಚರಿಸಲಾಗುತ್ತದೆ. ಆಗಸ್ಟ್29 ಭಾರತದ ಹಾಕಿ ಮಾಂತ್ರಿಕ ಹಾಕಿಯಲ್ಲಿ ಸತತ ಮೂರು ಒಲಿಂಪಿಕ್ಸ್ ಪದಕ ಭಾರತಕ್ಕೆ ಗೆಲ್ಲಿಸಿಕೊಟ್ಟ ರುವಾರಿ ಧ್ಯಾನ್ ಚಂದ್ ಜನಿಸಿದ ದಿನ.

ಭಾರತದ ಹಾಕಿ ಇತಿಹಾಸದಲ್ಲಿ ಮರೆಯಲಾಗದ ವ್ಯಕ್ತಿ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ತಮ್ಮ ಅದ್ಭುತ ಆಟದ ಮೂಲಕವೇ ಅದೆಷ್ಟು ಅಭಿಮಾನಿಗಳನ್ನು ಗಳಿಸಿದ ವ್ಯಕ್ತಿ ಈತ .
ಧ್ಯಾನ್ ಚಂದ್ 1922 ತನ್ನ 16ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿದರು. ನಂತರ ಸೇನೆಯಲ್ಲಿ ವಿವಿಧ ರೇಜಿಮೆಂಟಲ್ ಗಳ ನಡುವೆ ನಡೆಯುತ್ತಿದ್ದ ಸ್ನೇಹಪರ ಪಂದ್ಯಾಟಗಳಲ್ಲಿ ಆಟವಾಡುತ್ತಾ ಉತ್ತಮ ಪ್ರದರ್ಶನ ನೀಡಿ 1926ರಲ್ಲಿ ಭಾರತ ರಾಷ್ಟ್ರೀಯ ಹಾಕಿ ತಂಡಕ್ಕೆ ಆಯ್ಕೆಯಾದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಒಲಿಂಪಿಕ್ ನಲ್ಲಿ ನಮ್ಮ ದೇಶಕ್ಕೆ ಸತತ 3 ಬಾರಿ ಅಂದರೆ 1928,1932,1936 ನಲ್ಲಿ ಹಾಕಿಯಲ್ಲಿ ಗೋಲ್ಡ್ ಮೆಡಲ್ ತಂದುಕೊಟ್ಟ ಅದ್ಭುತ ಆಟಗಾರ.

1936ರ ಬರ್ಲಿನ್ ಒಲಿಂಪಿಕ್ ವೇಳೆ ಧ್ಯಾನಚಂದ್ ಆಟಕ್ಕೆ ಬೆರಗಾದ ಹಿಟ್ಲರ್ ಧ್ಯಾನಚಂದ್ ಅವರಿಗೆ ಜರ್ಮನ್ ಪೌರತ್ವವನ್ನು ನೀಡುವುದಾಗಿ ಘೋಷಿಸಿದರು. ಆದರೆ ಅಪ್ಪಟ ದೇಶಪ್ರೇಮಿಯಾಗಿದ್ದ ಧ್ಯಾನಚಂದ್ ಅದನ್ನು ನಿರಾಕರಿಸಿದರು.
ಹಾಕಿಯಲ್ಲಿ ಅದ್ಭುತ ಸಾಧನೆ ಮಾಡಿ ಎಲ್ಲರ ಗಮನ ಭಾರತದತ್ತ ಸೆಳೆಯುವಂತೆ ಮಾಡಿದ ಧ್ಯಾನಚಂದ್ ಅವರಿಗೆ 1956ರಲ್ಲಿ ಭಾರತೀಯ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಪ್ರಸ್ತುತ ದಿನಗಳಲ್ಲಿ ಭಾರತ ಕ್ರೀಡೆಯ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಕೈಗನ್ನಡಿ ಅನ್ನುವಂತೆ ಹಿಮದಾಸ್, ಪಿ . ವಿ. ಸಿಂಧು, ದ್ಯುತಿ ಚಂದ್ , ಪರ್ದೀಪ್ ನರ್ವಾಲ್, ನೀರಜ್ ಚೋಪ್ರಾ, ಕೆ. ಲ್.ರಾಹುಲ್, ಮನಸಿ ಜೋಷಿ ಇವರೆಲ್ಲ ಇದ್ದರೆ.

ಇನ್ನು ಅದೆಷ್ಟು ಬಾಲ ಪ್ರತಿಭೆಗಳು ಕ್ರೀಡೆಯಲ್ಲಿ ಆಸಕ್ತಿ ತೋರುತ್ತ ಉತ್ತಮ ಪ್ರದರ್ಶನ ನೀಡಿ ಮುಂದೊಂದು ದಿನ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಭಾರತ ಮಾತೆಗೆ ಚಿನ್ನದ ಪದಕದ ಉಡುಗೊರೆ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ.
ಎಲ್ಲರಿಗೂ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು

ಸಂದೀಪ್ .ಎಸ್. ಮಂಚಿಕಟ್ಟೆ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!