ತೊಡಿಕಾನ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು ಬಿಎಸ್ಎನ್ಎಲ್ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಾಗಿದೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಇರುವುದರಿಂದ ನೆಟ್ವರ್ಕ್ ಸಮಸ್ಯೆ ಯಿಂದ ಅನೇಕ ವಿದ್ಯಾರ್ಥಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ತೊಡಿಕಾನದಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದ್ದು ಪ್ರತಿದಿನ ನೂರಾರು ಭಕ್ತಾದಿಗಳು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಹಾಗೂ ಊರವರಿಗೆ ಕೂಡ ನೆಟ್ವರ್ಕ್ ಸಮಸ್ಯೆಯನ್ನುಂಟುಮಾಡಿದೆ. ಅಲ್ಲದೇ ವಿಜಯ ಬ್ಯಾಂಕ್ ಶಾಖೆ, ಅಂಚೆ ಕಛೇರಿ ಹಾಗೂ ಪ್ರಾಥಮಿಕ ಶಾಲೆ, ಹಾಲು ಸೊಸೈಟಿ ಇದ್ದು ಇವರೆಲ್ಲರೂ ನೆಟ್ವರ್ಕ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪರ್ಯಾಯ ನೆಟ್ವರ್ಕ್ ಅಳವಡಿಕೆಯಾದರೇ ಮಾತ್ರ ಸಮಸ್ಯೆ ಸರಿಯಾಗಬಹುದೆಂದೂ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರ್ಟೆಲ್ ನೆಟ್ವರ್ಕ್ ಅಳವಡಿಸಲು ಪ್ರಯತ್ನಿಸುವಂತೆ ಕಂಪೆನಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
- Saturday
- November 23rd, 2024