ಸಂಪಾಜೆ : ಕಾಡುಕೋಣ ಬೇಟೆ – ಇಬ್ಬರ ಬಂಧನ – ಓರ್ವ ಪರಾರಿ

ಸಂಪಾಜೆಯ ಬಳಿ ಕಾಡುಕೋಣ ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ ಇಬ್ಬರು ಆರೋಪಿಗಳನ್ನು ಹಾಗೂ ಇಕೋ ಕಾರನ್ನು ಕೊಡಗು ಸಂಪಾಜೆ ಅರಣ್ಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ಸಂಜೆ ನಡೆದಿದೆ. ಓರ್ವ ಆರೋಪಿ ತಲೆ ಮರೆಸಿಜೊಂಡಿದ್ದಾನೆ.

. . . . . . . . .

ಕಲ್ಲುಗುಂಡಿಯ ಕಾಡುಪಂಜ ಬಳಿಯ ಅರಣ್ಯದಲ್ಲಿ ಇಬ್ಬರು ಆರೋಪಿಗಳಾದ ಚೆಂಬು ಗ್ರಾಮದ ಗೌತಮ್ ಕುಕ್ಕೆಟ್ಟಿ ಹಾಗೂ ಪೆರಾಜೆಯ ಶರತ್‌ ಕೊಳಂಗಾಯ ಎಂಬವರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ಯತಿನ್ ಕಾಡುಪಂಜ ಎಂಬವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ಬಳಿಯಿದ್ದ 10 ಕೆಜಿ ಮಾಂಸ ಹಾಗೂ ಸಾಗಾಟಕ್ಕೆ ಬಳಸಿದ ಇಕೊಇ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಸಂಪಾಜೆ ವಲಯದ ಅರಣ್ಯಾ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading