ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಚೇರಿಯ ಮೇಲ್ಚಾವಣಿ ತೀರ ಶಿಥಿಲಗೊಂಡು ಮುರಿದು ಬೀಳುವ ಹಂತ ತಲುಪಿದೆ. ಕಛೇರಿಯ ಸಿಬ್ಬಂದಿಗಳು ಭಯದಿಂದ ಕೆಲಸ ಕಾರ್ಯ ನಿರ್ಹಹಿಸುವಂತಾಗಿದೆ. ಸಿಬ್ಬಂದಿಗಳು ಕಛೇರಿಯ ವರಾಂಡದಲ್ಲಿ ಕೆಲಸ ಮಾಡುವ ಸ್ಥಿತಿ ಬಂದಿದೆ. ಈ ಇಲಾಖೆ ಇದನ್ನು ದುರಸ್ತಿ ಮಾಡುವ ಬದಲು ಸ್ಥಳಾಂತರ ನಡೆಸುವ ಹುನ್ನಾರ ನಡೆಸುತ್ತಿದೆ.
ಇಲಾಖಾ ಆದೇಶದಂತೆ ರಾಜೀವಗಾಂಧಿ ಸೇವಾಕೇಂದ್ರ
ಮಾವಿನಕಟ್ಟೆ ಸ್ಥಳಾಂತರ ಗೊಳ್ಳಲಿದೆ ಎಂದು ಮಾಹಿತಿಯಿದೆ. ಬೇರೆಡೆ ಸ್ಥಳಾಂತರಿಸಿದರೆ ಈ ಭಾಗದ ಜನರಿಗೆ ತೊಂದರೆಯಾಗುತ್ತದೆ, ಮಾವಿನಕಟ್ಟೆಗೆ ಹೋಗಲು ವಾಹವದ ವ್ಯವಸ್ಥೆ ಸರಿಯಾಗಿಲ್ಲ. ಸರಕಾರದ ಹಲವಾರು ಯೋಜನೆಗಳಿಂದ ಜನ ವಂಚಿತರಾಗುವ ಸಾಧ್ಯತೆ ಇದೆ. ಅದ್ದರಿಂದ ಅಂಚೆ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಊರವರ ಪರವಾಗಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಸೆ.2 ರಂದು ಊರವರ ಸಭೆ ಕರೆಯಲು ನಿರ್ಧರಿಸಲಾಗಿದೆ – ಚಂದ್ರಶೇಖರ ಕಡೋಡಿ