“ಆಟಿಯ ಮಹತ್ವವನ್ನು ಯುವಜನತೆಗೆ ತಿಳಿಸಿ” : ರೇಖಾ ಗೋಪಾಲ್ – ಯುವವಾಹಿನಿ ಸುಳ್ಯ ಘಟಕದಿಂದ ಬೆಳ್ಳಾರೆಯಲ್ಲಿ ಆಟಿದ ಕೂಟ

ಆಟಿಯು ಬಡತನದ ದಿನಗಳನ್ನು ಸಂಭ್ರಮಿಸುವ ತಿಂಗಳು. ಯುವ ಸಮುದಾಯಕ್ಕೆ ಆಟಿ ತಿಂಗಳ ಮಹತ್ವವನ್ನು ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ರಿ. ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹೇಳಿದರು. 

. . . . . . . . .

ಅವರು ಆ.02ರಂದು ಯುವವಾಹಿನಿ ರಿ. ಸುಳ್ಯ ಘಟಕದ ವತಿಯಿಂದ ಬೆಳ್ಳಾರೆ ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಟಿಯ ಮಹತ್ವದ ಬಗ್ಗೆ ಪ್ರಧಾನ ಉಪನ್ಯಾಸ ನೀಡಿದ ರಾಮಕುಂಜ ಆಂಗ್ಲಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಸರಿತಾ ಜನಾರ್ಧನ್ ಮಾತನಾಡಿ, “ತುಳುನಾಡಿನ ಸಂಪ್ರದಾಯ ಮತ್ತು ಆಚರಣೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯ ಇಂತಹ ಕೂಟಗಳ ಆಯೋಜನಯ ಮೂಲಕ ಆಗಬೇಕಿದೆ” ಎಂದರು. ಯುವಾಹಿನಿ ರಿ. ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ರಿ. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ, ಬಿಲ್ಲವ ಸಂಘ ರಿ. ಸುಳ್ಯದ ಅಧ್ಯಕ್ಷ ಕೃಷ್ಣ ಕುಮಾರ್ ಅಲೆಕ್ಕಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಂಸ್ಕೃತಿಕ ವಿಭಾಗದ ಸಂಚಾಲಕ ಪ್ರದೀಪ್ ನೆಟ್ಟಾರು ಪ್ರಾಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ರಂಜಿತ್ ದರ್ಖಾಸ್ತು ವಂದಿಸಿದರು. ಹರ್ಷಿತಾ ಚೇತನ್ ಕಾರ್ಯಕ್ರಮ ನಿರ್ವಹಿಸಿದರು. ಯುವವಾಹಿನಿ ರಿ ಸುಳ್ಯ ಘಟಕದ ವತಿಯಿಂದ ರೇಖಾ ಗೋಪಾಲ್ ಮತ್ತು ಸರಿತಾ ಜನಾರ್ಧನ್ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಟಿ ತಿಂಗಳ ವಿವಿಧ ಖಾಧ್ಯಗಳನ್ನೊಳಗೊಂಡ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading