ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟಿಸುತ್ತಿದ್ದ ರಾಹುಲ್ ಗಾಂಧಿ ಬಂಧನ – ಕೇಂದ್ರ ಸರಕಾರದ ಅಸಂವಿಧಾನಿಕ ನಡೆ ಖಂಡಿಸಿ ಸುಳ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ

ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಹಿಂಸಾತ್ಮಕವಾಗಿ ಬಂಧಿಸಿದ ವಿರುದ್ಧ ಹಾಗೂ ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಧ್ವನಿಯಾಗಿ
ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಜು.22 ರಂದು ಬೃಹತ್ ಪ್ರತಿಭಟನೆ ನಡೆಯಿತು.

. . . . . . . . .

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ, ಟಿ.ಎಂ.ಶಾಹಿದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷ ಲಕ್ಷ್ಮೀಶ್ ಗಬ್ಬಲಡ್ಕ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರು ಮಾತನಾಡಿ ಘಟನೆಯನ್ನು ಖಂಡಿಸಿದರು.

. . . . . . .

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವುದರ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಕೇಂದ್ರ ಸರಕಾರ ಅಸಂವಿಧಾನಿಕವಾಗಿ ತಡೆದಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಎಲ್ಲಾ ವಿದ್ಯಾರ್ಥಿ ಸಮುದಾಯ ಪ್ರತಿಭಟನೆ ನಡೆಸಬೇಕು. ಎಬಿವಿಪಿ ವಿದ್ಯಾರ್ಥಿಗಳ ಪರವಾಗಿದ್ದರೇ ಪ್ರತ್ರಿಕೆ ಸೋರಿಕೆ ಬಗ್ಗೆ ನ್ಯಾಯಕ್ಕಾಗಿ ಬೀದಿಗಿಳಿದು ಪ್ರತಿಭಟಿಸಲಿ ಎಂದರು.

ಈ ಸಂದರ್ಭದಲ್ಲಿ ಪಿಎಸ್ ಗಂಗಾಧರ, ಭವಾನಿಶಂಕರ ಕಲ್ಮಡ್ಕ,, ಚೇತನ್ ಕಜೆಗದ್ದೆ, ಶಾಹುಲ್ ಹಮೀದ್, ಸಿದ್ದೀಕ್ ಕೊಕ್ಕೊ, ಧೀರ ಕ್ರಾಸ್ತಾ, ಎಂ.ಜೆ.ಶಶಿಧರ, ಪವಾಝ್ , ಲಕ್ಷ್ಮೀಶ ಗಬ್ಬಲಡ್ಕ, ಶರೀಫ್ ಕಂಠಿ, ಶ್ರೀಹರಿ ಕುಕ್ಕುಡೇಲು, ಕೆ.ಪಿ. ಜಾನಿ, ಪ್ರಸಾದ್ ರೈ ಮೇನಾಲ, ಧನುಷ್ ಕುಕ್ಕೇಟಿ, ಮನ್ಸೂರ್ ಮೆಟ್ರೋ, ಹನೀಫ್ ಎಸ್.ಕೆ., ರಾಧಾಕೃಷ್ಣ ಪರಿವಾರ, ನಂದರಾಜ್ ಸಂಕೇಶ್ , ರಾಜು ಪಂಡಿತ್,ರಾಜೀವಿ ರೈ, ಸುಂದರಿ ಸಂಪಾಜೆ, ಗಫೂರ್ ಕಲ್ಮಡ್ಕ, ಮುಜೀಬ್ ಪೈಚಾರ್, ಉಮ್ಮರ್, ರಂಜಿತ್ ರೈ ಮೇನಾಲ, ಸತ್ಯಕುಮಾರ್ ಅಡಿಂಜ, ಮಹೇಶ್ ಬೆಳ್ಳಾರ್ಕರ್, ಜುನೈದ್ ಅಡ್ಕಾರ್, ಝುಬೈರ್ ಅರಂತೋಡು ಮತ್ತಿತರರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading