ಹಿಂದೂ ಜಾಗರಣ ವೇದಿಕೆ ಸವಣೂರು, ಪುತ್ತೂರು ತಾಲೂಕು ಇದರ ನೂತನ ಘಟಕದ ರಚನೆ ಆ. 25 ರಂದು ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಗಿರಿಶಂಕರ್ ಸುಲಾಯ, ಅಧ್ಯಕ್ಷರಾಗಿ ಶ್ರೀಧರ ಇಡ್ಯಾಡಿ, ಉಪಾಧ್ಯಕ್ಷರಾಗಿ ಪ್ರಶಾಂತ್ ನೂಜಾಜೆ, ಕುಲದೀಪ್ ಅಮೈ , ಪ್ರಧಾನ ಕಾರ್ಯದರ್ಶಿಗಳಾಗಿ ನಿಶಾಂತ್ ಪರಣೆ, ಕಾರ್ಯದರ್ಶಿ ಗಳಾಗಿ ಮಹೇಶ್ ದೈಪಿಲ, ಲಿಖಿತ್ ,ದಯಾನಂದ ಪರಣೆ, ಸಂಪರ್ಕ ಪ್ರಮುಖ್ ಆಗಿ ಮನೋಹರ್ ಭಂಡಾರಿ, ಪ್ರಚಾರ ಪ್ರಮುಖ್ ರಾಜೇಶ್ ಇಡ್ಯಾಡಿ, ಮಾತೃ ಸುರಕ್ಷಾ ಪ್ರಮುಖ್ ರಂಜಿತ್, ಹಿಂದೂ ಯುವವಾಹಿನಿ ಪ್ರಮುಖ್ ಆಗಿ ಭವಿತ್ ಇಡ್ಯಾಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲೂಕು ಇದರ ನಗರ ಗೌರವಾಧ್ಯಕ್ಷರಾದ ಪ್ರಕಾಶ್ ಚಂದ್ರ ರೈ, ತಾಲೂಕು ಅಧ್ಯಕ್ಷರಾದ ಅಶೋಕ್ ತ್ಯಾಗರಾಜನಗರ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ,ತಾಲೂಕು ಮಾತೃ ಸುರಕ್ಷಾ ಸ್ವಸ್ತಿಕ್ ಮೇಗಿನಗುತ್ತು ಉಪಸ್ಥಿತರಿದ್ದರು. ಜಗದೀಶ್ ಕೆಡೆಂಜಿ ಸ್ವಾಗತಿಸಿ, ಸಚಿನ್ ಧನ್ಯವಾದ ಸಮರ್ಪಿಸಿದರು.
- Friday
- November 22nd, 2024