ವಿದ್ಯುತ್ ಖಾಸಗೀಕರಣ ಖಂಡಿಸಿ ರೈತ ಸಂಘದ ಸುಳ್ಯ ತಾಲೂಕು ಘಟಕ ಸರಕಾರಕ್ಕೆ ಮನವಿ

ರಾಜ್ಯದಲ್ಲಿರುವ ಸರಕಾರಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣಗೊಳಿಸಿ ಟಾಟಾ ಪವರ್ ಕಂಪನಿಗೆ ಲೈಸನ್ಸ್ ನೀಡುವ ಯೋಜನೆಯನ್ನು ಖಂಡಿಸಿ ರೈತ ಸಂಘದ ಸುಳ್ಯ ತಾಲೂಕು ಘಟಕ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಖಾಸಗೀಕರಣದಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಸರಕಾರದಿಂದ ರೈತರು ಹಾಗೂ ಗ್ರಾಹಕರಿಗೆ ಸಿಗುವ ವಿವಿಧ ಸೌಲಭ್ಯಗಳು ಕಡಿತಗೊಳ್ಳುವ ಸಾಧ್ಯತೆಯಿದೆ. ಆದುದರಿಂದ ಲಾಭದಲ್ಲಿ ಇರುವ ಮೆಸ್ಕಾಂ ಕಂಪನಿಯನ್ನು ಯಾವ ಕಾರಣಕ್ಕೂ ಟಾಟಾ ಪವರ್ ಕಂಪನಿಯವರಿಗೆ ಹಸ್ತಾಂತರಿಸಬಾರದು. ರೈತರ ಹಾಗೂ ಜನಸಾಮಾನ್ಯರ ಪರವಾಗಿ ರೈತ ಸಂಘವು ವಿರೋಧಿಸುತ್ತದೆ. ಹಾಗಾಗಿ ಈ ಕೂಡಲೇ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ತಿರಸ್ಕರಿಸಬೇಕೆಂದು ರೈತ ಸಂಘದ ಸುಳ್ಯ ತಾಲೂಕು ಘಟಕ ಮನವಿಯಲ್ಲಿ ಒತ್ತಾಯಿಸಿದೆ.

. . . . . . . . .

ಈ ಸಂದರ್ಭದಲ್ಲಿ ರೈತ ಸಂಘದ ಲೋಲಾಜಾಕ್ಷ ಭೂತಕಲ್ಲು, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ, ತಾಲೂಕು ಉಪಾಧ್ಯಕ್ಷ ಸುಳ್ಯಕೋಡಿ ಮಾಧವ ಗೌಡ, ಮುಖಂಡರಾದ ಮಂಜುನಾಥ ಮಡ್ತಿಲ, ಕೇಶವ ಮೊರಂಗಲ್ಲು ಜತೆಗಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading