ಸುಳ್ಯ : ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ಸುಳ್ಯ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ.) ವತಿಯಿಂದ ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವು ಆ.11 ರಂದು ಸುಳ್ಯ ಯೋಜನಾ ಕಚೇರಿಯಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ವೆಂಕಪ್ಪ ಗೌಡರವರು ಉದ್ಘಾಟಿಸಿ ಬಡವರ ಮಕ್ಕಳು ಮಾತ್ರ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದು. ಅವರಿಗಾಗಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರನ್ನು ಒದಗಿಸುವ ಮೂಲಕ ಅಳಿಲು ಸೇವೆಯನ್ನು ಮಾಡಲಾಗುತ್ತಿದೆ ಎಂದರು. ದ.ಕ ಜಿಲ್ಲಾ ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷರಾದ ಎನ್.ಎ.ರಾಮಚಂದ್ರ ರವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಯೋಜನೆಯ ಕಾರ್ಯಕ್ರಮಗಳ ಚಿಂತನೆಯನ್ನು ಮಕ್ಕಳಿಗೆ ಉಣಬಡಿಸಲಾಗುತ್ತಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯೋಜನೆಗೆ ಕೃತಜ್ಞತೆಯನ್ನು ಸಲ್ಲಿಸಿದರು.

. . . . . . .

ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಯೋಜನೆಯ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಯೋಜನಾಧಿಕಾರಿಗಳಾದ ಶ್ರೀ ಮಾಧವ ಗೌಡರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಅಶೋಕಪ್ರಭು ಸುಳ್ಯ, ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷರಾದ ಶ್ರೀ ಭವಾನಿ ಶಂಕರ ಅಡ್ತಲೆ, ಶ್ರೀ ಮಹೇಶ್ ಕುಮಾರ್ ರೈ ಮೇನಾಲ, ನಿಕಟ ಪೂರ್ವಾಧ್ಯಕ್ಷರಾದ ಶ್ರೀ ಲೋಕನಾಥ ಅಮೆಚೂರು, ಸದಸ್ಯರಾದ ಬೂಡು ರಾಧಾಕೃಷ್ಣ ರೈ, ಪದ್ಮನಾಭ ಶೆಟ್ಟಿ, ವಲಯ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಭಾಸ್ಕರ ಅಡ್ಕಾರ್, ಭಜನಾ ಪರಿಷತ್ ಸುಳ್ಯ ವಲಯದ ಅಧ್ಯಕ್ಷರಾದ ಶ್ರೀಮತಿ ಸವಿತಾ ಸಂದೇಶ್ ರವರು ಪ್ರಾರ್ಥಿಸಿದರು.

ತಾಲೂಕಿನ ಸ.ಹಿ.ಪ್ರಾ.ಶಾಲೆ ಅಜ್ಜಾವರ, ಸ.ಉ.ಹಿ.ಪ್ರಾ.ಶಾಲೆ ಮಂಡೆಕೋಲು, ವಿವೇಕಾನಂದ ಅ.ಹಿ.ಪ್ರಾ.ಶಾಲೆ ಅಡ್ಯಾ‌ರ್ ಜಾಲ್ಲೂರು, ಸ.ಹಿ.ಪ್ರಾ.ಶಾಲೆ ಕೊಯಿಕುಳಿ ದುಗಲಡ್ಕ, ಸ.ಹಿ.ಪ್ರಾ.ಶಾಲೆ ಎಡಮಂಗಲ, ಸ.ಹಿ.ಪ್ರಾ.ಶಾಲೆ ಮುರುಳ್ಯ, ಸ.ಹಿ.ಪ್ರಾ.ಶಾಲೆ ಏನೆಕಲ್ಲುಸ.ಹಿ.ಪ್ರಾ.ಶಾಲೆ ಪಾಂಡಿಗದ್ದೆ ಪಂಜ, ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಬೆಳ್ಳಾರೆ, ಶಾರದಾ ಸ.ಹಿ.ಪ್ರಾ.ಶಾಲೆ ಗೂನಡ್ಕ, ಜ್ಯೋತಿ ಪ್ರೌಢಶಾಲೆ ಪೆರಾಜೆ, ಸ.ಹಿ.ಪ್ರಾ.ಶಾಲೆ ನಾಗತೀರ್ಥ ಸೇರಿದಂತೆ 12 ಶಾಲೆಗಳಿಗೆ ಜ್ಞಾನ ದೀಪ ಗೌರವ ಶಿಕ್ಷಕರಿಗೆ ಕ್ಷೇತ್ರದ ವತಿಯಿಂದ ಆಯ್ಕೆ ಮಾಡಿ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಕಛೇರಿ ಸಿಬ್ಬಂದಿ ಶ್ರೀಮತಿ ದಿವ್ಯರವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ದಿವ್ಯರವರು ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading