Ad Widget

ಪಂಜದಲ್ಲಿ 🎀ದುರ್ಗಾ ಮೆಟಲ್ಸ್ 🎀ಪಂಚಶ್ರೀ ಬ್ರಾಂಡ್ ಪ್ಯಾಷನ್ 🎀ಪರಿವಾರ್ ಸ್ವೀಟ್ಸ್ ಕಾರ್ನರ್ ಶುಭಾರಂಭ

ಪಂಜ ಪೇಟೆಯ ಹೃದಯ ಭಾಗದಲ್ಲಿರುವ ಪಂಜ ಗ್ರಾಮ ಪಂಚಾಯತ್ ನ ನೂತನ ಕಟ್ಟಡ ಪಂಡಿತ್ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದಲ್ಲಿ ದುರ್ಗಾ ಮೆಟಲ್ಸ್, ಪಂಚಶ್ರೀ ಬ್ರಾಂಡ್ ಪ್ಯಾಷನ್, ಪರಿವಾರ್ ಸ್ವೀಟ್ಸ್ ಕಾರ್ನರ್ ಆ.22 ರಂದು ಶುಭಾರಂಭ ಗೊಂಡಿತು.
ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ಮಳಿಗೆಗಳನ್ನು ಪಂಜ ಗ್ರಾ. ಪಂ. ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ, ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪಂಜ ಸಂತ ರೀತಮ್ಮ ಚರ್ಚ್ ಧರ್ಮಗುರುಗಳಾದ ಅಮಿತ್ ರೊಡ್ರಿಗಸ್ , ಪಟೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ ಕಿನ್ನಿಕುಮೇರಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಸೀತಾರಾಮ ಎಣ್ಣೆಮಜಲು, ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ನಾಗಮಣಿ ಕೆದಿಲ, ಪಂಜ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕರಿಮಜಲು, ಪಂಜ ಅಟೋ ಚಾಲಕ ಮಾಲಕರ ಸಂಘ, ಬಿ.ಎಂ.ಎಸ್ ಘಟಕ ಅಧ್ಯಕ್ಷ ಲಕ್ಷ್ಮೀನಾರಾಯಣ
ನೆಕ್ಕಿಲ ಹಾಗೂ ದುರ್ಗಾ ಮೆಟಲ್ಸ್ ಮಾಲಕ ಮೋಹನದಾಸ್ ಎಣ್ಣೆ ಮಜಲು, ಪಂಚಶ್ರೀ ಬ್ರಾಂಡ್ ಪ್ಯಾಷನ್ ಮಾಲಕರಾದ ಗೋಪಾಲ ಎಣ್ಣೆಮಜಲು, ಗುರುಪ್ರಸಾದ್ ಪಂಜ, ಪ್ರಶಾಂತ್ ಪೂಜಾರಿಕೋಡಿ, ಪರಿವಾರ್ ಸ್ವೀಟ್ಸ್ ಕಾರ್ನರ್ ಮಾಲಕರಾದ ಸುಂದರ ಗೌಡ ಎಣ್ಣೆಮಜಲು, ಪ್ರಶಾಂತ್ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನದಾಸ್ ಎಣ್ಣೆಮಜಲು, ಸ್ವಾಗತಿಸಿದರು. ಶಶಿಧರ ಪಳಂಗಾಯ ನಿರೂಪಿಸಿದರು. ಗೋಪಾಲ ಎಣ್ಣೆ ಮಜಲು ವಂದಿಸಿದರು. ದುರ್ಗಾ ಮೆಟಲ್ಸ್ ನಲ್ಲಿ ಪ್ಲೈವುಡ್, ಗ್ಲಾಸ್, ಇನ್ ಟೀರಿಯರ್ ಡಿಸೈನ್, ಹಾರ್ಡ್ ವೇರ್, ಪಿ.ವಿ.ಸಿ., ಫ್ಲಶ್ ಬಾಗಿಲುಗಳು ದೊರೆಯುತ್ತದೆ.
ಪಂಚಶ್ರೀ ಬ್ರಾಂಡ್ ಪ್ಯಾಷನ್ನಲ್ಲಿ ಉತ್ತಮ ದರ್ಜೆಯ ಪಾದರಕ್ಷೆ ಮತ್ತು ಬ್ರಾಂಡೆಡ್ ಕಂಪೆನಿಗಳ ರೆಡಿಮೇಡ್ ಬಟ್ಟೆಗಳು ದೊರೆಯುತ್ತದೆ. ಪರಿವಾರ್ ಸ್ವೀಟ್ಸ್ ಕಾರ್ನರ್ ನಲ್ಲಿ ಶ್ರೇಷ್ಠ ಗುಣಮಟ್ಟದ ಸಿಹಿ ಮತ್ತು ಖಾರದ ತಿಂಡಿ ತಿನಿಸುಗಳು ದೊರೆಯುತ್ತದೆ ಎಂದು ದುರ್ಗಾ ಮೆಟಲ್ಸ್ ಮಾಲಕರಾದ ಶ್ರೀಮತಿ ದಿವ್ಯ ಮತ್ತು‌ ಮೋಹನದಾಸ್ ಎಣ್ಣೆಮಜಲು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading