ಬಾಳಿಲ : ವಿದ್ಯಾರ್ಥಿ ಸರಕಾರದ ಚುನಾವಣೆ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ಸರಕಾರದ ರಚನೆಗಾಗಿ ಚುನಾವಣೆ ನಡೆಯಿತು. ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ, ಚುನಾವಣಾ ಸಂಹಿತೆ ಜಾರಿ, ಪ್ರಚಾರ, ಅಭ್ಯರ್ಥಿಗಳೊಂದಿಗೆ ಮುಖಾಮುಖಿ ಪ್ರಕ್ರಿಯೆಗಳು ನಡೆದವು. ವಿದ್ಯಾರ್ಥಿ ಮತದಾರರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದರು.

. . . . . . . . .

 SPL ಸ್ಥಾನಕ್ಕೆ ಐದು ಅಭ್ಯರ್ಥಿಗಳು, ASPL ಹುಡುಗರ ವಿಭಾಗಕ್ಕೆ ಮೂರು ಅಭ್ಯರ್ಥಿಗಳು, ASPL ಹುಡುಗಿಯರ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಜೂ.13 ಶನಿವಾರದಂದು ಚುನಾವಣೆ ನಡೆಯಿತು. ಎರಡು ಮತಗಟ್ಟೆಗಳನ್ನು ರಚಿಸಲಾಗಿದ್ದು, ಪೂರ್ವ ಮತಗಟ್ಟೆ ಮತ್ತು ಪಶ್ಚಿಮ ಮತಗಟ್ಟೆ ಎಂದು ಗುರುತಿಸಲಾಯಿತು. ಮತಪತ್ರ ನೀಡುವುದು, ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕುವುದರೊಂದಿಗೆ ಚಿನ್ಹೆಯನ್ನು ಮುದ್ರಿಸಿರುವ ಮತಪತ್ರವನ್ನು ನೀಡಲಾಯಿತು. ವಿದ್ಯಾರ್ಥಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಏಜೆಂಟರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿ ಮತದಾರರ ಎದುರಿನಲ್ಲಿ ಮತಗಳ ಎಣಿಕೆ ಪ್ರಾರಂಭಗೊಂಡಿತು. ಮೊದಲಿಗೆ 25ರ ಮತಪತ್ರಗಳ ಕಟ್ಟುಗಳಾಗಿ ವಿಂಗಡಿಸಲಾಯಿತು. 4 ಸುತ್ತುಗಳ ಮತಗಳ ಎಣಿಕೆ 2 ಮೇಜುಗಳಲ್ಲಿ ಸುಸೂತ್ರವಾಗಿ ನಡೆಯಿತು. ಪ್ರತಿ ಸುತ್ತುಗಳ ಫಲಿತಾಂಶವನ್ನು ಕರಿಹಲಗೆಯಲ್ಲಿ ಪ್ರಕಟಿಸಲಾಗುತ್ತಿತ್ತು. ಅಸಿಂಧು ಮತಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.

. . . . . . .

ಅಂತಿಮ ಫಲಿತಾಂಶ ಹೊರ ಬಂದಾಗ ಶಾಲಾ ಮುಖಂಡರುಗಳಾಗಿ ರಕ್ಷಾ ಆರ್.ಕೆ 10ಬಿ, ಶಾಲಾ ಉಪ ಮುಖಂಡರಾಗಿ ಹುಡುಗರ ವಿಭಾಗದಲ್ಲಿ ಸೋವಿತ್ 9ಎ, ಉಪ ಮುಖಂಡಳಾಗಿ ಹುಡುಗಿಯರ ವಿಭಾಗದಲ್ಲಿ ಅಕ್ಷತಾ.ಎಸ್ ನಾಯ್ಕ್ 9ಬಿ ಬಹುಮತದಿಂದ ಆಯ್ಕೆಯಾಗಿದ್ದರು. ಪ್ರಧಾನ ಚುನಾವಣಾಧಿಕಾರಿ ಆಗಿರುವ ಶಾಲಾ ಮುಖ್ಯ ಶಿಕ್ಷಕರಾದ ಉದಯಕುಮಾರ್ ರೈ ಎಸ್ ಫಲಿತಾಂಶ ಘೋಷಿಸಿ, ವಿಜೇತರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಶಾಲಾ ಶಿಕ್ಷಕ ಸಿಬ್ಬಂದಿಗಳು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದರು.

ನಂತರ ನಡೆದ ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳ ಸಭೆಯಲ್ಲಿ ಸ್ಪೀಕರ್ ಆಗಿ ದೀಕ್ಷಾ.ಪಿ 10 ಎ, ವಿಪಕ್ಷದ ನಾಯಕನಾಗಿ ಜೀವಿತ್ ಡಿ.ಎನ್ 10ಬಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading